ಚಿಕ್ಕಮಗಳೂರು: ಇಸ್ಲಾಮಿಕ್ ಎಜ್ಯುಕೇಶನ್ ಬೋರ್ಡ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಉಪ್ಪಳ್ಳಿ ಅಲ್-ಜಮಾಲಿಯ್ಯಃ ಹೈಯರ್ ಸೆಕೆಂಡರಿ ಮದ್ರಸದ 2024-25ನೇ ಶೈಕ್ಷಣಿಕ ವರ್ಷದ ಮದ್ರಸ ಪ್ರವೇಶೋತ್ಸವ “ಫತ್ಹೇ ಮುಬಾರಕ್” ಕಾರ್ಯಕ್ರಮವು ಇತ್ತೀಚೆಗೆ ಉಪ್ಪಳ್ಳಿ ಮದ್ರಸ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಿತು.
ಶಾಧುಲಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಉಸ್ಮಾನ್ ಹಂಡುಗುಳಿರವರ ಸಭಾಧ್ಯಕ್ಷತೆಯಲ್ಲಿ ನಡೆದ ಸದ್ರಿ ಕಾರ್ಯಕ್ರಮವನ್ನು ಎಸ್.ಎಂ.ಎ. ರಾಜ್ಯ ನಾಯಕರೂ, ಉಪ್ಪಳ್ಳಿ ಮಸೀದಿಯ ಗೌರವಾಧ್ಯಕ್ಷರೂ ಆದ ಯೂಸುಫ್ ಹಾಜಿ ಉದ್ಘಾಟಿಸಿದರು.
ಶೈಖುನಾ ತಾಜುಲ್ ಉಲಮಾ ರವರ ಪೌತ್ರ ಅಸ್ಸೆಯ್ಯಿದ್ ಸ್ವಾಲಿಹ್ ತಂಙಲ್ ರವರು ಪುಟಾಣಿ ಮಕ್ಕಳಿಗೆ ಅರಿವಿನ ಮೊದಲಾಕ್ಷರ ಬರೆಯಿಸಿದರು. ಮದ್ರಸ ಮುಖ್ಯೋಪಾಧ್ಯಾಯರಾದ ಕೊಂಬಾಳಿ ಕೆ.ಎಂ.ಎಚ್ ಝುಹುರಿ, ಅಲ್-ಅರ್ಷದಿ ರವರು ಅರಿವಿನ ಮಹತ್ವ ಹಾಗೂ ಅನಿವಾರ್ಯತೆಯ ಬಗ್ಗೆ ಹಿತವಚನ ನೀಡಿದರು.
ವೇದಿಕೆಯಲ್ಲಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಎಸ್.ಎಂ.ಕೆ.ಟಿ, ಕೋಶಾಧಿಕಾರಿ ಅಕ್ಬರ್ ಸಿ.ಎಂ., ಉಪಾಧ್ಯಕ್ಷರಾದ ಯು.ಎಚ್., ಅಬ್ದುರ್ರಹ್ಮಾನ್ ಹಾಜಿ, ಎಸ್ಸೆಸ್ಸೆಫ್ ಯೂನಿಟ್ ಅಧ್ಯಕ್ಷರಾದ ಸಲ್ಮಾನ್, ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.
ಮದ್ರಸ ಅದ್ಯಾಪಕರಾದ ತೌಫೀನ್ ಫಾಳಿಲಿ ಮಂಜೇಶ್ವರ ಹಾಗೂ ಜಲೀಲ್ ಸಅದಿ ಮೂರುಗೋಳಿ ಕಾರ್ಯಕ್ರಮ ನಿರೂಪಿಸಿದರು. ನಾಸಿರ್ ಸಖಾಫಿ ಪರಪ್ಪು ಸ್ವಾಗತಿಸಿ, ನಾಸಿರ್ ಮುಈನಿ ಸರಳಿಕಟ್ಟೆ ವಂದಿಸಿದರು.