ಉತ್ತರ ಕರ್ನಾಟಕದ ಮೊದಲ ಸಮನ್ವಯ ಶಿಕ್ಷಣ ಸಂಸ್ಥೆ ಮುಈನುಸುನ್ನಾ ಇದರ ದಶಮಾನೋತ್ಸವದ ಪ್ರಚಾರಾರ್ಥ ಅಬುಧಾಬಿಯಲ್ಲಿ “ಮೊಹಬ್ಬತ್ ಎ ಜೀಲಾನಿ” ಎಂಬ ಕಾರ್ಯಕ್ರಮ ನವೆಂಬರ್ 5 ರಂದು ನಡೆಯಲಿದ್ದು ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ಸಂಸ್ಥೆಯ ಡೈರೆಕ್ಟರ್ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಇವರ ನೇತೃತ್ವದಲ್ಲಿ ಅಬೂದಾಬಿ KCF ಭವನದಲ್ಲಿ ಸೇರಿದ್ದ ಸಭೆಯಲ್ಲಿ ರಚಿಸಲಾಯಿತು.
ಅಧ್ಯಕ್ಷರಾಗಿ ರಝಾಕ್ ಹಾಜಿ ಆಯ್ಕೆಯಾದರು. ಸಂಚಾಲಕರಾಗಿ ನವಾಝ್ ಹಾಜಿ ಕೋಟೆಕಾರ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಅಬ್ದುಲ್ ಹಮೀದ್ ಸಅದಿ, ಪಿಎಂಎಚ್ ಅಬ್ದುಲ್ ಹಮೀದ್, ಇಕ್ಬಾಲ್ ಕುಂದಾಪುರ, ಬ್ರೈಟ್ ಮೊಹಮ್ಮದ್ ಅಲಿ, ಮುಹಮ್ಮದ್ ಕುಂಞಿ ಹಾಜಿ ಅಡ್ಕ, ಇಬ್ರಾಹಿಂ ಸಖಾಫಿ ಕೆದುಂಬಾಡಿಯವರನ್ನು ಆರಿಸಲಾಯಿತು.
ಉಪಾಧ್ಯಕ್ಷರಾಗಿ ಹಸೈನಾರ್ ಅಮಾನಿ ಅಜ್ಜಾವರ, ಕೆ.ಎಚ್.ಉಸ್ತಾದ್, ಅಬ್ದುಲ್ ಮುಜೀಬ್, ಹಕೀಂ ತುರ್ಕಳಿಕೆ, ಹಾಫಿಲ್ ಸಯೀದ್ ಹನೀಫಿ ಮತ್ತು ಬ್ರೈಟ್ ಇಬ್ರಾಹಿಂ ಹಾಜಿರವರನ್ನು ಆರಿಸಲಾಯಿತು.
ಕೋಶಾಧಿಕಾರಿಯಾಗಿ ಮುಹಮ್ಮದ್ ಹಸನ್ ಹಾಜಿ ಆಯ್ಕೆಯಾದರು. ಜಂಟಿ ಸಂಚಾಲಕರಾಗಿ
ಅರ್ಷದ್ ಇಂಜಿನಿಯರ್, ಕಬೀರ್ ಬಾಯಂಬಾಡಿ, ಶರೀಫ್ ಬೊಲ್ಮಾರ್, ಮತ್ತು ಇಮ್ರಾನ್ ಕೆ ಸಿ ನಗರ ಇವರನ್ನು ಆರಿಸಲಾಯಿತು.
ಮಾದ್ಯಮ ಮತ್ತು ಪ್ರಚಾರದ ಉಸ್ತುವಾರಿಯಾಗಿ ರಝಾಕ್ ಸಅದಿ ವಗ್ಗ, ಉಮರ್ ಮುಸ್ಸಫ್ಫಾ, ಸಮೀರ್ ಕುಂದಾಪುರ, ಅಶ್ರಫ್ ಮುಸ್ಲಿಯಾರ್, ಮೂಸಾ ಮದನಿ, ಅಶ್ರಫ್ ಸರಳಿಕಟ್ಟೆ, ಲತೀಫ್ ಕನ್ನಡಕ, ಹಾರಿಸ್ ಸಅದಿ ಮುರ ಹಾಗೂ ಅಮೀರ್ ಸುಹೈಲ್ ಬದಾ ಝಾಯೆದ್ ಇವರನ್ನು ಆರಿಸಲಾಯಿತು.
ಆಹಾರ ಮತ್ತು ಕಾರ್ಯಕ್ರಮದ ನಿರ್ವಹಣೆ ಉಸ್ತುವಾರಿಯಾಗಿ
ಹಮೀದ್ ಉಸ್ತಾದ್ ಕುಪ್ಪೆಟ್ಟಿ,
ಶರೀಫ್ ನಾಳ, ಅಬೂಬಕ್ಕರ್ ಕಂಬಳಬೆಟ್ಟು, ಸಾಹುಲ್ ಹಮೀದ್ ಬದಾ ಝಾಯೆದ್, ಫಾರೂಕ್ ಗಡಿಯಾರ, ಮುಸ್ತಫಾ ಕಜೆ,
ನಶ್ವಾನ್ ತುಂಬೆ, ನೌಫಲ್ ತುಂಬೆ, ಶಾಹಿದ್ ಅಬುಧಾಬಿ,
ಅಶ್ರಫ್ ಕೆ ಸಿ ನಗರ,ಹಂಝ MBZ , ಶರೀಫ್ ಕಾಜೂರು ಮತ್ತು
ಅಬ್ದುಲ್ಲ ಉಳ್ಳಾಲ ಇವರನ್ನು ಆರಿಸಲಾಯಿತು.
ಕಾರ್ಯಕ್ರಮವು ಅಬುಧಾಬಿ ನಗರದ ಐಸಿಎಫ್ ಸಭಾ ಭವನದಲ್ಲಿ ನವೆಂಬರ್ 5 ಆದಿತ್ಯವಾರದಂದು ನಡೆಯಲಿದ್ದು ಸಯ್ಯದ್ ಶಹೀರ್ ಅಲ್ ಬುಖಾರಿ ತಂಗಲ್ ಪೋಸೋಟು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಬಾಗವಹಿಸಲಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮುಈನುಸುನ್ನ ಅಬುಧಾಬಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.