janadhvani

Kannada Online News Paper

ಧರ್ಮಾಧಾರಿತ ಪೌರತ್ವ, ಸಂವಿಧಾನ ವಿರುದ್ಧ- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ನಂಬಿಕೆ ಮತ್ತು ಗುರುತಿನ ಹೆಸರಿನಲ್ಲಿ ಜನರನ್ನು ತಾರತಮ್ಯ ಮಾಡುವ ಕಾನೂನುಗಳನ್ನು ಪರಿಚಯಿಸುವುದು ವಿಶ್ವದ ರಾಷ್ಟ್ರಗಳಲ್ಲಿ ಭಾರತದ ಘನತೆಯನ್ನು ಕಡಿಮೆ ಮಾಡಲಿದೆ.

ಕೋಝಿಕ್ಕೋಡ್ |ಧರ್ಮವನ್ನು ಪೌರತ್ವದ ಮಾನದಂಡವನ್ನಾಗಿಸುವುದು ಸಂವಿಧಾನಾತ್ಮಕ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಜನರ ನಡುವೆ ಸೌಹಾರ್ದತೆ, ಒಗ್ಗಟ್ಟು ಮೂಡಿಸುವ ಬದಲು ಒಡಕು ಮೂಡಿಸುವ ಪ್ರಯತ್ನವು ರಾಷ್ಟ್ರದ ಪ್ರಗತಿಗೆ ಅಡ್ಡಿಯಾಗಲಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾ‌ರ್ ಹೇಳಿದರು.

ನಮ್ಮ ದೇಶವು ಬಾಹ್ಯಾಕಾಶದಲ್ಲಿ ತನ್ನದೇ ಆದ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿರುವ ಸಮಯದಲ್ಲಿ, ನಂಬಿಕೆ ಮತ್ತು ಗುರುತಿನ ಹೆಸರಿನಲ್ಲಿ ಜನರನ್ನು ತಾರತಮ್ಯ ಮಾಡುವ ಕಾನೂನುಗಳನ್ನು ಪರಿಚಯಿಸುವುದು ವಿಶ್ವದ ರಾಷ್ಟ್ರಗಳಲ್ಲಿ ಭಾರತದ ಘನತೆಯನ್ನು ಕಡಿಮೆ ಮಾಡಲಿದೆ. ಆದ್ದರಿಂದ ಪೌರತ್ವ ತಿದ್ದುಪಡಿ ಕಾಯ್ದೆ ಅಧಿಸೂಚನೆಯನ್ನು ಹಿಂಪಡೆಯಲು ಸರಕಾರ ಸಿದ್ಧವಾಗಬೇಕು ಎಂದು ಕಾಂತಪುರಂ ಆಗ್ರಹಿಸಿದರು.

error: Content is protected !! Not allowed copy content from janadhvani.com