ಜಿದ್ದಾ: ಜಿದ್ದಾದ ಹೊಸ ಕಿಂಗ್ ಅಬ್ದುಲ್ ಅಝೀಝ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟ ಪ್ರಾರಂಭಿಸಿದೆ.
ಸೌದಿ ಏರ್ಲೈನ್ಸ್ ನ ಎಸ್.ವಿ. 1291 ವಿಮಾನವು ಅಲ್ ಜೌಫ್‌ನ ಖುರಯಾತ್‌ನ ಆಂತರಿಕ ವಿಮಾನ ನಿಲ್ದಾಣಕ್ಕೆ ಹಾರಿತು.
ಸೌದಿ ಏರ್ಪೋರ್ಟ್ ಅಥಾರಿಟಿಯ ನೌಕರರು ಪ್ರಥಮ ಪ್ರಯಾಣಿಕರಿಗೆ ಶುಭಾಷಯ ಕೋರಲು ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಮೊದಲ ದಿನ 1ನೇ ಸಂಖ್ಯೆಯ ಗೇಟನ್ನು ಮಾತ್ರ ತೆರೆಯಲಾಗಿತ್ತು. ಮುಂದಿನ ವಾರ ಮತ್ತೆ ಎರಡು ಗೇಟ್ ಗಳನ್ನು ತೆರಯಲಾಗುವುದು. ಮುಂದಿನ ಆಗಸ್ಟ್ ವೇಳೆಗೆ ಆರು ಗೇಟ್‌ಗಳು ಮತ್ತು ನವೆಂಬರ್ ವೇಳೆಗೆ ಹದಿನೇಳು ಗೇಟ್‌ಗಳು ಕಾರ್ಯಾಚರಿಸಲಿದೆ.
ಹಳೆಯ ವಿಮಾನನಿಲ್ದಾಣದಿಂದ ಹೊಸ ವಿಮಾನನಿಲ್ದಾಣಕ್ಕೆ ಪ್ರಯಾಣವನ್ನು ಹಂತ-ಹಂತವಾಗಿ ವರ್ಗಾಯಿಸಲಾಗುವುದು.ಈ ವರ್ಷದ ಅಂತ್ಯದ ವೇಳೆಗೆ, ದೇಶೀಯ ವಿಮಾನಯಾನಗಳು ಹೊಸ ವಿಮಾನ ನಿಲ್ದಾಣದ ಮೂಲಕ ಹಾರಾಟ ನಡೆಸಲಿವೆ.
ಅಂತರರಾಷ್ಟ್ರೀಯ ಯಾತ್ರೆಗಳು ಸೇರಿದಂತೆ ಎಲ್ಲಾ ಹಾರಾಟಗಳು 2019 ಮಾರ್ಚ್ ಒಳಗೆ ಹೊಸ ವಿಮಾನ ನಿಲ್ದಾಣದ ಮೂಲಕ ನಡೆಯಲಿದೆ. ಆ ನಂತರ ಎಲ್ಲಾ 46 ಗೇಟ್‌ಗಳು ಕಾರ್ಯಾಚರಿಸಲಿದೆ.
ಹೊಸ ಜಿದ್ದಾ ಏರ್ ಪೋರ್ಟ್ ವಿಶ್ವದ ಅತಿದೊಡ್ಡ ವಾಯುಯಾನ ಕೇಂದ್ರಗಳಲ್ಲಿ ಒಂದಾಗಿದೆ.ವಾರ್ಷಿಕ 80 ಮಿಲಿಯನ್ ಗಿಂತಲೂ ಅಧಿಕ ಪ್ರಯಾಣಿಕರನ್ನು ನಿಭಾಯಿಸಲು ಈ ವಿಮಾನ ನಿಲ್ದಾಣಕ್ಕೆ ಸಾಧ್ಯವಾಗಲಿದೆ.
ಪ್ರಸ್ತುತ 46 ಏರೋಬ್ರಿಡ್ಜ್ ಇದ್ದರೆ, ಭವಿಷ್ಯದಲ್ಲಿ 96 ಸೇತುವೆಗಳನ್ನು ಸ್ಥಾಪಿಸಲಾಗುವುದು.36 ಶತಕೋಟಿ ಬಿಲಿಯನ್ ರಿಯಾಲ್ ವೆಚ್ಚದಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ.