ಬೆಳ್ತಂಗಡಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಬುಧಾಬಿ ಝೋನ್ ಇದರ ದಾರುಲ್ ಅಮಾನ್ ವಸತಿ ಯೋಜನೆಯ ನಾಲ್ಕನೇ ಫಲಾನುಭವಿಯ ಮನೆ ಹಸ್ತಾಂತರ ಕಾರ್ಯಕ್ರಮವು ಫೆ.3 ರಂದು ಬೆಳ್ತಂಗಡಿ ತಾಲೂಕಿನ ಬದ್ಯಾರಿನಲ್ಲಿ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಫಾಝಿಲ್ ರಝ್ವ ಫಲಾನುಭವಿಗೆ ಮನೆಯ ಕೀ ಹಸ್ತಾಂತರ ಮಾಡುವ ಮೂಲಕ ಉಧ್ಘಾಟಿಸಿದರು. ಕಾರ್ಯಕ್ರಮದಲಿ ರಾಜ್ಯ ಎಸ್,ವೈ. ಎಸ್ ನಾಯಕರಾದ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಮಲ್ಜಹ್ ವಿಧ್ಯಾ ಸಂಸ್ಥೆಯ ರುವಾರಿ ಸಯ್ಯಿದ್ ಜಮಲುಲ್ಲೈಲಿ ತಂಙಳ್, ಜಿ.ಎಂ ಕಾಮಿಲ್ ಸಖಾಫಿ, ಮೆಹ್ಬೂಬ್ ಸಖಾಫಿ,ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಲ್ ಸುಫ್ಯಾನ್ ಸಖಾಫಿ, ಉಮರಾ ನೇತಾರ ರಜಾಕ್ ಹಾಜಿ ಜೆಲ್ಲಿ, ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ ಸದಸ್ಯರಾದ ಹಕೀಂ ತುರ್ಕಳಿಕೆ, ನವಾಝ್ ಕೋಟೆಕಾರ್, ಸಿದ್ದೀಲ್ ಅಳಿಕೆ, ಸುಹೈಲ್ ಸಖಾಫಿ, ಮುಸ್ತಫ ನಿಂತಿಕಲ್, ಉಮರ್ ಈಶ್ವರಮಂಗಿಲ ಹಾಗೂ ಸ್ಥಳೀಯ ಉಲಮಾ ಉಮರಾ ನೇತಾರರು ಭಾಗವಹಿಸಿದ್ದರು.
ಕರುಣೆಯ ನೆರಳೆಂಬ ಪುಟ್ಟ ಡಬ್ಬಿಯೊಂದರಲ್ಲಿ ಸಹೃದಯಿ ದಾನಿಗಳು ಹಾಕುವ ನಾಣ್ಯಗಳೇ ಇಂದು ಮತ್ತೊಂದು ಮನೆಯಾಗಿ ಪರಿವರ್ತನೆಯಾಗಿದೆ
ಊರು ಕೇರಿಗಳನ್ನು ತೊರೆದು ಕಡಲು ದಾಟಿದ ಕನ್ನಡಿಗ ಸುನ್ನೀ ಅನಿವಾಸಿ KCF ಕಾರ್ಯಕರ್ತರು ಸಾಧ್ಯವಾದೆಡೆಯೆಲ್ಲಾ ಕರುಣೆಯ ನೆರಳೆಂಬ ಪುಟ್ಟ ಡಬ್ಬಿಯೊಂದನ್ನು ಸ್ಥಾಪಿಸಿದ್ದಾರೆ. ಅದರಲ್ಲಿ ಸಹೃದಯಿ ದಾನಿಗಳು ಹಾಕುವ ನಾಣ್ಯಗಳೇ ಇಂದು ಮತ್ತೊಂದು ಮನೆಯಾಗಿ ಪರಿವರ್ತನೆಯಾಗಿದೆ.
ಮುಂಜಾನೆ ಅಂಗಡಿಯ ಬಾಗಿಲು ತೆರೆದೊಡನೆ ಕರುಣೆಯ ನೆರಳಿಗೆ ಕಿರು ಕಾಣಿಕೆಯೊಂದನ್ನು ಹಾಕಿ ದಿನದ ವ್ಯಾಪಾರ ವಹಿವಾಟುಗಳನ್ನು ಪ್ರಾರಂಭಿಸುವ ಪರಿಪಾಠ ಮಾಡಿಕೊಂಡಿರುವ ಹಲವು ಅನಿವಾಸಿಗಳಿದ್ದಾರೆ.
ಹನಿ ಹನಿ ಸೇರಿ ಹಳ್ಳವಾಗಿ ಕಡಲು ದಾಟಿ ತಾಯ್ನಾಡಿಗೆ ಬಂದ ಕರುಣೆಯ ನೆರಳಿನ ಡಬ್ಬಿಯ ಮೊತ್ತವು ಅರ್ಹ ಕುಂಟುಂಭಕ್ಕೊಂದು ಮನೆಯೆಂಬ ಕನಸನ್ನು ನನಸಾಗಿಸಿ ಸಂಭ್ರಮದಿಂದ ಗೃಹ ಪ್ರವೇಶಗೈದಾಗ ಅಬುಧಾಬಿ ಕೆಸಿಎಫ್ ಕಾರ್ಯಕರ್ತರ ಮನದಾಳದಲ್ಲಿ ನಿರಾಳತೆಯ ನಿಟ್ಟುಸಿರು.!
ಉದ್ಯೋಗ, ವಹಿವಾಟುಗಳ ಜಂಜಾಟದ ಮದ್ಯೆ ಸಿಕ್ಕ ಬಿಡುವಿನಲ್ಲಿ ಸಂಘ ಕಟ್ಟಿ ಮಾಡುವ KCF ಕಾರ್ಯಕರ್ತರ ಪುಟ್ಟ ಪುಟ್ಟ ಸೇವೆಗಳು ನಾಳೆಯ ಮೀಝಾನಿನಲ್ಲಿ ಘನತೂಕವುಳ್ಳದಾಗಲಿ, ಅಲ್ಲಾಹು ಸ್ವೀಕರಿಸಲಿ. ಆಮೀನ್
✍🏻 ಸಿದ್ಧೀಕ್ ಎಲಿಮಲೆ