janadhvani

Kannada Online News Paper

ಜನವರಿ 24: ಎಸ್‌ವೈಎಸ್ ಮಹಾ ಸಮ್ಮೇಳನ- ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಈಸ್ಟ್ ಜಿಲ್ಲೆ ಯಶಸ್ವಿಗೆ ಕರೆ

ಪುತ್ತೂರು : ಅಹ್ಲ್ ಸುನ್ನ ವಲ್ ಜಮಾಅತ್ ನ ಮಹೋನ್ನತ ಸಂಘಟನೆಯಾದ ಸುನ್ನಿ ಯುವಜನ ಸಂಘ 1954 ರಲ್ಲಿ ಕೇರಳದಲ್ಲಿ ಸ್ಥಾಪನೆಗೊಂಡು, ತದನಂತರ ಅದು ದೇಶಾದ್ಯಂತ ವ್ಯಾಪಿಸಿ 1994ರಲ್ಲಿ ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಆರಂಭಗೊಂಡಿತು. ಎಸ್‌ವೈಎಸ್ ಗೆ ಇದೀಗ ಎಪ್ಪತ್ತರ ಹರೆಯ. ಆದರೆ ಕರ್ನಾಟಕದಲ್ಲಿ ಎಸ್‌ವೈಎಸ್ ಸ್ಥಾಪನೆಗೊಂಡು ಮುವ್ಚತ್ತು ವರ್ಷ ಪೂರ್ಣಗೊಳ್ಳತ್ತಿದೆ.

ಕಳೆದ ಮೂರು ದಶಕಗಳಲ್ಲಿ ಕರ್ನಾಟಕ ಸುನ್ನಿ ಯುವಜನ ಸಂಘಟನೆ ಅಹ್ಲ್ ಸುನ್ನ ವಲ್ ಜಮಾಅತಿನ ತತ್ವಾದರ್ಶದಲ್ಲಿ ಅನೇಕ ರೀತಿಯ ಜನಪರ ಕಾರ್ಯಗಳನ್ನು ನಿರ್ವಹಿಸಿ ಜನಮನ್ನಣೆಯನ್ನು ಪಡೆದಿದೆ. ಅದರ ಮುವ್ವತ್ತನೇ ವಾರ್ಷಿಕ ಸಮ್ಮೇಳನವು “ಪರಂಪರೆಯ ಪ್ರತಿನಿಧಿಗಳಾಗೋಣ” ಎಂಬ ಧ್ಯೇಯ ವಾಕ್ಯದೊಂದಿಗೆ 2024 ಜನವರಿ 24 ಬುಧವಾರದಂದು ಅಡ್ಯಾರ್ ಕಣ್ಣೂರು ಶಾ ಗಾರ್ಡನ್ ಗ್ರೌಂಡಿನಲ್ಲಿ ಸಂಜೆ 4 ಘಂಟೆಗೆ ನಡೆಯಲಿದೆ.

ಸಮ್ಮೇಳನದ ಕೇಂದ್ರಬಿಂದು ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ. ಪಿ. ಉಸ್ತಾದರು ಆಗಮಿಸಲಿದ್ದಾರೆ. ಪ್ರಸ್ತುತ ಸಮ್ಮೇಳನದಲ್ಲಿ ಅಸ್ಸಯ್ಯಿದ್ ಬದ್ರುಸ್ಸಾದಾತ್ ಇಬ್ರಾಹಿಂ ಖಲೀಲ್ ಬುಖಾರಿ ಕಡಲುಂಡಿ, ಅಸ್ಸಯ್ಯಿದ್ ಕೆ. ಎಸ್. ಆಟಕೋಯ ಕುಂಬೋಳ್, ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಕೂರಾ, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ, ಕರ್ನಾಟಕದ ಸ್ಪೀಕರ್ ಸನ್ಮಾನ್ಯ ಯು. ಟಿ. ಖಾದರ್, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ವಕ್ಫ್ ಸಚಿವ ಝಮೀರ್ ಅಹ್ಮದ್, ಶಾಸಕ ವೇದವ್ಯಾಸ ಕಾಮತ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷರಾದ ಕಾವಲ್ ಕಟ್ಟೆ ಹಝ್ರತ್, ಹುಸೈನ್ ಸ‌ಅದಿ ಕೆಸಿ ರೋಡ್, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಎಸ್. ಪಿ. ಹಂಝ ಸಖಾಫಿ ಬಂಟ್ವಾಳ, ವಲವೂರ್ ಉಸ್ತಾದ್, ಅಬೂಸುಫ್ಯಾನ್ ಮದನಿ, ತೋಕೆ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ, ಜಿ. ಎಂ. ಎಂ. ಕಾಮಿಲ್ ಸಖಾಫಿ, ಯೇನಪೋಯ ಅಬ್ದುಲ್ಲ ಕುಂಞಿ, ಇನಾಯತ್ ಆಲಿ, ಸಾಮಾಜಿಕ ಹೋರಾಟಗಾರ ನಿಖಿತ್ ರಾಜ್ ಮೌರ್ಯ ಮತ್ತಿತರರು ಭಾಗವಹಿಸಲಿದ್ದಾರೆ.

ಅಂದು ಅಪರಾಹ್ನ 1 ಘಂಟೆಗೆ ಸಂಘಟನಾ ನಾಯಕರು, ಮದರಸ ಮು‌ಅಲ್ಲಿಂರು ಹಾಗೂ ಟೀಂಇಸಾಬಾ ಸದಸ್ಯರಿಂದ ಆಕರ್ಷಕ ರ‌್ಯಾಲಿ ನಡೆಯಲಿದೆ. ರ‌್ಯಾಲಿಯುದ್ದಕ್ಕೂ ವಿಧ್ಯಾರ್ಥಿಗಳಿಂದ ಆಕರ್ಷಣೀಯ ಧಪ್ ಪ್ರದರ್ಶನ ನಡೆಯಲಿದೆ. ರಾಜ್ಯದ ವಿವಿಧ ಕಡೆಗಳಿಂದ ಸ್ಕೌಟ್ ವಿಧ್ಯಾರ್ಥಿಗಳು ರ‌್ಯಾಲಿಯಲ್ಲಿ ಮೆರಗು ನೀಡಲಿದ್ದಾರೆ.

ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಎಲ್ಲಾ ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಹಾಗೂ ಹಿತೈಷಿಗಳು ಅಂದು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸಿ ಸಮ್ಮೇಳನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ಕರೆನೀಡಿದ್ದಾರೆ.

ವರದಿ : ಯೂಸುಫ್ ಸಯೀದ್ ಪುತ್ತೂರು
(ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆ)

error: Content is protected !! Not allowed copy content from janadhvani.com