ಅರಸೀಕೆರೆ: ನಗರದ ಸುನ್ನಿ ಜಾಮಿಯಾ ಮಸೀದಿಯ ಧರ್ಮ ಗುರುಗಳಾದ ಮುಫ್ತಿ ಫಹೀಂಮುದ್ದಿನ ಖಾದ್ರಿ ರವರು ಸುಮಾರು ಐದು ವರ್ಷಗಳಿಂದ ಮಸೀದಿಯಲ್ಲಿ ಸೇವೆ ಸಲ್ಲಿಸಿ ತಮ್ಮ ತಾಯಿಗೆ ಆರೋಗ್ಯ ಸಮಸ್ಯೆ ಇರುವ ಕಾರಣ ಇಂದು ತಮ್ಮ ಸ್ವಂತ ಊರಾದ ಮೂರಾದಬಾದ್ ಉತ್ತರಪ್ರದೇಶಕ್ಕೆ ಹಿಂತಿರುಗಿದರು.
ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅವರನ್ನು ರೈಲು ನಿಲ್ದಾಣಕ್ಕೆ ಬಿಡಲು ಆಗಮಿಸಿದರು, ಹಾಗೂ ಅವರ ಪತ್ನಿಯೂ ಸಹ ಮನೆಯಲ್ಲಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದರು ಆದ ಕಾರಣ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಅವರನ್ನು ಬೀಳ್ಕೊಡುಲು ಆಗಮಿಸಿದ್ದರು. ದುಃಖ ಸಹಿಸಲಾಗದೆ ಕಣ್ಣೀರು ಹಾಕಿದರು.
ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಎಂ ಸಮಿಉಲ್ಲಾ, ಮತ್ತು ಬಿಜೆಪಿಯ ಯುವ ಮುಖಂಡ ತೇಜಸ್ ಆಗಮಿಸಿ ಗುರುಗಳನ್ನು ಸನ್ಮಾನಿಸಿ ಆದಷ್ಟು ಬೇಗ ಮತ್ತೆ ನಮ್ಮ ನಗರಕ್ಕೆ ಆಗಮಿಸಬೇಕೆಂದು ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಸುನ್ನಿ ಮುಸ್ಲಿಂ ಜಮಾತ್ ಕಮೀಟಿಯ ಮಾಜಿ ಕಾರ್ಯದರ್ಶಿಗಳಾದ ರಿಯಾಜ್ ಖಾನ್ ರವರು ಮಾತನಾಡಿ ಗುರುಗಳು ನಮ್ಮ ಮಸೀದಿಯಲ್ಲಿ ಸುಮಾರು 5 ವರ್ಷಗಳಿಂದ ಒಳೆಯ ಸೇವೆಯನ್ನು ಸಲ್ಲಿಸಿ, ಎಲ್ಲರ ಜೊತೆ ಸ್ನೇಹ ಸಂಬಂಧವನ್ನು ಇಟ್ಟುಕೊಂಡು ಪ್ರೀತಿ ವಾತ್ಸಲ್ಯದಿಂದ ಇದ್ದರು ಹಾಗೂ ಇವರ ಪತ್ನಿಯು ಸಹ ಮಕ್ಕಳಿಗೆ ಮತ್ತು ಮಹಿಳೆಯರಿಗೆ ತಮ್ಮ ಮನೆಯಲ್ಲಿ ಉಚಿತ ವಿದ್ಯಾಭ್ಯಾಸ ಕೊಡುತ್ತಿದ್ದರು. ಇಂದು ಇವರು ತಮ್ಮ ಊರಿಗೆ ಹಿಂತಿರುಗುತ್ತಿರುವುದು ದುಃಖದ ವಿಷಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಗುರುಗಳನ್ನು ಸನ್ಮಾನಿಸಿದರು.