ಬೆಂಗಳೂರು: ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಾಹಿತ್ಯೋತ್ಸವವು ಲಾಲ್ ಬಾಗ್‌ನ ಅಲ್ ಅಮೀನ್ ಕಾಲೇಜ್ ನಲ್ಲಿ ನಡೆಯಿತು.ಧ್ವಜಾರೋಹಣ ಕ್ಕೆ ಬೆಂಗಳೂರು ಜಿಲ್ಲಾ ಎಸ್.ಜೆ ಯು ಅಧ್ಯಕ್ಷರಾದ ಜಲಾಲ್ ಉಸ್ತಾದ್,ಸಯ್ಯದ್ ಶೌಕತ್ ಅಲಿ ಸಖಾಫಿ ನೇತೃತ್ವ ನೀಡಿದರು.ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ನಈಮಿಯವರ ಅಧ್ಯಕ್ಷ ತೆಯಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು
ಖ್ಯಾತ ಚಿಂತಕರೂ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಡಾ.ಮೂಡ್ನಾಕೂಡು ಚಿನ್ನಸ್ವಾಮಿ ಉದ್ಘಾಟಿಸಿದರು.ರಾಜ್ಯ ಸಮಿತಿಯ ಕ್ಯೂಡಿ ಕಾರ್ಯದರ್ಶಿ ಎಂ.ಎಸ್.ಎಂ ಜುನೈದ್ ಸಖಾಫಿ,ದಅವಾ ಕಾರ್ಯದರ್ಶಿ ಅನ್ವರ್ ಅಸ್‌ಅದಿ,ಅಲ್ ಅಮೀನ್ ಕಾಲೇಜ್ ಇದರ ಕಾರ್ಯದರ್ಶಿಗಳಾದ ಎಂ.ಝೆಡ್ ಅಲೀ ಯವರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು.
ಸಾಹಿತ್ಯೋತ್ಸವ ಕನ್ವೀನರ್ ಅಲ್ತಾಫ್ ಅಲಿ ಸ್ವಾಗತಿಸಿ,ಎಸ್ಸೆಸ್ಸೆಫ್ ಜಿಲ್ಲಾ ಕೋಶಾಧಿಕಾರಿ ಅಖ್ತರ್ ಹುಸೈನ್ ವಂದಿಸಿದರು.
ಎಸ್.ಎಸ್.ಎ ಖಾದರ್ ಹಾಜಿ ಸ್ಕ್ವೇರ್, ಅನ್ವರ್ ಶರೀಫ್ ಸ್ಕ್ವೇರ್, ಮಖ್ದೂಮಿ ಉಸ್ತಾದ್ ಸ್ಕ್ವೇರ್,ಅತಾವುಲ್ಲಾ ಸ್ಕೇರ್ ಎಂಬ ನಾಲ್ಕು ವೇದಿಕೆಗಳಲ್ಲಿ,ನಾಲ್ಕು ವಿಭಾಗಗಳಲ್ಲಿ ,ಆರು ಭಾಷೆಗಳಲ್ಲಿ ನಡೆದ ಸ್ಪರ್ದಾ ಕಾರ್ಯಕ್ರಮದಲ್ಲಿ ಏಳು ಡಿವಿಷನ್ ಗಳಿಂದ ಸುಮಾರು ಏಳುನೂರು ಸ್ಪರ್ದಾರ್ಥಿಗಳು ಭಾಗವಹಿಸಿದ್ದು, ಜಯನಗರ ಡಿವಿಷನ್ ಅತ್ಯಂತ ಹೆಚ್ಚು ಅಂಕ ಗಳಿಸುವ ಮೂಲಕ ಚಾಂಪಿಯನ್ ಶಿಪ್ ಮುಡಿಲೇರಿಸಿತು.