ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವತಿಯಿಂದ ಇದೇ ಬರುವ 2023 ಡಿಸೆಂಬರ್ 5 ರಂದು ದಾರುಲ್ ಇರ್ಷಾದ್ ವಿದ್ಯಾಲಯ ಕೆಜಿಎನ್ ಕ್ಯಾಂಪಸ್ ಮಿತ್ತೂರಿನಲ್ಲಿ ‘ಮ್ಯಾಗ್ನೆಟ್ ಕ್ಯಾಂಪ್’ ಬೆಳಗ್ಗೆ 9.30ರಿಂದ ಅಪರಾಹ್ನ 12.30 ರವರೆಗೆ ನಡೆಯಲಿದೆ.
ಅಹ್ಲ್ ಸುನ್ನ ವಲ್ ಜಮಾಅತ್‌ನ ತತ್ವಾದರ್ಶದಂತೆ ಕಾರ್ಯಚರಿಸುತ್ತಿರುವ ಕರ್ನಾಟಕ ಮುಸ್ಲಿಂ ಜಮಾಅತ್‌ನ್ನು ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯಲ್ಲಿ ಇನ್ನಷ್ಟು ಬಲಿಷ್ಠ, ಸುಭದ್ರಗೊಳಿಸುವ ಸಲುವಾಗಿ ಜಿಲ್ಲಾ, ಝೋನ್ ಹಾಗೂ ಸರ್ಕಲ್‌ಗಳ ಮುಖ್ಯ ನಾಯಕರಿಗೆ ಸಮಗ್ರ ಮಾಹಿತಿ ಹಾಗೂ ತರಬೇತಿಯನ್ನು ನೀಡುವ ಸಲುವಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ಈಸ್ಟ್ ಜಿಲ್ಲಾ ಸಮಿತಿಯು ಈ ಕ್ಯಾಂಪನ್ನು ಆಯೋಜಿಸುತ್ತಿದೆ. ನುರಿತ ಸಂಘಟನಾ ತರಬೇತುದಾರರಿಂದ ಸಮಗ್ರ ತರಗತಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕರವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ವ್ಯಾಪ್ತಿಯ ಜಿಲ್ಲಾ ನಾಯಕರು, ಆರು ಝೋನ್‌ಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಮೂವತ್ತೈದು ಸರ್ಕಲ್‌ಗಳ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಎಂ. ಎಂ. ಕಾಮಿಲ್ ಸಖಾಫಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಯೂಸುಫ್ ಸಯೀದ್ ಪುತ್ತೂರು (ಮಾಧ್ಯಮ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್ ದ.ಕ. ಈಸ್ಟ್ ಜಿಲ್ಲೆ)