janadhvani

Kannada Online News Paper

ರಸ್ತೆಯಲ್ಲಿ ನಮಾಝ್: ಪ್ರಕರಣದ ತನಿಖೆ ಸ್ಥಗಿತ- ಆಯುಕ್ತರಿಂದ ಮುಸ್ಲಿಮ್ ನಿಯೋಗಕ್ಕೆ ಭರವಸೆ

ಪೋಲೀಸು ಆಯುಕ್ತರು ಸದರಿ ಪ್ರಕರಣದಲ್ಲಿ ತನಿಖೆ ಸ್ಥಗಿತ ಗೊಳಿಸಿ ಪ್ರಕರಣ ಮುಕ್ತಾಯ ಗೊಳಿಸಿದುವುದಾಗಿ ಭರವಸೆ ನೀಡಿದ್ದಾಗಿ ನಿಯೋಗ ವ್ಯಕ್ತಪಡಿಸಿದೆ.

ಮಂಗಳೂರು: ಮಸೀದಿಯ ಮುಂಬಾಗದಲ್ಲಿ ನಮಾಜು ನಿರ್ವಹಿಸಿದವರ ವಿರುದ್ಧ ದಾಖಲಿಸಲಾದ ಸುಮೊಟೋ ಪ್ರಕರಣವನ್ನು ಸ್ಥಗಿತಗೊಳಿಸುವುದಾಗಿ ಪೋಲೀಸ್ ಆಯುಕ್ತರಿಂದ ಭರವಸೆ ಲಭಿಸಿದೆ.

ಇತ್ತೀಚೆಗೆ ಮಂಗಳೂರು ಕಂಕನಾಡಿ ಮಸೀದಿ ಹೊರಾಂಗಣದಲ್ಲಿ ಜುಮಾ ನಮಾಝ್ ವೇಳೆಯಲ್ಲಿ ಮಸೀದಿಯಲ್ಲಿ ಜನ ಭರ್ತಿ ಆದ ನಂತರ ಭೇಟಿ ನೀಡಿದ ಕೆಲವು ವ್ಯಕ್ತಿಗಳು ರಸ್ತೆಯ ಬದಿಯಲ್ಲಿ ನಮಾಝ್ ನಿರ್ವಹಿಸಿದ್ದು, ಅದನ್ನು ಸ್ಥಳೀಯರೊಬ್ಬರು ವಿಡಿಯೋ ಚಿತ್ರೀಕರಿಸಿ ವೈರಲ್ ಮಾಡಿದ್ದರು.

ಈ ಬಗ್ಗೆ ಸುದ್ದಿಯಾದ ಕಾರಣದಿಂದ ಮಂಗಳೂರು ನಗರ ಪೊಲೀಸರು ನಮಾಝ್ ನಿರ್ವಹಿಸಿದ ವ್ಯಕ್ತಿಗಳ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ್ದು, ಪೊಲೀಸರ ಈ ನಡೆಗೆ ಮುಸ್ಲಿಮ್ ಸಮುದಾಯದ ಕಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಇಂದು ಮುಸ್ಲಿಮ್ ಮುಂದಾಳುಗಳು ನಿಯೋಗವೊಂದು ಪೋಲೀಸು ಆಯುಕ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ.

ಪೋಲೀಸು ಆಯುಕ್ತರು ಸದರಿ ಪ್ರಕರಣದಲ್ಲಿ ತನಿಖೆ ಸ್ಥಗಿತ ಗೊಳಿಸಿ ಪ್ರಕರಣ ಮುಕ್ತಾಯ ಗೊಳಿಸಿದುವುದಾಗಿ ಭರವಸೆ ನೀಡಿದ್ದಾಗಿ ನಿಯೋಗ ವ್ಯಕ್ತಪಡಿಸಿದೆ.

ನಿಯೋಗದಲ್ಲಿ ಕೊಡಿಚಲ್ ಇಬ್ರಾಹಿಮ್, ಕನಚೂರು ಮೋನು ಹಾಜಿ, ಕೆ.ಅಶ್ರಫ್ ಮಾಜಿ ಮೇಯರ್, ಎಂ.ಎಸ್. ಮೊಹಮ್ಮದ್, ಶಾಹುಲ್ ಹಮೀದ್, ಅಬ್ದುಲ್ ಲತೀಫ್, ಸಂಶುದ್ದೀನ್, ಅಬ್ದುಲ್ ರೌಫ್, ಸಿರಾಜ್ ಬಜ್ಪೆ, ನಿಸಾರ್ ಬಜ್ಪೆ, ವಹಾಬ್ ಕುದ್ರೋಳಿ, ಮೊಹಮ್ಮದ್ ಬಪ್ಪಳಿಕೆ, ರಫೀಕ್ ಕಣ್ಣೂರು, ಕಣ್ಣೂರು ಸಲೀಮ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com