ದೋಹಾ: ದೀರ್ಘಾವಧಿಯ ವಲಸಿಗರಿಗಾಗಿ ಶಾಶ್ವತ ನಿವಾಸದ ಅನುಮತಿ ನೀಡುವ ಕರಡು ರೇಖೆಯನ್ನು ಶೂರಾ ಕೌನ್ಸಿಲ್ ಅನುಮೋದಿಸಿದೆ.
2017 ರ ಅಂತ್ಯದ ವೇಳೆಗೆ ಸಚಿವಸಂಪುಟ ಅಂಗೀಕರಿಸಿದ ಕರಡು ಪ್ರತಿಯನ್ನು ಶೂರಾ ಕೌನ್ಸಿಲ್‌ಗೆ ಹಸ್ತಾಂತರಿಸಿತ್ತು.ಇದೊಂದು ಪ್ರಮುಖ ಕಾನೂನಾಗಿರುವ ಕಾರಣ ವಿವರವಾದ ಅಧ್ಯಯನ ಮತ್ತು ಚರ್ಚೆಗಳ ನಂತರ ಇದನ್ನು ಅನುಮೋದಿಸಲಾಗಿದೆ.
ದೀರ್ಘಾವಧಿ ಅನಿವಾಸಿಯಾದ ಕಾರಣಕ್ಕೆ ಮಾತ್ರ ಶಾಶ್ವತ ನಿವಾಸವನ್ನು ಪಡೆಯುವಂತಿಲ್ಲ,ಇದಕ್ಕೆ ಇನ್ನಿತರ ನಿಬಂಧನೆಗಳಿವೆ.
ಖತರ್ ದೇಶಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿದವರು, ರಾಷ್ಟ್ರೀಯ ಆರ್ಥಿಕತೆಗೆ ಹೆಚ್ಚಿನ ಕೊಡುಗೆ ನೀಡಿದವರು ಮತ್ತು ಭವಿಷ್ಯದಲ್ಲೂ ಖತರಿಗೆ ಸೇವೆ ಅನಿವಾರ್ಯತೆ ಇರುವ ತಜ್ಞರಿಗೆ ಶಾಸ್ವತ ಪರವಾನಿಗೆ ಲಭಿಸಲಿದೆ.
ವಿದೇಶಿಯಾದ ಗಂಡನಿಂದ ಖತರಿ ಮಹಿಳೆಯರಿಗೆ ಜನಿಸಿದ ಮಕ್ಕಳಿಗೆ ಶಾಶ್ವತ ನಿವಾಸಾನುಮತಿ ನೀಡುವ ಬಗ್ಗೆ ಕರಡು ಕಾನೂನಿನಲ್ಲಿ ಗೃಹ ಸಚಿವಾಲಯಕ್ಕೆ ಅಧಿಕಾರ ನೀಡಿದೆ.ಯಾರಿಗೆ ಶಾಶ್ವತ ಪರವಾನಗಿ ನೀಡಬೇಕು ಎನ್ನುವ ಕುರಿತು ಗೃಹ ವ್ಯವಹಾರ ಸಚಿವಾಲಯದ ಅಡಿಯಲ್ಲಿ ಖಾಯಂ ಸಮಿತಿಯನ್ನು ಸ್ಥಾಪಿಸಬೇಕು ಎಂದು ಕರಡು ಕಾಯಿದೆ ಶಿಫಾರಸು ಮಾಡಿದೆ.
ವಿದೇಶಾಂಗ ಸಮಿತಿಯಲ್ಲಿ ಈ ತಿಂಗಳ 15 ರಂದು ನಡೆದ ಕೊನೆಯ ಸಭೆಯಲ್ಲಿ ಪ್ರಧಾನ ಮಂತ್ರಿ ಶೇಖ್ ಅಬ್ದುಲ್ಲಾ ಅವರು ನೆರವಾಗಿ ಭಾಗವಹಿಸಿ ಸದಸ್ಯರ ಅನುಮಾನಗಳಿಗೆ ಪ್ರತಿಕ್ರಿಯಿಸಿದ್ದಾರೆ.ಫೆಬ್ರವರಿ 11 ರಂದು ನಡೆದ ಸಭೆಯಲ್ಲಿ ಕ್ಯಾಬಿನೆಟ್ ಕಾರ್ಯದರ್ಶಿ ಹಮದ್ ಬಿನ್ ಅಹ್ಮದ್ ಅಲ್ ಮುಹನ್ನದಿ, ಜನರಲ್ ಸೆಕ್ರೆಟರಿಯೇಟ್‌ನ ಸಹಾಯಕ ನಿರ್ದೇಶಕ ಅಬ್ದುಲ್ ಅಝೀಝ್ ಬಿನ್ ಮುಬಾರಕ್ ಅಲ್-ಬುಐನಿಯನ್ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ್ದರು.
ನಿನ್ನೆ ಸೇರಿದ ಕೌನ್ಸಿಲ್ ಸಭೆಯಲ್ಲಿ ಉಪಸಮಿತಿಯ ಅಧ್ಯಕ್ಷ ಅಬ್ದುಲ್ಲಾ ಬಿನ್ ಫಹದ್ ಬಿನ್ ಗುರಾಬ್ ಅವರು ತಯಾರಿಸಿದ ವರದಿಯ ಆಧಾರದ ಮೇಲೆ ನಡೆದ ಚರ್ಚೆಯಲ್ಲಿ ಈ ಅನುಮೋದನೆ ನೀಡಲಾಗಿದೆ ಎಂದು ಶೂರಾ ಸ್ಪೀಕರ್ ಅಹ್ಮದ್ ಬಿನ್ ಅಬ್ದುಲ್ಲಾ ಬಿನ್ ಝಾಹಿದ್ ಅಲ್ ಮಹ್ಮೂದ್ ಹೇಳಿದರು.
ದೀರ್ಘಾವಧಿಯ ವಲಸಿಗರಿಗೆ ಖತರಿನಲ್ಲಿ ಶಾಶ್ವತ ವಾಸ ಪರವಾನಗಿ ನೀಡುವ ಕರಡು ಕಾನೂನನ್ನು ಸಿದ್ಧಪಡಿಸಲು ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಕಳೆದ ವರ್ಷ ಸಚಿವ ಸಂಪುಟಕ್ಕೆ ನಿರ್ದೇಶ ನೀಡಿದ್ದರು.
ಅನಿವಾಸಿಗಳಿಗೆ ಕತರಿನಲ್ಲಿ ನಿರ್ದಿಷ್ಟ ಪ್ರದೇಶದಲ್ಲಿ ಕಟ್ಟಡಗಳು ಮತ್ತು ನಿವೇಶನಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಕರಡು ಕಾನೂನು ಪ್ರಸ್ತುತ ಪರಿಗಣನೆಯಲ್ಲಿದೆ.ಈ ಎರಡೂ ಕಾನೂನುಗಳನ್ನು ಈ ವರ್ಷ ಪೂರ್ಣಗೊಳಿಸಬೇಕೆಂದು ಅಮೀರ್ ಮಂತ್ರಿಮಂಡಲಕ್ಕೆ ನಿರ್ದೇಶನ ನೀಡಿದ್ದಾರೆ.
ಶೂರಾ ಗೆ ವೆಬ್ ಸೈಟ್
ಶೂರಾ ಕೌನ್ಸಿಲ್ ಬಗೆಗಿನ ವಿವರವಾದ ಮಾಹಿತಿಯೊಂದಿಗೆ ಸಿದ್ಧಪಡಿಸಲಾದ ವೆಬ್‌ಸೈಟ್ ತಯಾರಿಸಲಾಗುತ್ತಿದೆ.
ಕೌನ್ಸಿಲ್ ಸಭೆಗಳು, ಚರ್ಚೆಗಳ ವಿವರಗಳು, ಭಾಗವಹಿಸುವ ಕೌನ್ಸಿಲ್ ಸದಸ್ಯರು ಮತ್ತು ಸುದ್ದಿಪತ್ರಗಳ ಅಂತರಾಷ್ಟ್ರೀಯ ಸಮ್ಮೇಳನಗಳ ಬಗ್ಗೆ ಸಮಗ್ರ ವಿವರಗಳನ್ನೊಳಗೊಂಡ ವೆಬ್ ಸೈಟ್‌ನ್ನು ಸಜ್ಜುಗೊಳಿಸಲಾಗುವ್ದುದು.ಶುರಾ ಕೌನ್ಸಿಲ್ ವೆಬ್ ಸೈಟ್ ಸಂದರ್ಶನ ಮಾಡುವ ಪ್ರಮುಖ ವಿದೇಶೀಯರ ಮಾಹಿತಿ ಕೂಡ ವೆಬ್ ಸೈಟ್ ನಲ್ಲಿ ಲಭ್ಯವಾಗಲಿದೆ.