ಹೊಸದಿಲ್ಲಿ: ಇಸ್ರೇಲ್‌ನೊಂದಿಗೆ ಸಂಪರ್ಕ ಹೊಂದಿರುವ ಮತ್ತು ಇರಾನ್ ವಶಪಡಿಸಿಕೊಂಡಿರುವ ಎಂಎಸ್‌ಸಿ ಏರೀಸ್ ಹಡಗಿನ ಭಾರತೀಯ ಸಿಬ್ಬಂದಿಯನ್ನು ಭೇಟಿ ಮಾಡಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡುವುದಾಗಿ ಇರಾನ್ ಭರವಸೆ ನೀಡಿದೆ.
ನೌಕರರ ಭದ್ರತೆಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇರಾನ್ ವಿದೇಶಾಂಗ ಸಚಿವ ಡಾ. ಹುಸೇನ್ ಅವರು ಅಮೀರ್ ಅಬ್ದುಲ್ಲಾಹಿಯಾನ್ ಅವರೊಂದಿಗೆ ಚರ್ಚೆ ನಡೆಸಿದಾಗ ಭೇಟಿ ಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.
ಭಾನುವಾರ ಸಂಜೆ, ಜೈಶಂಕರ್ ಅವರು ಇರಾನ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆಂದು ಮತ್ತು ಹಡಗಿನಲ್ಲಿರುವ 17 ಭಾರತೀಯ ಸಿಬ್ಬಂದಿಯ ಬಿಡುಗಡೆ ಮತ್ತು ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸರಕು ಸಾಗಣೆ ಹಡಗಿನಲ್ಲಿ 17 ಭಾರತೀಯರು ಇದ್ದಾರೆ. ಶನಿವಾರ, ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ದುಬೈನಿಂದ ಮುಂಬೈನ ನವಶೇವಾ ಬಂದರಿಗೆ ಬರುತ್ತಿದ್ದ ಹಡಗನ್ನು ಹಾರ್ಮುಜ್ ಜಲಸಂಧಿಯಲ್ಲಿ ವಶಪಡಿಸಿಕೊಂಡರು.
ಹಡಗು ಪ್ರಸ್ತುತ ಇರಾನ್‌ನ ಜಲಮೇರೆಯಲ್ಲಿದೆ . ಶೀಘ್ರದಲ್ಲೇ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಹಡಗನ್ನು ತಲುಪಿ ಸಿಬ್ಬಂದಿಯನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.