ಮಂಜನಾಡಿ: ಅಲ್ ಮದೀನಾ ಯತೀಮ್ ಖಾನ ಮಂಜನಾಡಿ ಇದರ ಸೌದಿ ಅರೇಬಿಯಾ ನ್ಯಾಷನಲ್ ಸಮೀತಿಯ ಮಹಾ ಸಭೆಯು ಇತ್ತೀಚೆಗೆ Zoom App ಮೂಲಕ ನಡೆಯಿತು.
ನ್ಯಾಷನಲ್ ಸಮೀತಿಯ ಅಧ್ಯಕ್ಷರಾದ A.R. ಅಬ್ದುರಹ್ಮಾನ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇರಿದ ಗಣ್ಯರಿಗೆ ನ್ಯಾಷನಲ್ ಸಮೀತಿಯ ಜೊತೆ ಕಾರ್ಯದರ್ಶಿ ಮುಸ್ತಫಾ ಲತೀಫಿ ಸ್ವಾಗತವನ್ನು ಕೋರಿದರು. ಸಭೆಯನ್ನು ಅಲ್ ಮದೀನಾ ಮ್ಯಾನೇಜರ್ ಬಹುವನ್ಯರಾದ ಉಸ್ತಾದ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿದರು. ಸಭೆಯಲ್ಲಿ ಕಳೆದ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರವನ್ನು ನ್ಯಾಷನಲ್ ಸಮೀತಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಡಿಕಲ್ ಮಂಡಿಸಿದರು. 2024 -2026 ಸಾಲಿನ ಹೊಸ ಸಮೀತಿಯನ್ನು ಈ ಕೆಳಗಿನಂತೆ ಪುನರ್ರಚಿಸಲಾಯಿತು.
ಅಧ್ಯಕ್ಷರು: ಎ ಆರ್ ಅಬ್ದುರಹ್ಮಾನ್ ಮದನಿ, ಪ್ರಧಾನ ಕಾರ್ಯದರ್ಶಿ: ಅಬೂಬಕ್ಕರ್ ಸಿದ್ದೀಕ್ ಮೊರ್ಲ, ಫೈನಾನ್ಸ್ ಕಾರ್ಯದರ್ಶಿ :ಮುಸ್ತಫ ಲತೀಫಿ ಕಲ್ಕಕಟ್ಟ, ಗೌರವ ಅಧ್ಯಕ್ಷರು: ಅಬ್ದುಲ್ಲಾ ಹಾಜಿ ಎನ್ ಎಸ್, ಉಪಾಧ್ಯಕ್ಷರು ಬಶೀರ್ ಹಾಜಿ ತೋಟಾಲ್, ಕೆ ಪಿ ಅಬುಲ್ಲಾ ಹಾಜಿ, ಜೊತೆ ಕಾರ್ಯದರ್ಶಿ ಇಬ್ರಾಹಿಂ ಪಡಿಕಲ್, ಸತ್ತಾರ್ ಉಚ್ಚಿಲ, ಸಂಚಾಲಕರು ಗಫೋರ್ ಹಾಜಿ ಸಜಿಪ, ಹಸೈನಾರ್ ಮದನಿ, ಕಾರ್ಯಕಾರಿಣಿ ಸದಸ್ಯರು: ಸ್ವಾಲಿ ಬೆಳ್ಳಾರೆ, ಖಾದರ್ ಕಟ್ಟೆಮಾರ್, ಅಬ್ದುರಹ್ಮನ್ ಹಾಜಿ ತಬೂಕ್, ಸುವೈಸ್ ದೀರಾ ರಿಯಾದ್, ಉಸ್ಮಾನ್ ಮಂಜನಾಡಿ, ಮೂಸ ಹಾಜಿ ಜುಬೈಲ್, ಬಾವ ಮಂಜೇಶ್ವರ, ಹುಸೈನ್ ಕಟ್ಟೆಮಾರ್, ಇಬ್ರಾಹಿಂ ಕನ್ನಂಗಾರ್, ತಾಜು ಮದೀನಾ, ಇಕ್ಬಾಲ್ ಮದನಿ ತಾಯಿಫ್, ಆಬಿದ್ ಕೊಡಗು, ನೌಶಾದ್ ಹರಾರ್, ಇಸ್ಮಾಯಿಲ್ ಪೊಯ್ಯಲ ದಮಾಂ, ಇಕ್ಬಾಲ್ ಮಲ್ಲೂರು, ಹಮೀದ್ ಹಾಜಿ ಮಕ್ಕ, ಬಶೀರ್ ಸಅದಿ ಹಾಯಿಲ್ ತದನಂತರ ನಡೆದ ಚರ್ಚೆಯಲ್ಲಿ ಅಲ್ ಮದೀನಾ ಮಂಜನಾಡಿಗೆ ಪವಿತ್ರ ರಂಜಾನ್ ನಲ್ಲಿ ನೀಡುವ ಅಕ್ಕಿಯ ಮೊತ್ತವನ್ನು ಈ ವರ್ಷವು ಅಧಿಕ ಪ್ರಮಾಣದಲ್ಲಿ ಕಾರ್ಯಕರ್ತರಿಂದ ಸಂಗ್ರಹ ಮಾಡಿ ನೀಡಲು ತೀರ್ಮಾನಿಸಲಾಯಿತು. ಮುಸ್ತಫಾ ಲತೀಫಿ ಕಾರ್ಯಕ್ರಮವನ್ನು ನಿರೂಪಿಸಿದರು.