ಕುವೈತ್: ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ವತಿಯಿಂದ ದಿನಾಂಕ 29 ರ ಫೆಬ್ರವರಿ 8 pm ಗಂಟೆಗೆ ಮುಜಾಲಸ ಕಾರ್ಯಕ್ರಮವು KCF ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಹುಮಾನ್ಯ ಹುಸೈನ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ,ಕಾರ್ಯಕ್ರಮವನ್ನು ಸಂಘಟನಾ ಅಧ್ಯಕ್ಷರಾದ ಬಹು ಉಮರ್ ಝುಹ್ರಿ ಉದ್ಘಾಟಿಸಿದರು.
KCF ಪ್ರಧಾನ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಸ್ವಾಗತಿಸಿದರು, ಬಹುಮಾನ್ಯ ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದರು ಮಾತನಾಡಿ ಅನಿವಾಸಿಗರ ಕೊಡುಗೆ ಅಪಾರವಾದದು ಮತ್ತು KCF, ICF, RSC,ಸಂಘಟನೆಗಳು ಬೇರೆ ಬೇರೆ ಆದರೂ ಉದ್ದೇಶ, ಕಾರ್ಯವೈಖರಿ ಒಂದೇ ಎಂದರು, ವೇದಿಕೆಯಲ್ಲಿ ಬಹು ಅಬ್ದುಲ್ ರಹ್ಮಾನ್ ಸಖಾಫಿ, ಸಯ್ಯದ್ ಸ್ವಾದಿಕ್ ತಂಙಳ್,ಅಬುಲ್ಲಾ ವಡಗರ, ಸಾಹುಲ್ ಹಮೀದ್ ಸಅದಿ, ಬಹು ಅಬೂಬಕ್ಕರ್ ಬಾಖವಿ ಉಪಸ್ಥಿತರಿದ್ದರು.
ಮಹಬುಲ ಸೆಕ್ಟರ್ ನ ಮಾಸಿಕ ಸ್ವಲಾತ್ಪ್ ಮಜ್ಲಿಸ್ ನಡೆಯಿತು,ಹಾಗೂ ಕುವೈಟ್ ನಲ್ಲಿ ಗಲ್ಫ್ ಇಶಾರವನ್ನು ಬಹುಮಾನ್ಯ ಪೆರೋಡ್ ಉಸ್ತಾದ್ ಅವರು ಬಿಡುಗಡೆ ಮಾಡುವ ಮೂಲಕ ಎಲ್ಲಾ ಸದಸ್ಯರು ಪಡೆದುಕೊಳ್ಳಬೇಕು ಎಂದು, ಮತ್ತು KCF IC ಡಿಸೇನಿಯಂ ಕಾರ್ಯಕ್ರಮ ಮಂಗಳೂರುನಲ್ಲಿದ್ದು ಎಲ್ಲರೂ ಕಾರ್ಯಕ್ರಮವನ್ನು ವಿಜಯ ಗೊಳಿಸಬೇಕೆಂದು ವಿನಂತಿಸಿದರು ಜನಾಬ್ ಸಮೀರ್ KC Road ಧನ್ಯವಾದಗೈದರು.
ವರದಿ :ಇಬ್ರಾಹಿಂ ವೇಣೂರ್ ಪಬ್ಲಿಕೇಶನ್ ವಿಭಾಗ ಕೆಸಿಎಫ್ ಕುವೈಟ್