ಮಂಗಳೂರು: ಮಂಡ್ಯದಲ್ಲಿ ಪ್ರಸ್ತುತ ಸಂಘ ಪ್ರೇರಿತ ಮತೀಯ ಉದ್ವಿಗ್ನ ಚಟುವಟಿಕೆಗಳನ್ನು ಗರಿಷ್ಠ ಮಟ್ಟಕ್ಕೆ ಏರಿಸುವ ಭರದಲ್ಲಿನ ಧ್ವಜ ವಿವಾದದ ಹಿನ್ನಲೆಯಲ್ಲಿ ಬಿಜೆಪಿ ಮುಖಂಡ ಸಿ.ಟಿ.ರವಿ ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸುವ ಪದಬಳಕೆ ಮಾಡಿ ಹೇಳಿಕೆ ನೀಡಿರುವುದು, ಸಿ.ಟಿ.ರವಿಯಂತಹ ಸಂಘೀ ನಾಯಕರ ಪ್ರಸಕ್ತ ಮನಸ್ಥಿತಿಯನ್ನು ತೋರಿಸುತ್ತಿದೆ.ಸಿ.ಟಿ.ರವಿಗೆ ದೃಷ್ಟಿ ವ್ಯತ್ಯಯ ಸಮಸ್ಯೆ ಇದ್ದಂತೆ ಕಾಣುತ್ತದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ದೇಶದಲ್ಲಿ ಹುಟ್ಟಿ ಬೆಳೆದು, ಈ ದೇಶದ ಆಹಾರ, ನೀರು,ಗಾಳಿ ಸೇವಿಸಿಕೊಂಡು ಇಂದು ರಾಷ್ಟ್ರ ಧ್ವಜವನ್ನು ಗುರುತಿಸಲು ಅಸಾದ್ಯವಾದಷ್ಟು ದೃಷ್ಟಿ ವ್ಯತ್ಯಯ ಸಮಸ್ಯೆ ಇದೆಯೋ ಅಥವಾ ಭಾರತ ದೇಶ ಪ್ರೇಮ ಹೊರತಾದ ತಾಲಿಬಾನಿ ಪ್ರೇಮವೋ ಎಂಬುದಾಗಿ ಉತ್ತರಿಸಬೇಕು.
ಈ ದೇಶದ ಸಾಮಾನ್ಯ ಜನರನ್ನು ಮತ್ತು ಒಂದು ನಿರ್ಧಿಷ್ಟ ಜನ ಸಮುದಾಯವನ್ನು ನಿರಂತರ ಹೀಯಾಳಿಸುತ್ತಾ, ಈ ದೇಶದ ನೈಜ ಪ್ರಜೆಗಳನ್ನು ಜನರು ಸಂಶಯ ದೃಷ್ಟಿಯಿಂದ ನೋಡುವ ರೀತಿಯಲ್ಲಿನ ಗೊಂದಲದ ಹೇಳಿಕೆಗಳ ವೀರ ಸಿ.ಟಿ.ರವಿಗೆ ಇಂದು ಭಾರತದ ತ್ರಿವರ್ಣ ಧ್ವಜ ತಾಲಿಬಾನಿ ಧ್ವಜದ ಹಾಗೆ ಹೋಲಿಕೆಯಾದದ್ದು ಅವರ ದೇಶ ದ್ರೋಹತೆಗೆ ಸಾಕ್ಷಿಯಾಗಿದೆ.ಕೇಂದ್ರ ಸರಕಾರ ಸಿ.ಟಿ.ರವಿಯನ್ನು ತಕ್ಷಣ ಅಫ್ಘಾನಿಸ್ತಾನದ ಕಾಬೂಲ್ ಗೆ ಗಡೀಪಾರುಗೊಳಿಸಬೇಕಿದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.