ರಿಯಾದ್: ಅಪಸ್ಮಾರದಿಂದ ಬಳಲುತ್ತಿದ್ದ ಮಲಯಾಳಿಯೊಬ್ಬರು ತಮ್ಮ ಪ್ರವಾಸವನ್ನು ರದ್ದುಗೊಳಿಸಿದ ನಂತರ ರಿಯಾದ್ ವಿಮಾನ ನಿಲ್ದಾಣದಲ್ಲಿ ಹಲವಾರು ದಿನಗಳವರೆಗೆ ಸಿಲುಕಿಕೊಂಡಿದ್ದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ಟಿಕೆಟ್‌ಗಳನ್ನು ವಿನಿಮಯ ಮಾಡಿಕೊಂಡರೂ, ಯಾವುದೇ ವಿಮಾನಯಾನ ಸಂಸ್ಥೆಯು ಅವರನ್ನು ಸ್ವೀಕರಿಸಲು ಸಿದ್ಧರಿರಲಿಲ್ಲ. ಅಂತಿಮವಾಗಿ, ಸಾಮಾಜಿಕ ಕಾರ್ಯಕರ್ತರು ಮಧ್ಯಪ್ರವೇಶಿಸಿ ಎಂಟು ದಿನಗಳ ನಂತರ ಮನೆಗೆ ಕರೆತಂದಿದ್ದಾರೆ. ಎರ್ನಾಕುಲಂ ಮೂಲದ ಸಾಜು ಥಾಮಸ್ (47) ಎಂಬುವರಿಗೆ ಈ ದುರದೃಷ್ಟಕರ ಅನುಭ ಉಂಟಾಗಿದೆ.
ರಿಯಾದ್ ಸಮೀಪದ ರುವೈದಾದಲ್ಲಿ ಮನೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಇವರು ಇದೇ ತಿಂಗಳ 12ರಂದು ರಿಯಾದ್ ವಿಮಾನ ನಿಲ್ದಾಣ ತಲುಪಿದ್ದರು.ಅನಿರೀಕ್ಷಿತವಾಗಿ ಪ್ರಾಯೋಜಕರು ಎಕ್ಸಿಟ್ ವೀಸಾ ನೀಡಿ, ಕೊಚ್ಚಿಗೆ ಏರ್ ಇಂಡಿಯಾ ವಿಮಾನದಲ್ಲಿ ಟಿಕೆಟ್ ಖರೀದಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಮತ್ತು ವಲಸೆ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ವಿಮಾನದ ನಿರ್ಗಮನದ ಮುಂಚಿತವಾಗಿ ಅಪಸ್ಮಾರದ ಲಕ್ಷಣಗಳು ತೋರಿಸಲ್ಪಟ್ಟವು. ಶಾರೀರಿಕ ಅಸ್ವಸ್ಥತೆ ಗೋಚರಿಸಿದವು. ಗಾಬರಿಯ ಮಧ್ಯೆ ಹಲ್ಲು ಕಚ್ಚಿ ನಾಲಿಗೆ ಕತ್ತರಿಸಿ, ಬಾಯಿಯಲ್ಲಿ ರಕ್ತ ಕೂಡಾ ಬರಲಾರಂಭಿಸಿದವು. ತಕ್ಷಣ ಅವರನ್ನು ವಿಮಾನದಿಂದ ಹೊರಗಿಳಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಇಮಿಗ್ರೇಷನ್ ಪ್ರಕ್ರಿಯೆ ಪೂರ್ಣಗೊಂಡಿರುವ ಕಾರಣ ಅವರಿಗೆ ವಿಮಾನ ನಿಲ್ದಾಣದಿಂದ ಹೊರಬರಲು ಅವಕಾಶವಿರಲಿಲ್ಲ.
ಸಂಬಂಧಿಕರಿಗೆ ಕರೆಮಾಡಿ ಮುಂದಿನ ವಿಮಾನಕ್ಕೆ ಟಿಕೆಟ್ ವಿತರಿಸಲಾಯಿತು. ಆದರೆ ಅವರನ್ನು ಸ್ವೀಕರಿಸಲು ವಿಮಾನಯಾನ ಸಂಸ್ಥೆ ಸಿದ್ಧವಿರಲಿಲ್ಲ. ಟಿಕೆಟ್‌ಗಳನ್ನು ಮತ್ತೆ ಮತ್ತೆ ಬದಲಾಯಿಸಲಾಯಿತು. ಮತ್ತೆ ಮರುದಿನವೂ ಪ್ರಯತ್ನ ಮುಂದುವರಿಸಿದರೂ ಯಾವುದೇ ವಿಮಾನಯಾನ ಸಂಸ್ಥೆ ಸ್ವೀಕರಿಸಲು ಸಿದ್ಧವಾಗಿರಲಿಲ್ಲ.
ಅತ್ತ ಹೊರಗೆ ಹೋಗುವಂತಿಲ್ಲ, ಇತ್ತ ಪ್ರಯಾಣಿಸಲೂ ಆಗುತ್ತಿಲ್ಲ.ಟರ್ಮಿನಲ್ ಒಳಗೆಡೆ ಉಳಿದು ಪರಿಸ್ಥಿತಿ ಹದಗೆಟ್ಟಿತು. ಎಲ್ಲೋ ತಲೆ ಬಡಿದು ಬಿದ್ದು ಹಣೆ ಉಬ್ಬಿಕೊಂಡಿತು, ಕಣ್ಣುಗಳ ಮೇಲೆ ರಕ್ತ ಹೆಪ್ಪುಗಟ್ಟುವಿಕೆಯಿಂದ ರೆಪ್ಪೆಗಳು ಊದಿಕೊಂಡು ನೀಲಿ ಬಣ್ಣಕ್ಕೆ ಬದಲಾಗಿತ್ತು. ಈ ಪರಿಸ್ಥಿತಿಯನ್ನು ಕಂಡು ಸ್ವೀಕರಿಸಲು ವಿಮಾನ ಸಿಬ್ಬಂದಿಗಳು ನಿರಾಕರಿಸಿದವು. ಇದೇ ಅವಸ್ಥೆಯಲ್ಲಿ ಅವರು ನಾಲ್ಕು ದಿನಗಳವರೆಗೆ ಟರ್ಮಿನಲ್ ಒಳಗಡೆ ಕಳೆದರು.
ಸಾಮಾಜಿಕ ಕಾರ್ಯಕರ್ತರಾದ ಶಿಹಾಬ್ ಕೊಟುಕಾಡ್, ಅಲಿ ಅಲುವಾ ಮತ್ತು ಡೊಮಿನಿಕ್ ಸಾವಿಯೊ ಅವರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಧಿಕಾರಿಗಳನ್ನು ಭೇಟಿ ಮಾಡಿ ಅವರನ್ನು ಜಾಮೀನಿನ ಮೇಲೆ ಹೊರಗಡೆ ಕೊಂಡೊಯ್ದರು. ವಲಸೆ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಯಿತು.ಬಳಿಕ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡಿ ಸಿಟಿ ಸ್ಕ್ಯಾನಿಂಗ್ ಸೇರಿದಂತೆ ವಿವರವಾದ ಪರೀಕ್ಷೆಗೆ ಒಳಪಡಿಸಲಾಯಿತು. ಮಾನಸಿಕ ಅಥವಾ ದೈಹಿಕ ಸಮಸ್ಯೆಗಳಿಲ್ಲ ಎಂದು ಖಾತರಿಪಡಿಸಿದರು. ಓರ್ವ ಸಹಾಯಕನಿದ್ದರೆ ಪ್ರಯಾಣಿಸಬಹುದೆಂದು ಏರ್ಲೈನ್ಸ್ ಹೇಳತು. ಅಲಿ ಅಲುವಾ ಮತ್ತು ಡೊಮಿನಿಕ್ ಸಾವಿಯೊ ಅವರನ್ನು ನಾಲ್ಕು ದಿನಗಳ ಕಾಲ ತಮ್ಮ ಸ್ವಂತ ನಿವಾಸದಲ್ಲಿ ಪರಿಚರಿಸಿದರು. ಉತ್ತಮ ಆರೋಗ್ಯವನ್ನು ಮರಳಿ ಪಡೆದರು. ಸ್ವಯಂಪ್ರೇರಿತರಾಗಿ ಶಿಹಾಬ್ ಕೋಟುಕಾಡ್ ಅವರೊಂದಿಗೆ ಕೊಚ್ಚಿಯವರೆಗೆ ಪ್ರಯಾಣಿಸಲು ಸನ್ನದ್ಧರಾದರು.
ಭಾನುವಾರದಂದು ಅವರನ್ನು ಕೊಚ್ಚಿಗೆ ಕರೆತಂದು ಸಂಬಂಧಿಕರಿಗೆ ಒಪ್ಪಿಸಲಾಗಿದೆ. ಅವರು ಈಗ ಸಂಪೂರ್ಣ ಆರೋಗ್ಯವಂತರಾಗಿದ್ದು, ವಿಮಾನ ನಿಲ್ದಾಣದಿಂದ ತಮ್ಮ ಅಣ್ಣನೊಂದಿಗೆ ಅತ್ಯಂತ ಉತ್ಸಾಹದಿಂದ ಮನೆಗೆ ತೆರಳಿದರು ಎಂದು ಶಿಹಾಬ್ ಕೋಟುಕಾಡ್ ಹೇಳಿದರುಹ
ಶಾನವಾಝ್, ಸಲಾಂ ಪೆರುಂಬವೂರ್ ಮತ್ತು ಬಾಬಿ ಕೂಡ ಸಹಾಯಕ್ಕೆ ಇದ್ದರು. ಏರ್ ಇಂಡಿಯಾ ಮೇಲ್ವಿಚಾರಕ ಜೋಸೆಫ್ ನೆಡುಂಬಶ್ಶೇರಿ ವಿಮಾನ ನಿಲ್ದಾಣದಲ್ಲಿ ಅಗತ್ಯ ನೆರವು ನೀಡಿದರು.
ಫೋಟೋ: ಸಾಮಾಜಿಕ ಕಾರ್ಯಕರ್ತರಾದ ಶಿಹಾಬ್ ಕೊಟುಕಾಡ್, ಬಾಬಿ ಮತ್ತು ಏರ್ ಇಂಡಿಯಾ ಮೇಲ್ವಿಚಾರಕ ಜೋಸೆಫ್ ಅವರೊಂದಿಗೆ ನೆಡುಂಬಶ್ಶೇರಿಗೆ ಆಗಮಿಸಿದ ಸಾಜು ಥಾಮಸ್