ಅಶ್ರಫ್ ಕಿನಾರ ಮಂಗಳೂರು
ಉಪಾಧ್ಯಕ್ಷ ರು ದಕ ಜಿಲ್ಲಾ ವಕ್ಪ್ ಸಲಹಾ ಸಮಿತಿ
ಮಾನ್ಯ ಪ್ರತಿಯೊಂದು ಸಂಘ ಸಂಸ್ಥೆಗಳು ಚಿಂತಿಸಬೇಕಾದ ಅನಿವಾರ್ಯ ಸಂದರ್ಭ ಲೋಕಸಭೆ ಚುಣಾವನೆಯಲ್ಲಿ ನಮ್ಮ ಭಾರತದ ಜಾತ್ಯತೀತ, ಶಾಂತಿ , ಸೌಹಾರ್ದತೆ ಪ್ರಜಾಪ್ರಭುತ್ವ ಉಳಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ, ತಿಳುವಳಿಕೆ ಇಲ್ಲದೆ ರಾಜಕೀಯ ದಾಹದಲ್ಲಿ ಮುಳುಗಿ ಜಾತಿ , ಜಾತಿ ಮದ್ಯೆ ನಡೆಯುವ ಎಲ್ಲಾ ಸಂಘರ್ಷ ಕ್ಕೆ ಸಂಘ ಸಂಸ್ಥೆಗಳ ಮೂಲಕ ಒಂದು ಪೂರ್ಣ ವಿರಾಮ ಹಾಕುವಂತಾಗಬೇಕು, ಅದಕ್ಕೆ ಸೂಕ್ತ ಸಂದರ್ಭವೊಂದು ಬಂದೊಗಿದೆ.
ಇಲ್ಲಿ ಈ ನಾಡಿನ ಏಳಿಗೆಗಾಗಿ ಮೇಲಿನ ವಿಷಯಗಳಲ್ಲಿ ಯಾರು ಸಮಾಜಕ್ಕೆ ದೇಶಕ್ಕೆ ಭದ್ರ ಬುನಾದಿ ಹಾಕುವ ಅಭ್ಯರ್ಥಿಗಳಿದ್ದಾರಾ ಅವರನ್ನು ಗೆಲ್ಲಿಸುವುದು ನಮ್ಮ ಕರ್ತವ್ಯ. ನಮ್ಮ ಮೌನ ಅನ್ಯಾಯ , ದೇಶದ ನಾಶಕ್ಕೆ ಕಾರಣವಾಗಬಾರದು. ಆದುದರಿಂದ ಪ್ರತಿಯೊಂದು ಸಂಘ ಸಂಸ್ಥೆಗಳ ಘಟಕಗಳು ನಿಮ್ಮ ಮೊಹಲ್ಲದಲ್ಲಿ 100% ಮತದಾನವಾಗುವಂತೆ ನೋಡಿಕೊಳ್ಳಿ, ಮತದಾನದಂದು ನಿಮ್ಮ ಪ್ರತಿಯೊಂದು ಏರಿಯಕ್ಕೂ ತಂಡವನ್ನು ರಚಿಸಿ ಮತದಾರ ಪಟ್ಟಿ ಯಲ್ಲಿ ಯಾರು ಬಾಕಿಯಾಗದಂತೆ ನೋಡಿಕೊಳ್ಳಿ,. ಈ ದೇಶದ ಉಳಿವಿಗಾಗಿ ಶ್ರಮಿಸಬೇಕಾದ ಅಭ್ಯರ್ಥಿ ಗಳ ಗೆಲುವಿಗಾಗಿ ಶ್ರಮಿಸಿ.
ಆದುದರಿಂದ ಪ್ರತಿಯೊಂದು ಜಮಾಅತ್ ಕಮಿಟಿಗಳು ನಾಡಿನ ಸರ್ವ ಸಂಘಸಂಸ್ಥೆಗಳುಉಳಿದ ಬೆರಳೆಣಿಕೆಯಷ್ಟು ದಿನಗಳಲ್ಲಿ ಸಂಪೂರ್ಣ ಭಾಗಿಯಾಗೋಣ.