ಅಕ್ಷಯ ಚಾರಿಟೇಬಲ್ ಟ್ರಸ್ಟ್ ದ.ಕ. ಜಿಲ್ಲೆ. ಇದರ ವತಿಯಿಂದ ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣಾ ಕಾರ್ಯಕ್ರಮವು ಅಕ್ಟೋಬರ್ 27 ರಂದು ಝಕರಿಯಾ ನಾರ್ಶ ಇವರ ಅಧ್ಯಕ್ಷತೆಯಲ್ಲಿ ನಾರ್ಶ ಜಂಕ್ಷನ್ ನಲ್ಲಿ ನಡೆಯಿತು.
ಫಾರೂಕ್ ಝುಹುರಿ ದುಃಅ ನೆರವೇರಿಸಿ, ಪರ್ತಿಪ್ಪಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಹಕೀಂ ಪರ್ತಿಪ್ಪಾಡಿಯವರು ಕಾರ್ಯಕ್ರಮ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಲತೀಫ್ ಪರ್ತಿಪ್ಪಾಡಿ, ಎಸ್ ವೈ ಎಸ್ ನಾಯಕರಾದ ರಫೀಕ್ ಹಾಜಿ ಕಿಸ್ವ ನಂದಾವರ, ಎಸ್ ವೈ ಎಸ್ ಬೊಳಂತೂರು ಸರ್ಕಲ್ ಕಾರ್ಯದರ್ಶಿ ಅಶ್ರಫ್ ನಾರ್ಶ, ಕೊಲ್ನಾಡು ವಲಯ ಕಾಂಗ್ರೆಸ್ ಉಪಾಧ್ಯಕ್ಷರಾದ ರಝಾಕ್ ಸುರಿಬೈಲು, ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಹಮೀದ್ ಸುರಿಬೈಲು, ಸಲೀಂ ತೋಟಲ್, ಉಪ್ಪಕುಂಞ ಕುಲ್ಯಾರ್, ಶರೀಫ್ ಕುಲ್ಯಾರ್ ,ಅನ್ಸಾರ್ ಬಾರೆಬೆಟ್ಟು ಹಾಗೂ , ಇನ್ನಿತರ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ನಾಯಕರು , ಊರಿನ ನಾಗರಿಕರು ಉಪಸ್ಥಿತರಿದ್ದರು.
ಅರ್ಹ ಫಲಾನುಭವಿಗಳಿಗೆ 90 ಕನ್ನಡಕ, 2 ವೀಲ್ ಚಯರ್ ಹಾಗೂ 1 ವಾಕರನ್ನು ವಿತರಿಸಲಾಯಿತು. ಕಾಂಗ್ರೆಸ್ ಅಸಂಘಟಿತ ಕಾರ್ಮಿಕ ಘಟಕ ಜಿಲ್ಲಾ ಅಧ್ಯಕ್ಷರಾದ ಅಬ್ಬಾಸ್ ಆಲಿ , ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಎ.ಬಿ. ಅಬ್ದುಲ್ಲಾ, ಕೊಲ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಗೌಡ, ಯೂಸುಫ್ ನಾರ್ಶ, ಹಾಗೂ ಅಶ್ರಫ್ ಪರ್ತಿಪ್ಪಾಡಿ ಇವರು ಸಹಕರಿಸಿದರು. ಇಬ್ರಾಹೀಂ ಕರೀಂ ಕದ್ಕಾರ್ ಸ್ವಾಗತಿಸಿ ವಂದಿಸಿದರು.