ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಇದರ ಮೂವತ್ತನೇ ವಾರ್ಷಿಕ ಮಹಾ ಸಮ್ಮೇಳನವು ಜನವರಿ 24 ರಂದು ಬುಧವಾರ ನಡೆಯಲಿದ್ದು ಇದರ ಪ್ರಚಾರಾರ್ಥ ಇದೇ ಬರುವ 14 ಆದಿತ್ಯವಾರದಿಂದ 17 ರ ಬುಧವಾರ ತನಕ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 70 ಕೇಂದ್ರಗಳಲ್ಲಿ ‘ಸರ್ಕಲ್ ಪ್ರಯಾಣ’ ವು ನಡೆಯಲಿದೆ ಎಂದು ಹಾಫಿಳ್ ಯಾಕೂಬ್ ಸಅದಿ ತಿಳಿಸಿದ್ದಾರೆ.
ಜನವರಿ 14ರಂದು ಬೆಳಿಗ್ಗೆ 9ಗಂಟೆಗೆ ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಝಿಯಾರತ್ ನೊಂದಿಗೆ ಪ್ರಾರಂಭಗೊಳ್ಳಲಿದ್ದು ಅಂದು ಸಾಯಂಕಾಲ ಬಂಟ್ವಾಳ ಸರ್ಕಲ್ ನ ಮಾವಿನಕಟ್ಟೆಯಲ್ಲಿ ಸಮಾರೋಪಗೊಳ್ಳಲಿದೆ.
15 ರಂದು ಬೆಳಿಗ್ಗೆ ಅಜಿಲಮೊಗರು ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಸಂಜೆ ಬೆಳ್ಳಾರೆ ಯಲ್ಲಿ ಸಮಾರೋಪಗೊಳ್ಳಲಿದೆ.
16 ರಂದು ಬೆಳ್ಳಾರೆ ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಸಾಯಂಕಾಲ ವೇಣೂರು ಕುಂಡದಬೆಟ್ಟುವಿನಲ್ಲಿ ಸಮಾರೋಪಗೊಳ್ಳಲಿದೆ.
16 ರಂದು ಬೆಳಿಗ್ಗೆ ಕುಂಡದಬಟ್ಟು ದರ್ಗಾ ಝಿಯಾರತ್ ನೊಂದಿಗೆ ಪ್ರಾರಂಭಗೊಂಡು ಮಂಗಳೂರಿನ ವಳವೂರಿನಲ್ಲಿ ಸಮಾರೋಪಗೊಳ್ಳಲಿದೆ.
ದ. ಕನ್ನಡ ಜಿಲ್ಲೆಯ 13 ಝೋನ್ ಗಳಾದ ಮಂಗಳೂರು, ಉಳ್ಳಾಲ, ಮುಡಿಪು, ಬಂಟ್ವಾಳ, ಸುರತ್ಕಲ್, ಮೂಡುಬಿದಿರೆ, ದೇರಳಕಟ್ಟೆ, ವಿಟ್ಲ, ಪುತ್ತೂರು, ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ ಕಡಬ ಗಳ ಅಧೀನದ ಎಪ್ಪತ್ತು ಕೇಂದ್ರಗಳಲ್ಲಿ ಸರ್ಕಲ್ ಪ್ರಯಾಣ ಸಂದೇಶ ಯಾತ್ರೆ ನಡೆಯಲಿದೆ.
ಪರಂಪರೆಯ ಪ್ರತಿನಿಧಿ ಗಳಾಗೋಣ ಎಂಬ ಘೋಷವಾಕ್ಯದಡಿ ಪ್ರಚಾರ ಕಾರ್ಯ ನಡೆಯಲಿದ್ದು ಎಸ್ ವೈ ಎಸ್, ಎಸ್ ಎಸ್ ಎಫ್, ಮುಸ್ಲಿಂ ಜಮಾಅತ್ ಸಂಘಟನೆಗಳ ನಾಯಕರು ವಿವಿಧ ಕೇಂದ್ರ ಗಳಲ್ಲಿ ಮಾತನಾಡಲಿದ್ದಾರೆಂದು ಪ್ರಚಾರ ಸಮಿತಿಯ ಚೀಫ್ ಕೋಆರ್ಡಿನೇಟರ್ ಹಾಫಿಳ್ ಯಾಕೂಬ್ ಸಅದಿ ನಾವೂರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಎಂ ಪಿ ಎಂ ಅಶ್ರಫ್ ಸಅದಿ ಮಲ್ಲೂರು (ಚೇರ್ಮಾನ್ ಎಸ್ ವೈ ಎಸ್ ಪ್ರಚಾರ ಸಮಿತಿ), ಮುಹಮ್ಮದ್ ಅಲಿ ಸಖಾಫಿ ಅಶ್ ಅರಿಯ್ಯ (ಜನರಲ್ ಕನ್ವೀನರ್ ಎಸ್ ವೈ ಎಸ್ ಪ್ರಚಾರ ಸಮಿತಿ), ಅಶ್ರಫ್ ಕಿನಾರ ಮಂಗಳೂರು
(ಕಾರ್ಯದರ್ಶಿ ಮುಸ್ಲಿಂ ಜಮಾಅತ್), ಅಬ್ದುಲ್ ರಹಿಮಾನ್ ಪ್ರಿಂಟೆಕ್
(ಪ್ರ. ಕಾರ್ಯದರ್ಶಿ ಎಸ್ ವೈ ಎಸ್ ದ. ಕ ಜಿಲ್ಲೆ), ನವಾಝ್ ಸಖಾಫಿ ಅಡ್ಯಾರ್ ಪದವು
(ಎಸ್ ಎಸ್ ಎಫ್ ನಿಕಟಪೂರ್ವ ಅಧ್ಯಕ್ಷರು ದ. ಕ), ಇರ್ಷಾದ್ ಗೂಡಿನಬಳಿ (ಕೋಶಾಧಿಕಾರಿ
ಎಸ್ ಎಸ್ ಎಫ್ ದ. ಕ ಜಿಲ್ಲೆ) ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.