ಮಂಗಳೂರು :SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ವ್ಯಾಪ್ತಿಯಲ್ಲಿ ಬರುವ ಕೊಣಾಜೆ ರೇಂಜಿಗೆ ಒಳಪಟ್ಟ ರೌಳತುಲ್ ಉಲೂಮ್ ಮದ್ರಸ ನ್ಯೂ ಪಡ್ಫು,ಹರೇಕಳ,ಇಲ್ಲಿನ ಒಂದನೇ ತರಗತಿಯ ವಿಧ್ಯಾರ್ಥಿನಿ ಅಬೂಬಕ್ಕರ್ ಸಿದ್ದೀಕ್ ಇವರ ಪುತ್ರಿ
ಶಾಝಿಯಾ ಬಾನು ಶಾಲೆಯೊಂದ ಆವರಣ ಗೋಡೆ ಮಗುಚಿ ಬಿದ್ದು ಅಲ್ಲಾಹನ ರಹ್ಮತಿಗೆ ಯಾತ್ರೆಯಾಗಿರುತ್ತಾಳೆ.
ವಿದ್ಯಾರ್ಥಿನಿಯ ಅಕಾಲಿಕ ನಿಧನಕ್ಕೆ SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ತೀವ್ರ ಸಂತಾಪ ಸೂಚಿಸುತ್ತದೆ.
ಮಗುವಿನ ಅಗಲಿಕೆಯನ್ನು ಸಹಿಸುವ ಸಹನಾ ಶಕ್ತಿಯನ್ನು ಅಲ್ಲಾಹನು ಪೋಷಕರಿಗೂ ಕುಟುಂಬಕ್ಕೂ ನೀಡಿ ಕರುಣಿಸಲಿ ಎಂಬ ದುಆದೊಂದಿಗೆ ಮಗುವಿಗಾಗಿ ಮತ್ತು ತಂದೆ -ತಾಯಿ ಕುಟುಂಬದ ಸಮಾಧಾನಕ್ಕಾಗಿ ಎಲ್ಲಾ ಮಸೀದಿ -ಮದ್ರಸಗಳಲ್ಲಿ ಪ್ರತ್ಯೇಕ ಪ್ರಾರ್ಥನೆ ನಡೆಸಬೇಕಾಗಿ SJM ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ K.H.U ಶಾಫಿ ಮದನಿ ಕರಾಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಗುಚಿ ಬಿದ್ದ ಆವರಣ ಗೋಡೆ
ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್ ವಾಲ್ ಮಗುಚಿ ಬಿದ್ದು ನ್ಯೂಪಡ್ಪು ನಿವಾಸಿ ಸಿದ್ದೀಖ್ ಜಮೀಲಾ ದಂಪತಿಗಳ ಪುತ್ರಿ ಶಾಝಿಯಾ ಬಾನು (7) ಮೃತಪಟ್ಟ ಘಟನೆ ಸೋಮವಾರ (ಮೇ 20) ಸಂಜೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.
ಘಟನೆಯ ವಿವರ
ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.
ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಮಗುಚಿ ಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.