ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಜುಬೈಲ್ ಘಟಕದ 29 ನೇ ವಾರ್ಷಿಕ ಮಹಾಸಭೆಯು 07, ಫೆಬ್ರವರಿ 2024 ಗುರುವಾರ ಅಸ್ತಮಿಸಿದ ಗುರುವಾರ ರಾತ್ರಿ ಮರ್ಹೂಂ ಹಾರಿಸ್ ದರ್ಬೆ ವೇದಿಕೆ ಕುಕ್ ಝೋನ್ ಅಡಿಟೋರಿಯಂ ನಲ್ಲಿ ಘಟಕದ ಅಧ್ಯಕ್ಷರಾದ ಜನಾಬ್ ಅಶ್ರಫ್ ನಾಳರವರ ಅಧ್ಯಕ್ಷತೆಯಲ್ಲಿ ಬಹಳ ಯಶಸ್ವಿಯಾಗಿ ಜರಗಿತು.
ಪ್ರಾರಂಭದಲ್ಲಿ ಡಿಕೆಯಸ್ಸಿ ಯೂತ್ ವಿಂಗ್ ಗೌರವ ಅಧ್ಯಕ್ಷರಾದ ಪಿ.ಎಚ್. ಇಸ್ಮಾಯೀಲ್ ಉಸ್ತಾದ್ ರವರ ನೇತೃತ್ವದಲ್ಲಿ ಜಲಾಲಿಯ ಮಜ್ಲಿಸ್ ಹಾಗು ದುಆ ದೊಂದಿಗೆ ಪ್ರಾರಂಭಗೊಂಡ ಮಹಾಸಭೆಯಲ್ಲಿ ಮುಹಮ್ಮದ್ ತನ್ವೀರ್ ಪವಿತ್ರ ಖುರ್ ಆನ್ ನ ಸೂರ: ಜುಮುಅದ ಕೊನೆಯ ಮೂರು ಆಯತ್ ಪಠಿಸಿದರು.
ಕೆ. ಎಚ್. ಮುಹಮ್ಮದ್ ರಫೀಖ್ ಸಭೆಗೆ ಆಗಮಿಸಿದ ಅತಿಥಿಗಳು ಹಾಗೂ ಸದಸ್ಯರನ್ನು ಆತ್ಮಾರ್ಥವಾಗಿ ಸ್ವಾಗತಿಸಿದರು. ಪ್ರಾಸ್ತಾವಿಕ ಭಾಷಣದಲ್ಲಿ ಯು.ಡಿ. ಅಬ್ದುಲ್ ಹಮೀದ್ ಉಳ್ಳಾಲ ರವರು ಡಿಕೆಯಸ್ಸಿಯ ಅಭಿವ್ರಧ್ಧಿ ಕಾರ್ಯಕ್ರಮಗಳ ಅವಲೋಕನದ ಬಗ್ಗೆ ವಿವರಿಸಿದರು. ಡಿಕೆಯಸ್ಸಿ ಜುಬೈಲ್ ಘಟಕ ಹಾಗೂ ಹಲವಾರು ಸುನ್ನಿ ಸಂಘಟನೆಯ ಹಿತೈಷಿಯೂ ಆದ ಖಮರುದ್ದೀನ್ ಗೂಡಿನ ಬಳಿ ಮಾತಾಡಿ ಡಿಕೆಯಸ್ಸಿ ಸಂಘಟನೆಯು ಕೊಲ್ಲಿ ರಾಷ್ಟ್ರದಲ್ಲಿ ಎಲ್ಲಾ ಸುನ್ನತ್ ಜಮಾಅತಿನ ಸಂಘಟನೆಗೆ ಮಾದರಿಯಾಗಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಇನ್ನು ಮಂಗಳೂರು ಕೇಂದ್ರವಾಗಿ ಸುನ್ನತ್ ಜಮಾಅತಿನ ವಿದ್ಯಾ ಸಂಸ್ಥೆಯನ್ನು ನಡೆಸಲು ಎಲ್ಲರೂ ಶ್ರಮಿಸಲು ಕರೆನೀಡಿ ಅಲ್ಲಾಹನ ಪವಿತ್ರ ನಾಮದಿಂದ ಸಭೆಯನ್ನು ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ವಾರ್ಷಿಕ ವರದಿ ವಾಚಿಸಿದರು ಹಾಗೂ .
ಕಾರ್ಯದರ್ಶಿ ಮುಹಮ್ಮದ್ ಅಲಿ ಕೃಷ್ಣಾಪುರ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿ ಸಭೆಯ ಅನುಮೋದನೆ ಪಡೆದರು.
ಘಟಕದ ಕೆಲವೊಂದು ಸದಸ್ಯರ ಯಶಸ್ವಿ ಪ್ರವರ್ತನೆಯನ್ನು ಮೆಚ್ಚಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಗಲ್ಫ್ ಜೀವನದಲ್ಲಿ ಡಿ ಕೆ ಯಸ್ ಸಿ ಗೆ ಬೇಕಾಗಿ ಅವಿರತ ಶ್ರಮವಹಿಸಿ ಗಲ್ಫ್ ಜೀವನಕ್ಕೆ ವಿದಾಯ ಹಾಕುತ್ತಿರುವ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಯವರಿಗೆ ಮೆಮೆಂಟೊ ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಜುಬೈಲ್ ಘಟಕದ ಮಾಜಿ ಅಧ್ಯಕ್ಷರಾದ ಜನಾಬ್ ಆಸಿಫ್ ಗೂಡಿನಬಳಿ ಡಿಕೆಯಸ್ಸಿ ಕಾರ್ಯ ಪ್ರವರ್ತನೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಡಿಕೆಯಸ್ಸಿ ಜುಬೈಲ್ ಘಟಕದ ಮಾಜಿ ಅಧ್ಯಕ್ಷರಾದ ಜನಾಬ್ ಫಾರೂಕ್ ಫೋರ್ಟ್ ವೇ ಮರ್ಹೂಂ ಹಾರಿಸ್ ದರ್ಬೆಯವರ ಜೀವನಶೈಲಿಯ ಅನುಸ್ಮರಣೆ ಮಾಡಿ ಪ್ರತೀಯೊಬ್ಬರು ತಮ್ಮ ದೈನಂದಿನ ಜೀವನದಲ್ಲಿ ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.
ಅತಿಥಿಗಳಾದ ಡಿಕೆಯಸ್ಸಿ ಜುಬೈಲ್ ಘಟಕದ ಹಿತೈಷಿಯಾದ ಜನಾಬ್ ಹಬೀಬ್ ಸ್ಪಾರ್ಕ್ ಅರೇಬಿಯಾ ಮಾತಡಿ ನಮ್ಮಲಿರುವ ಸಂಪತ್ತು ನಾಳೆ ನಾವು ಮರಣ ಹೊಂದಿದರೆ ನಮ್ಮೊಂದಿಗೆ ಇರುವುದಿಲ್ಲ ನಾವು ಮಾಡುವ ಒಳ್ಳೆಯ ಕಾರ್ಯಗಳು ಮಾತ್ರ ನಮ್ಮೊಂದಿಗೆ ಇರುತ್ತದೆ, ನಮ್ಮ ಪೂರ್ವಜರು ಯಾವಾಗಲೂ ಅಲ್ಲಾಹನ ದಿಕ್ರ್ ಹೇಳುತ್ತಾ ಇರುವುದು ಯಾಕೆ ಎಂಬುವುದನ್ನು ನಾನು ಆಳವಾಗಿ ಅಧ್ಯಯನ ಮಾಡಿದಾಗ ಸುನ್ನತ್ ಜಮಾಅತಿನ ಸಂಘಟನೆಯಲ್ಲಿ ಪ್ರವರ್ತನೆ ಗೈದರೆ ಅಲ್ಲಾಹನ ಸ್ಮರಣೆಯು ಯಾವಾಗಲು ನಮ್ಮ ಮನಸಿನಲ್ಲಿ ಉದ್ಭವಿಸಲು ಸಾಧ್ಯ. ಡಿಕೆಯಸ್ಸಿಯು ನಡೆಸುವ ಲೌಕಿಕ ಹಾಗು ಧಾರ್ಮಿಕ ವಿದ್ಯಾಭ್ಯಾಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ ನಾನು ನಿಮ್ಮೊಂದಿಗೆ ಕೈಜೋಡಿಸಲು ಸಿದ್ದನಿದ್ದೇನೆ ಎಂದು ತಿಳಿಸಿದರು.
ದಮ್ಮಾಂ ಝೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರ್ರಹ್ಮಾನ್ ಪಾಣಾಜೆ ಮಾತಾಡಿ ನಮ್ಮ ಮನಸ್ಸನ್ನು ಕರಗಿಸಲು ಲಾಇಲಾಹ ಇಲ್ಲಲಾಹ್ ಎಂಬ ಕಲಿಮದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ವೇದಿಕೆಯಲ್ಲಿ ಜುಬೈಲ್ ಉಸ್ತುವಾರಿ ಅಬ್ದುಲ್ ಅಝೀಝ್ ಮೂಡುತೋಟ, ಯೂತ್ ವಿಂಗ್ ಅಧ್ಯಕ್ಷ ಜನಾಬ್ ಸಪ್ವಾನ್ ಕಣ್ಣಗಾರ್ ಉಪಸ್ಥಿತರಿದ್ದರು.
ದಮ್ಮಾಂ ಝೋನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರೋಯಲ್ ಮುಕ್ವೆ ನೇತ್ರತ್ವ ದಲ್ಲಿ 2024-25 ನೇ ಸಾಲಿಗೆ ಕಳೆದ ಸಮಿತಿಯನ್ನೇ ಕೆಲವೊಂದು ಮಾರ್ಪಾಡು ಮಾಡುವ ಮೂಲಕ ರಚಿಸಲಾಯಿತು.
ಅಧ್ಯಕ್ಷ ರಾಗಿ ಅಶ್ರಫ್ ನಾಳ, ಗೌರವಾಧ್ಯಕ್ಷ ರಾಗಿ ಮುಹಮ್ಮದ್ ಅಲೀ ಗಲ್ಫ್ ಬೇಕರಿ ಉಪ್ಪಿನಂಗಡಿ, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕ್ಕರ್ ಬರ್ವ ಹಾಗೂ ಕೋಶಾಧಿಕಾರಿಯಾಗಿ ಅಬ್ದುಲ್ ಕರೀಂ ಪಾಣೆಮಂಗಳೂರು ರವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಕಾಪು, ಹಾತಿಂ ಕೂಳೂರು, ಆಯ್ಕೆಗೊಂಡರು.
ಕಾರ್ಯದರ್ಶಿಗಳಾಗಿ ಮುಹಮ್ಮದ್ ಅಲೀ ಅಲ್ ಮುಝೈನ್, ಉಬೈದ್ ಸುರಿಬೈಲ್ ಹಾಗೂ ಅಬ್ದುಲ್ ಗಫೂರ್ ಎಣ್ಣೆಹೊಳೆ ನೇಮಕಗೊಂಡರು.
ಅನ್ವರ್ ಪಡುಬಿದ್ರಿ, ಜಮಾಲ್ ಕಣ್ಣಂಗಾರ್ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.
ಸಲಹಾ ಸಮಿತಿಗೆ ಅಬ್ದುಲ್ ಹಮೀದ್ ಉಳ್ಳಾಲ,
ಆರ್ಗನೈಝರ್ ಗಳಾಗಿ ಕೆ.ಎಚ್. ಮುಹಮ್ಮದ್ ರಫೀಖ್ ಸೂರಿಂಜೆ ,ಮುಸ್ಥಫ ಮೈನಾ,ಸಮೀರ್ ಪಲಿಮಾರ್ ಮತ್ತು ಅಹ್ಮದ್ ಕಣ್ಣಂಗಾರ್ ರವರನ್ನು ಆರಿಸಲಾಯಿತು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಶ್ರಫ್ ನಾಳ ಮಾತನಾಡುತ್ತಾ ಡಿಕೆಯಸ್ಸಿ ಯ ಅಭಿವ್ರಧ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ಧನ್ಯವಾದ ಗೈದರು. ಮುಹಮ್ಮದ್ ಅಲೀ ಮುಝೈನ್ ಕಾರ್ಯಕ್ರಮ ನಿರೂಪಿಸಿದರು.