ಅನಿವಾಸಿ ಕನ್ನಡಿಗರ ಸಂಘಟನೆಯಾದ ಕೆಸಿಎಫ್ ನ ದಶಮಾನೋತ್ಸವದ ಪ್ರಯುಕ್ತ ಡಿಸೇನಿಯಂ ಕಾರ್ಯಕ್ರಮ ಮೇ 19 ರಂದು ಅಡ್ಯಾರ್ ಗಾರ್ಡನ್ ನಲ್ಲಿ ಬೆಳಿಗ್ಗೆ 10ರಿಂದ ನಡೆಯಲಿದ್ದು ಕಾರ್ಯಕರ್ತರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್‌ವೈಎಸ್ ವೆಸ್ಟ್ ಜಿಲ್ಲಾಧ್ಯಕ್ಷ ವಿ.ಯು ಇಸ್ಹಾಕ್ ಝುಹ್ರಿ ಕರೆ ನೀಡಿದ್ದಾರೆ. ಈ ಪ್ರಯುಕ್ತ ಜಿಲ್ಲಾ ಎಸ್ ವೈ ಎಸ್ ಇಂದು ಅಡ್ಯಾರ್ ಶಾ ಗಾರ್ಡನ್ ನಲ್ಲಿ ವಿಶೇಷ ಸಭೆ ನಡೆಸಿತು.
ಡಿಸೇನಿಯಂ ಪ್ರಯುಕ್ತ 19 ರಂದು ಬೆಳಿಗ್ಗೆ 10 ಗಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಸಹಿತವಿರುವ ನಾಯಕರು ಭಾಗವಹಿಸಲಿದ್ದು, ಈ ಎಲ್ಲಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದ್ದಾರೆ.
ಬಶೀರ್ ಮದನಿ ಕೂಳೂರು ಸಭೆಯನ್ನು ಉದ್ಘಾಟಿಸಿದರು. ಸಭೆಯಲ್ಲಿ ಎಸ್‌ವೈಎಸ್ ರಾಜ್ಯ ನಾಯಕರಾದ ಮುಹಮ್ಮದಲಿ ಸಖಾಫಿ ಅಶ್ ಅರಿಯ್ಯ, ಖಲೀಲ್ ಮಾಲಿಕಿ ಬೋಳಂತೂರು, ಪ್ರಿಂಟೆಕ್ ಅಬ್ದುರ್ರಹ್ಮಾನ್ ಹಾಜಿ, ಆಸಿಫ್ ಹಾಜಿ ಕೃಷ್ಣಾಪುರ, ಹಾಫಿಳ್ ಯಾಕೂಬ್ ಸಅದಿ, ಬದ್ರುದ್ದೀನ್ ಅಝ್ಹರಿ ಕೈಕಂಬ, ತೌಸೀಫ್ ಸಅದಿ ಹರೇಕಳ, ಫಾರೂಕ್ ಶೇಡಿಗುರಿ,ರಝಾಕ್ ಭಾರತ್, ಇಸ್ಮಾಯೀಲ್ ಮಾಸ್ಟರ್, ಕಾಸಿಂ ಲತೀಫಿ, ಮಹಮೂದ್ ಸಅದಿ, ಬಶೀರ್ ಸಖಾಫಿ, ಇಸಾಕ್ ಉಳ್ಳಾಲ, ಅಬ್ದುಲ್ಲಾ ಕೊಳಕೆ,
ಹಾಗೂ ಎಸ್‌ವೈಎಸ್ ವೆಸ್ಟ್ ಜಿಲ್ಲಾ ಸದಸ್ಯರು ಉಪಸ್ಥಿತರಿದ್ದರು.