ದೋಹಾ: ಕತಾರ್‌ನಲ್ಲಿ ಬಿಸಿಲ ತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕತಾರ್ ಸಾರ್ವಜನಿಕ ಆರೋಗ್ಯ ಸಚಿವಾಲಯ ಮತ್ತು ಕಾರ್ಮಿಕ ಸಚಿವಾಲಯವು ಸುರಕ್ಷತಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕತಾರ್ ಹವಾಮಾನ ಕೇಂದ್ರದ ವರದಿ ಪ್ರಕಾರ, ನಿವಾದಲ್ಲಿ ಈಗಾಗಲೇ ತಾಪಮಾನವು 43 ಡಿಗ್ರಿಗಳಿಗೆ ಏರಿದೆ.
ವಿದೇಶದಿಂದ ಹಿಂದಿರುಗುವವರು ಮತ್ತು ರಜೆಯ ನಂತರ ಕೆಲಸಕ್ಕೆ ಮರಳುವವರು ಮುಂಬರುವ ದಿನಗಳಲ್ಲಿ ಹವಾಮಾನಕ್ಕೆ ಹೊಂದಿಕೊಳ್ಳಲು ‘ಶೇ 20’ ಶಿಫಾರಸನ್ನು ಪಾಲಿಸಬೇಕು ಎಂದು ಸಚಿವಾಲಯಗಳು ತಿಳಿಸಿವೆ.
ಬಿಸಿಲಿನಲ್ಲಿ ಕೆಲಸ ಮಾಡುವವರು ಬಿಸಿಲ ತಾಪಕ್ಕೆ ಹೊಂದಿಕೊಳ್ಳುವ ತನಕ ಕೆಲಸದ ಸಮಯದ ಶೇಕಡಾ 20 ಕ್ಕಿಂತ ಹೆಚ್ಚು ಕಾಲ ತೀವ್ರವಾದ ಶಾಖದಲ್ಲಿ ಕೆಲಸ ಮಾಡದಂತೆ ಶಿಫಾರಸು ಮಾಡಲಾಗಿದೆ. ಕೆಲಸದ ಸ್ಥಳಗಳಲ್ಲಿ ಬೇಸಿಗೆ ರೋಗಗಳ ತಡೆಗಟ್ಟುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯ ಆದೇಶ ನೀಡಿದೆ.