ಮಕ್ಕಾ: ಪವಿತ್ರ ರಂಝಾನ್ ಕೊನೆಯ ಹತ್ತು ತಲುಪಿದಾಗ, ಮಕ್ಕಾದಲ್ಲಿ ವಿಶ್ವಾಸಿಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ, ಖಿಯಾಮುಮುಲ್ಲೈಲ್ ಎಂಬ ವಿಷೇಶ ನಮಾಝ್ ಕೂಡ ನಿರ್ವಹಿಸಲಾಗುತ್ತದೆ.
ಸಾವಿರ ತಿಂಗಳುಗಳಿಗಿಂತ ಹೆಚ್ಚು ಶ್ರೇಷ್ಠ ಎಂದು ಪರಿಗಣಿಸಲಾದ ಲೈಲತುಲ್ ಖದ್ರ್ ರಾತ್ರಿಯನ್ನು ಈ ಕೊನೆಯ ಹತ್ತರಲ್ಲಿ ನಿರೀಕ್ಷಿಸಲಾಗುತ್ತದೆ.
ರಂಝಾನ್ ತಿಂಗಳಿನಲ್ಲಿ ಮಾತ್ರ ನಿರ್ವಹಿಸಲ್ಪಡುವ ತರಾವೀಹ್ ನಮಾಜಿನಲ್ಲಿ ಪವಿತ್ರ ಖುರ್‌ಅನ್ ಸಂಪೂರ್ಣ ಪಠಿಸಿ ಮುಗಿದ ನಂತರ ನಿರ್ವಹಿಸುವ ಖತಮುಲ್ ಖರ್‌ಆನ್ ಸಹ ಕೊನೆಯ ದಿನಗಳಲ್ಲಿ ನಿರ್ವಹಿಸಲಾಗುತ್ತದೆ.ಈ ಸದ್ಗುಣಗಳನ್ನು ಪಡೆಯಲು ವಿಶ್ವದಾದ್ಯಂತದ ವಿಶ್ವಾಸಿಗಳು ಮಕ್ಕಾಕ್ಕೆ ತಲುಪುತ್ತಿದ್ದಾರೆ.
ಇವರಿಗೆ ಬೇಕಾದ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸಲು ಭದ್ರತಾ ಇಲಾಖೆಯು ಸಿದ್ಧವಾಗಿದೆ ಎಂದು ಹೇಳಿದೆ.ವಿಶ್ವಾಸಿಗಳ ಸುಗಮ ಸಂಚಾರ ತಡೆಗೆ ಕಾರಣವಾಗುವ ಮಾರ್ಗಗಳಲ್ಲಿ ಮತ್ತು ಗೋಪುರ ದ್ವಾರಗಳಲ್ಲಿ ಪ್ರಾರ್ಥನೆಗಳಿಗೆ ಅನುಮತಿಸಲಾಗುವುದಿಲ್ಲ.
ಹೊಸ ಅಭಿವೃದ್ಧಿ ಯೋಜನೆ ನಡೆಯುತ್ತಿರುವ ಭಾಗದಲ್ಲಿ ಹೆಚ್ಚಿನ ಸೌಕರ್ಯವಿದ್ದು,ಆ ಜಾಗವನ್ನು ಪ್ರಾರ್ಥನೆಗೆ ಬಳಸಿಕೊಳ್ಳುವಂತೆ ಭದ್ರತಾ ವಿಭಾಗ ಸೂಚಿಸಿದೆ.
ನಗರದ ಎಲ್ಲಾ ಹೋಟೆಲ್ ಗಳು ಈಗಾಗಲೇ ಭರ್ತಿಯಾಗಿದೆ.ಆಡಳಿತಗಾರರು, ರಾಜ ಕುಟುಂಬ ಮತ್ತು ಉದ್ಯಮಿಗಳು ಸೇರಿದಂತೆ ಹಲವು ಪ್ರಮುಖರು ಮಕ್ಕಾಗೆ ತಲುಪುತ್ತಿದ್ದಾರೆ. ಸಾಮಾನ್ಯ ವಾಹನಗಳಿಗೆ ಹರಂ ಪರಿಸರದ ರಸ್ತೆಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ತ್ವವಾಫ್ ನಿರ್ವಹಿಸಲಾಗುವ ಕಅಬಾದ ಆವರಣದಲ್ಲಿ ರಾತ್ರಿಯ ನಮಾಝ್ ಮುಗಿಯುವ ವರೆಗೆ ಉಮ್ರಾ ಯಾತ್ರಾರ್ಥಿಗಳಿಗೆ ಮಾತ್ರ ಪ್ರವೇಶಾನುಮತಿ ನೀಡಲಾಗಿದೆ.