ಉಳ್ಳಾಲ: ಪವಿತ್ರ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ಹಜ್,ಉಮ್ರಾ ಕರ್ಮಗಳ ವಿಧಿ ವಿಧಾನಗಳ ಬಗ್ಗೆ ಅರಿವು ಮೂಡಿಸುವ ತರಬೇತಿ ಶಿಬಿರ ಹಾಗೂ ಬೀಳ್ಕೊಡುಗೆ ಸಮಾರಂಭ ಕಿನ್ಯ ಬೆಳರಿಂಗೆ ಸುನ್ನೀ ಸೆಂಟರ್ ನಲ್ಲಿ ಯಶಸ್ವಿಯಾಗಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಸಮಿತಿ ಅಧ್ಯಕ್ಷ ಬಿ.ಎಂ ಇಸ್ಮಾಈಲ್ ಹಾಜಿ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ಹನೀಫ್ ಸಖಾಫಿ ಖುತುಬಿನಗರ ಉದ್ಘಾಟಿಸಿದರು.
ಹಜ್ ಯಾತ್ರೆಯ ಪ್ರಮುಖ ನೇತಾರ,ವಿದ್ವಾಂಸ ಹಾಜಿ ಉಸ್ಮಾನ್ ಸಅದಿ ಪಟ್ಟೋರಿ ತರಬೇತಿ ಶಿಬಿರ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಕಿನ್ಯ ಪ್ರದೇಶದಿಂದ ಈ ವರ್ಷ ಪ್ರಯಾಣ ಬೆಳೆಸುವ ಕೆ.ಎಂ ಮೂಸ ಹಾಜಿ ಖುತುಬಿನಗರ,ಕೆ.ಎಂ ಅಬ್ಬುಚ್ಚ ಚಾದಿಪಡ್ಪು,ಕೆ.ಐ ಮುಹಮ್ಮದ್ ಚಾಕಟ್ಟೆಪಡ್ಪು,ಕೆ.ಎಂ ಇಸ್ಮಾಈಲ್ ಸಾಗ್,ಎಂ.ಎ ಮುಹಮ್ಮದ್ ಬಷೀರ್ ಬೆಲಿಯಪಡ್ಪು,ಕೆ.ಎಂ ಇಸ್ಮಾಈಲ್ ಕುರಿಯ, ಅಬ್ದುರ್ರಹ್ಮಾನ್ ಬೆಳರಿಂಗೆ ರವರಿಗೆ ಬೀಳ್ಕೊಡುಗೆ ನೀಡಲಾಯಿತು.
ಮೀಂಪ್ರಿ ಸಯ್ಯಿದ್ ಅಲವಿ ತಂಙಳ್ ರವರು ಪ್ರಾರ್ಥನೆಗೆ ನೇತೃತ್ವ ನೀಡಿದರು.
ಸಮಾರಂಭದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ವೆಸ್ಟ್ ಜಿಲ್ಲಾ ಕಾರ್ಯದರ್ಶಿ ಎಂಕೆಎಂ ಇಸ್ಮಾಈಲ್ ಮೀಂಪ್ರಿ, ಸರ್ಕಲ್ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಸಾಗ್, ನಾಯಕರಾದ ಅಬ್ಬಾಸ್ ಹಾಜಿ ಎಲಿಮಲೆ,ವಿ.ಎ ಮುಹಮ್ಮದ್ ಮುಸ್ಲಿಯಾರ್ ಕೂಡಾರ,ಅಬ್ಬಾಸ್ ಖುತುಬಿನಗರ,ಅಬೂಬಕರ್ ಖುತುಬಿನಗರ,SჄS ಕಿನ್ಯ ಸರ್ಕಲ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ, ಸಾಂತ್ವನ ಕಾರ್ಯದರ್ಶಿ ಬಷೀರ್ ಲತೀಫಿ ಕುರಿಯ, ಮುಸ್ತಫಾ ಸಅದಿ ಕೂಡಾರ, ಅಶ್ರಫ್ ಅಕ್ಕರೆ ಮುಂತಾದವರು ಉಪಸ್ಥಿತರಿದ್ದರು.
SჄS ಕಿನ್ಯ ಸರ್ಕಲ್ ಅಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಸ್ವಾಗತಿಸಿ ಉಪಾಧ್ಯಕ್ಷ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ವಂದಿಸಿದರು.