ಜಿದ್ದಾ: ರಂಜಾನ್ ಮಾಸ ಆರಂಭವಾಗುತ್ತಿದ್ದಂತೆ ವಾಹನ ಅಪಘಾತಗಳಿಂದ ಮರಣ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿದೆ. ಉಪವಾಸ ಮುರಿಯುವ ಮೊದಲು ಮತ್ತು ಬೆಳಗಿನ ಪ್ರಾರ್ಥನೆಯ ಮೊದಲು ಸಾಯಂ ಸಮಯದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತವೆ. ನಿದ್ದೆ ಮತ್ತು ಮಳೆಯ ಪರಿಸ್ಥಿತಿಯಲ್ಲಿ ದೂರದವರೆಗೆ ವಾಹನ ಚಲಾಯಿಸುವುದರಿಂದ ಅಪಘಾತಗಳ ಸಂಖ್ಯೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದು ಅಧಿಕಾರಿಗಳು ನೆನಪಿಸಿದರು.
ಹಿಂದಿನ ತಿಂಗಳುಗಳಿಗೆ ಹೋಲಿಸಿದರೆ ರಂಜಾನ್ ತಿಂಗಳಲ್ಲಿ ರಸ್ತೆ ಅಪಘಾತಗಳಿಂದಾಗಿ ಮರಣ ಸಂಖೈಯಲ್ಲಿ ಗಮನಾರ್ಹ ಹೆಚ್ಚಳ ದಾಖಲಾಗಿದೆ. ಹೆಚ್ಚಿನ ಅಪಘಾತಗಳು ಉಪವಾಸವನ್ನು ಮುರಿಯುವ ಮೊದಲು ಮತ್ತು ಬೆಳಗಿನ ಪ್ರಾರ್ಥನೆಯ ಮೊದಲ ಸಮಯಗಳಲ್ಲಿ ಸಂಭವಿಸುತ್ತವೆ. ರಂಜಾನ್ ಆರಂಭಗೊಂಡ ಕೆಲವೇ ದಿನಗಳಲ್ಲಿ, ಉಪವಾಸ ಮುರಿಯುವ ಸಮಯದಲ್ಲಿನ ಅಪಘಾತದ ಮರಣಗಳು ಶೇಕಡಾ 27 ರಷ್ಟು ಹೆಚ್ಚಾಗಿದೆ. ಅಲ್ಲದೆ, ಬೆಳಗಿನ ಪ್ರಾರ್ಥನೆಗೂ ಮುಂಚಿನ ಅಪಘಾತದ ಮರಣಗಳಲ್ಲಿ ಶೇ.10ರಷ್ಟು ಹೆಚ್ಚಳವಾಗಿದೆ.
ರಂಜಾನ್ ಸಮಯದಲ್ಲಿ, ದೇಶದ ವಿವಿಧ ಭಾಗಗಳಿಂದ ಮಕ್ಕಾ ಮತ್ತು ಮದೀನಾಗಳಿಗೆ ವಾಹನ ಚಲಾಯಿಸುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ವಾರಾಂತ್ಯದಲ್ಲಿ ಈ ರೀತಿ ಆಗಮಿಸುವವರ ಸಂಖ್ಯೆ ಮತ್ತೆ ಏರಿಕೆಯಾಗಲಿದೆ. ಇದರಿಂದಾಗಿ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚಾಗಲಿದೆ.
ಹಗಲಿನಲ್ಲಿ ಉಪವಾಸ ಹಿಡಿದು ಮತ್ತು ರಾತ್ರಿ ನಿದ್ದೆ ತೊರೆದು ದೂರದ ಪ್ರಯಾಣ ಮಾಡುವುದು ಅಪಘಾತಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ದೇಶದ ಹಲವೆಡೆ ಮಳೆ ಮತ್ತು ಗಾಳಿ ಅಪಘಾತಗಳನ್ನು ಹೆಚ್ಚಿಸಲಿದೆ. ಆದ್ದರಿಂದ ವಾಹನ ಸವಾರರು ಅಗತ್ಯ ಮುನ್ನೆಚ್ಚರಿಕೆಯನ್ನು ಕೈಗೊಂಡು ಎಚ್ಚರ ವಹಿಸುವಂತೆ ರಸ್ತೆ ಸುರಕ್ಷತಾ ಪ್ರಾಧಿಕಾರ ತಿಳಿಸಿದೆ.