ಮೂರು ತಿಂಗಳ ಹಿಂದೆ ಸೌದಿ ಅರೇಬಿಯಾ ದ ದಮ್ಮಾಮ್ ನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡ ತಮಿಳುನಾಡು ಮೂಲದ ವ್ಯಕ್ತಿಯನ್ನು ಟ್ರಾಫಿಕ್ ಪೊಲೀಸರು ದಮ್ಮಾಮ್ ಮುವಾಸತ್ ಆಸ್ಪತ್ರೆಗೆ ದಾಖಲಿಸಿದ್ದರು. ಇವರ ಎರಡೂ ಕಾಲುಗಳು ಮತ್ತು ಸೊಂಟ ಮುರಿತಕ್ಕೊಳಗಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ತುಂಬಾ ಬಿಲ್ ಬೇಕಾಗಿದ್ದು ಇನ್ಶೂರೆನ್ಸ್ ಕೂಡ ಸರಿ ಇಲ್ಲದ ಕಾರಣ ಮೊತ್ತವನ್ನು ಭರಿಸಲು ಅಶಕ್ತರಾಗಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ರೋಗಿಯನ್ನು ಊರಿಗೆ ಕಳುಹಿಸಬೇಕಾಗಿ ನಾರ್ತ್ ಸೆಕ್ಟರ್ ಗೆ ಬಂದ ಕೋರಿಕೆಯನ್ನು ಪರಿಶೀಲಿಸಿ ಸೆಕ್ಟರ್ ಸಾಂತ್ವನ ವಿಭಾಗವು ಕೂಡಲೇ ಕಾರ್ಯಪ್ರವರ್ತರಾಗಿ ಝೋನ್ ಸಾಂತ್ವನ ವಿಭಾಗದ ಸಹಕಾರದೊಂದಿಗೆ ಸ್ಟ್ರಕ್ಚರ್ ಮುಖಾಂತರ ದಮ್ಮಾಮ್ ನಿಂದ ತಿರುವನಂತಪುರಕ್ಕೆ ,ಅಲ್ಲಿಂದ ಅವರ ಊರಿಗೆ ಆಂಬುಲನ್ಸ್ ಮೂಲಕ ತಲುಪಿಸುವ ಸಾಂತ್ವನ ಕಾರ್ಯವನ್ನು ಭಾರತೀಯ ರಾಯಭಾರಿ, ಆಸ್ಪತ್ರೆಯ ಹಾಗು ಸೌದಿ ಸರಕಾರದ ಪ್ರತೀ ನಿಯಮಗಳನ್ನು ಪಾಲಿಸಿ ಬಹಳ ಅಚ್ಚುಕಟ್ಟಾಗಿ ಸಮಯಕ್ಕನುಸಾರ ಯಾವುದೇ ತೊಂದರೆಗಳಲ್ಲಿದೆ ದಮ್ಮಾಮ್ ನಾರ್ತ್ ಸೆಕ್ಟರ್ ಮುಖಾಂತರ ವ್ಯವಸ್ಥೆಮಾಡಿ ಕೊಡಲಾಯಿತು.
ಈ ಒಂದು ಕಾರ್ಯಾಚರಣೆಯಲ್ಲಿ ನಮ್ಮೊಂದಿಗೆ ಕೈಜೋಡಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF ) ದಮ್ಮಾಮ್ ಝೋನ್ ಸಾಂತ್ವನ ವಿಭಾಗದ ಚೇರ್ಮಾನ್ ಬಾಷಾ ಗಂಗಾವಳಿ, ಪ್ರ. ಕಾರ್ಯದರ್ಶಿ ತಮೀಮ್ ಕೂಳುರು, ಸೆಕ್ಟರ್ ಸಾಂತ್ವನ ವಿಭಾಗದ ಚೇರ್ಮಾನ್ ಫಾರುಕ್ ಕಾಪು ಹಾಗು ಕನ್ವೀನರ್ ಅಫೀಫ್ ಕಾಟಿಪಳ್ಳ ಇವರುಗಳಿಗೆ ಹೃತ್ಪೂರ್ವಕ ಕ್ರತಜೃತೆಯನ್ನು ರಾಜುವಿನ ಕುಟುಂಬದವರು ಹಾಗು ಸ್ನೇಹಿತರು ತಿಳಿಸಿದ್ದಾರೆ.