janadhvani

Kannada Online News Paper

ಅಲ್ ಮದೀನಾ ಮಂಜನಾಡಿ- ಕುವೈತ್ ಕಮಿಟಿ ವತಿಯಿಂದ 30ನೇ ವಾರ್ಷಿಕ ಪ್ರಚಾರ ಸಮ್ಮೇಳನ

ಕುವೈತ್: ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ 30ನೇ ವಾರ್ಷಿಕೋತ್ಸವದ ಪ್ರಚಾರಾರ್ಥವಾಗಿ ಕುವೈತ್ ಕಮಿಟಿ ವತಿಯಿಂದ ನಡೆಸ್ಪಟ್ಟ ಸಮಾರಂಭವು ಜನವರಿ 8ರಂದು ಅತ್ಯಂತ ಅದ್ದೂರಿಯಾಗಿ ನಡೆಯಿತು.

ಈ ಕಾರ್ಯಕ್ರಮಕ್ಕೆ ಪ್ರಮುಖ ಅಥಿತಿಗಳಾಗಿ ಮದನಿಯಂ ಲತೀಫ್ ಸಖಾಫಿ ಉಸ್ತಾದ್ ಮತ್ತು ಅಲ್ ಮದೀನಾ ಮಂಜನಾಡಿ ಇದರ ವ್ಯವಸ್ಥಾಪಕ ನಿರ್ವಾಹಕರಾದ ಅಬ್ದುಲ್ ಖಾದರ್ ಸಖಾಫಿ ಉಸ್ತಾದರು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಮಂಕಫ್ ತಂಙಳ್ ದುಆ ನೇತೃತ್ವ ವಹಿಸಿದರು. ಅಲ್ ಮದೀನಾ ಮಂಜನಾಡಿ ಕುವೈತ್ ಇದರ ಸೆಕ್ರೆಟರಿಯಾದ ಜನಾಬ್ ಮೂಸಾ ಇಬ್ರಾಹೀಂ ಸ್ವಾಗತಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು KCF ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಬಹು. ಹುಸೈನ್ ಎರ್ಮಾಡ್ ಉಸ್ತಾದ್ ಅವರು ನೆರವೇರಿಸಿದರು.

ಅಲ್ ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಚೆಯರ್ಮೆನ್ ಅಬ್ದುರ್ರಹ್ಮಾನ್ ಸಖಾಫಿ ಉಸ್ತಾದರು ಸಂದೇಶ ಭಾಷಣದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.ಮದೀನಾ ಮಂಜನಾಡಿ ಇದರ ವ್ಯವಸ್ಥಾಪಕ ನಿರ್ವಾಹಕರಾದ ಅಬ್ದುಲ್ ಖಾದರ್ ಸಖಾಫಿ ಉಸ್ತಾದರು ಶರಫುಲ್ ಉಲಮಾ ಮತ್ತು ಸಂಸ್ಥೆಯ ಕುರಿತು ವಿವರಿಸಿದರು. ಶರಫುಲ್ ಉಲಮಾ(ಖ.ಸಿ) ಉಸ್ತಾದರ ಕುರಿತ ಶಾಫಿ ಜೋಕಟ್ಟೆ ಅವರ ಹಾಡು ಮನಮೋಹಕವಾಗಿತ್ತು.

ಬಳಿಕ ಅಲ್ ನಂತರ ಅಲ್ ಮದೀನಾ ಕುವೈತ್ ಕಮಿಟಿ ಇದರ ಅಧ್ಯಕ್ಷರಾದ ಶಾಹುಲ್ ಹಮೀದ್ ಸಅದಿ ಉಸ್ತಾದರು ಅಧ್ಯಕ್ಷೀಯ ಭಾಷಣ ನಡೆಸಿದರು. ನಂತರ ಅಬ್ದುಲ್ ಲತೀಫ್ ಸಖಾಫಿ ಮದನಿಯಂ ಉಸ್ತಾದರು ಮುಖ್ಯ ಪ್ರಭಾಷಣ ಮತ್ತು ಭಕ್ತಿಪೂರ್ಣ ದುಆ ನಡೆಸಿಕೊಟ್ಟರು.

ಬಳಿಕ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಮುಖ ವ್ಯಕ್ತಿತ್ವಗಳನ್ನು ಪ್ರತ್ಯೇಕವಾಗಿ ಗೌರವಿಸಲಾಯಿತು. ಕೊನೆಯದಾಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಕೆಸಿಎಫ್, ಕಿಸ್ವಾ Dksc ಬಾಯರ್ Kkma ಎಲ್ಲಾ ಕಮಿಟಿ ನಾಯಕರಿಗೆ ಎಲ್ಲರಿಗೂ ಕನ್ವೀನರ್ ಹಸೈನಾರ್ ಮೊಂಟೆಪದವು ಅವರು ಧನ್ಯವಾದಗಳು ಅರ್ಪಿಸಿದರು.ನಂತರ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

error: Content is protected !! Not allowed copy content from janadhvani.com