ರಿಯಾದ್: ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಘಟಕದ ವತಿಯಿಂದ ಬೃಹತ್ ಮಟ್ಟದ ಇಫ್ತಾರ್ ಕೂಟವು ಇತ್ತೀಚೆಗೆ ಇಲ್ಲಿಗೆ ಸಮೀಪದ ಎಕ್ಸಿಟ್ 18 ರ ನೋಫಾ ಇಸ್ತಿರಾಹ ದಲ್ಲಿ ನಡೆಯಿತು.
ಕೆಸಿಎಫ್ ಸೌದಿ ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರೂ ಇಫ್ತಾರ್ ಕೂಟದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ನಝೀರ್ ಕಾಷಿಪಟ್ಣ, ಬಳಿಕ ನಡೆದ ಸಾರ್ವಜನಿಕ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆಸಿಎಫ್ ರಿಯಾದ್ ಝೋನ್ ಅಧ್ಯಕ್ಷ ಹನೀಫ್ ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿದರು.
ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದಿರುವ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಮಸ್ಲಿಮರ ಸರ್ವತೋಮುಖ ಏಳಿಗಾಗಿ ಎಸ್ಎಸ್ಎಫ್ ನ ರಾಜ್ಯ ಸಮಿತಿಯು ಯೋಜನೆಯೊಂದನ್ನು ರೂಪಿಸಿಕೊಂಡಿದ್ದು ಈ ಯೋಜನೆಯ ಸಾರ್ವತ್ರಿಕ ಅನುಷ್ಠಾನಕ್ಕಾಗಿ ಈಗಾಗಲೇ “ಇಹ್ಸಾನ್ ಕರ್ನಾಟಕ” ಎಂಬ ವಿಶೇಷ ಸಮಿತಿಯನ್ನು ರಚಿಸಿಲಾಗಿದೆ. ಈ ಸಮಿತಿಯ ಮೇಲ್ನೋಟದಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಹತ್ತಾರು ಮದ್ರಸ ಹಾಗೂ ಶಾಲೆಗಳನ್ನು ತೆರೆದು ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಇಂತಹ ಸಾಮಾಜಿಕ ಕಳಕಳಿಯ ಪ್ರಯತ್ನಗಳನ್ನು ಬೆಂಬಲಿಸುವ ಉದ್ದೇಶದಿಂದ ಅನಿವಾಸಿ ಮುಸ್ಲಿಂ ಕನ್ನಡಿಗರ ವೇದಿಕೆಯಾದ ಕೆಸಿಎಫ್ ತನ್ನಿಂದಾದ ಗರಿಷ್ಠ ನೆರವನ್ನು “ಇಹ್ಸಾನ್ ಕರ್ನಾಟಕ” ಕ್ಕೆ ಒದಗಿಸುತ್ತಾ ಬಂದಿದ್ದು ಕಳೆದ ಅವಧಿಯಲ್ಲಿ ಸಂಘಟನೆಯ ನೆರವಿನೊಂದಿಗೆ ರಾಜ್ಯದಲ್ಲಿ ನಡೆದ ಅಭಿವೃದ್ಧಿ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಸಾರ್ವಜನಿಕರಿಗೆ ವಿವರಿಸಿದರು.
ಇದೇ ವೇಳೆ “ಗಲ್ಫ್ ಇಶಾರ” ಚಂದಾದಾರರಿಗಾಗಿ ಏರ್ಪಡಿಲಾಗಿದ್ದ “ಚಿನ್ನದ ನಾಣ್ಯ” ಕೊಡುಗೆಯ ಅದೃಷ್ಟಶಾಲಿ ಯನ್ನು ಚೀಟಿ ಎತ್ತುವ ಮೂಲಕ ವೇದಿಕೆಯಲ್ಲಿ ಘೋಷಿಸಲಾಯಿತು. ಗೊರ್ನಾತ ಸೆಕ್ಟರ್ ಗೊಳಪಟ್ಟ ಅಬ್ದುಲ್ಲಾ ಅಂಚಿನಡ್ಕ ಎಂಬವರು ಚಿನ್ನದ ನಾಣ್ಯ ಗಿಟ್ಟಿಸಿಕೊಂಡರು. ಜತೆಗೆ “ಇಫ್ತಾರ್” ಕಾರ್ಯಕ್ರಮದಲ್ಲಿ ಭಾಗವಹಿದ ಸಾರ್ವಜನಿಕರಿಗಾಗಿ ನಡೆಸಿದ “ಉಮ್ರಾ ಗಿಫ್ಟ್” ಡ್ರಾದಲ್ಲಿ ಇಮ್ರಾನ್ ಪಾಶ ವಿಜೇತರಾದರು. “ಮಂಗಳೂರು ಹಜ್ಜ್ ಗ್ರೂಪ್” ಕೊಡಮಾಡಿದ ಉಚಿತ ಟಿಕೆಟ್ ನ್ನು ಸಂಸ್ಥೆಯ ಮ್ಹಾಲಕ ನಝೀರ್ ಕಾಷಿಪಟ್ಣ ವಿಜೇತರಿಗೆ ಹಸ್ತಾಂತರಿಸಿದರು.
ಕೆಸಿಎಫ್ ಝೋನ್ ಕೋಶಾಧಿಕಾರಿ ಹಾಗೂ ಅಲ್ ಖಾದಿಸ ಕಾವಲಕಟ್ಟೆ ರಿಯಾದ್ ಸಮಿತಿ ಅದ್ಯಕ್ಷ ಇಸ್ಮಾಯಿಲ್ ಕಣ್ಣಂಗಾರ್, ಕೆಸಿಎಫ್ ಮುರೂಜ್ ಸೆಕ್ಟರ್ ಕೋಶಾಧಿಕಾರಿ ರಝಾಕ್ ಹಾಜಿ ಉಜಿರೆ, ಡಿಕೆಎಸ್ಸಿ ರಿಯಾದ್ ಘಟಕದ ಅಧ್ಯಕ್ಷ ಅಝೀಝ್ ಬಜ್ಪೆ, ಮಂಶರ್ ಅಕಾಡೆಮಿ ಗೇರುಕಟ್ಟೆ ರಿಯಾದ್ ಸಮಿತಿ ಹಾಗೂ ಕೆಸಿಎಫ್ ಹಾರ ಯೂನಿಟ್ ಅಧ್ಯಕ್ಷ ಅಬೂಬಕ್ಕರ್ ಸಾಲೆತ್ತೂರು, ಅಲ್ ಮದೀನತ್ತುಲ್ ಮುನವ್ವರ ಮೂಡಡ್ಕ ಇದರ ರಿಯಾದ್ ಸಮಿತಿ ಅಧ್ಯಕ್ಷ ದಾವೂದ್ ಕಜೆಮಾರ್, ಉಧ್ಯಮಿ ಲತೀಫ್ ಯುನಿವರ್ಸಲ್, ಮಲ್ಜ’ಅ್ ಉಜಿರೆ ರಿಯಾದ್ ಸಮಿತಿ ಹಾಗೂ ಕೆಸಿಎಫ್ ಬದೀಯ ಸೆಕ್ಟರ್ ಅಧ್ಯಕ್ಷ ಉಮರ್ ಅಳಕೆಮಜಲು, ಆರ್,ಎಸ್,ಸಿ ಮುಖಂಡ ಮುಜೀಬ್, ವಹೀದ್ ಮಂಗಳೂರು ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬತ್ತಾ ಸೆಕ್ಟರ್ ಅಧ್ಯಕ್ಷ ಇಲ್ಯಾಸ್ ಲತೀಫಿ ಕಿರಾಅತ್ ನಡೆಸಿದರು. ಸಯ್ಯಿದ್ ಜಾಫರ್ ಸಾದಿಕ್ ತಂಗಳ್ ದುಆ ನೆರವೇರಿಸಿದರು. ಕಾರ್ಯದರ್ಶಿ ಬಶೀರ್ ತಲಪ್ಪಾಡಿ ಆರಂಭದಲ್ಲಿ ಸ್ವಾಗತಿಸಿದರು. ಸಿದ್ದೀಕ್ ಸಖಾಫಿ ಪೆರುವಾಯಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.