janadhvani

Kannada Online News Paper

ಮಂಗಳೆಯ ನೆರಳಲ್ಲಿ ಕಿರಾತಕರ ಕರಾಳತೆ: ವ್ಯವಹಾರ ನಿಷೇಧ ಫಲಿಸದು- ಕೆ.ಅಶ್ರಫ್

ಮುಸ್ಲಿಮ್ ವ್ಯಾಪರಸ್ತರೊಂದಿಗೆ ನಿಷೇಧ ಕರೆಯನ್ನು ವ್ಯವಹಾರ ಮಳಿಗೆಗೆ ವಿಸ್ತರಿಸಿ ಅಲ್ಲಿಗೆ ಭೇಟಿ ನೀಡುವ ಮುಸ್ಲಿಮ್ ಗ್ರಾಹಕರಿಗೆ ಅನ್ವಯಿಸುವ ಪ್ರಸ್ತಾಪ ಮಾಡಿ ನೋಡಲಿ

ಮಂಗಳೂರು: ಕರಾವಳಿಯ ಮಂಗಳಾ ದೇವಿ ಸ್ಥಾನಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ. 800 ವರ್ಷದ ಇತಿಹಾಸವಿರುವ ಪ್ರಾಚೀನ ಆರಾಧನಾ ಸ್ಥಳವನ್ನು ಇತ್ತೀಚೆಗೆ ಸಂಘೀ ಕಿರಾತಕರು ತಮ್ಮ ವಿದ್ವೇಶ ಸಾಧನೆಗೆ ಬಲಸಬಹುದೆಂದು ಭಾವಿಸಿದ್ದು, ಅವರ ಶ್ರಮ ಎಂದಿಗೂ ಫಲಕಾರಿಯಾಗದು ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ತಿಳಿಸಿದ್ದಾರೆ.

ಶ್ರೀ ಮಂಗಳೆಗೆ ಅದರದೇ ಆದ ಮಹತ್ವವಿದೆ. ಈ ಶೃದ್ದಾ ಕೇಂದ್ರ ಈ ನಾಡಿನ ಅನಂತ ವೈವಿದ್ಯತೆ ಮತ್ತು ಸಾಮರಸ್ಯತೆಯ ಸಂಕೇತವಾಗಿ ಉಳಿದುಕೊಂಡಿದೆ. ಶ್ರೀ ಮಂಗಳೆಯ ಊರಿನ ನಾಮಕರಣಕ್ಕೆ ಮುಸ್ಲಿಮರ ವಿಶೇಷ ಕೊಡುಗೆ ಇದೆ. ಮಂಗಳಾಪುರಮ್ ಎಂಬ ಉಚ್ಚಾರಣೆಗೆ ದಕ್ಷಿಣ ಭಾರತದ ವ್ಯಾಪಾರಿ ಮುಸ್ಲಿಮ್ ಸಮುದಾಯದ ಬಹುವಾದ ಕೊಡುಗೆ ಇದೆ.

ಇಂತಹ ಪ್ರಮುಖ ಆಸ್ತ ಕೇಂದ್ರಕ್ಕೆ ವಿವಾದವನ್ನು ಎಳೆದು ಹಾಕುವ ಸಂಘೀ ಪ್ರಯತ್ನ ಎಂದೂ ಫಲಿಸದು. ಮುಸ್ಲಿಮ್ ವ್ಯಾಪರಸ್ತರೊಂದಿಗೆ ನಿಷೇಧ ಕರೆ ನೀಡಿದ ಶರಣ್ ತನ್ನ ಕರೆಯನ್ನು ಜಿಲ್ಲೆಯ ಅಷ್ಟೂ ವ್ಯವಹಾರ ಮಳಿಗೆಗೆ ವಿಸ್ತರಿಸಿ ಅಲ್ಲಿಗೆ ಭೇಟಿ ನೀಡುವ ಮುಸ್ಲಿಮ್ ಗ್ರಾಹಕರಿಗೆ ಅನ್ವಯಿಸುವ ಪ್ರಸ್ತಾಪ ಮಾಡಿ ನೋಡಲಿ ಎಂದು ಸವಾಲು ಹಾಕಿದ್ದಾರೆ.

ವರ್ತಕರನ್ನು ಮತ್ತು ಗ್ರಾಹಕರನ್ನು ಮತೀಯ ದೃಷ್ಟಿಯಲ್ಲಿ ತಾರತಮ್ಯ ಗೊಳಿಸುವುದು ಸಾಂವಿಧಾನಿಕ ಹಕ್ಕುಗಳ ಸಂಪೂರ್ಣ ಉಲ್ಲಂಘನೆ ಆಗಿದೆ. ಜಿಲ್ಲೆಯಲ್ಲಿ ಯಾವುದೇ ಮೂಲದಿಂದಾದರೂ ಮತೀಯ ವಿದ್ವೇಶ ಉಲ್ಬಣ ಗೊಳಿಸುವ ವೈದಿಕ ಪ್ರಯತ್ನಕ್ಕೆ ನಾಂದಿ ಹಾಡಲು ಈ ವೈದಿಕೇತರ ಶರಣ್ ಅನ್ನು ಸಂಘೀ ಗಳು ಬಳಸುತ್ತಿರುವುದನ್ನು ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಅರಿಯಬೇಕಿದೆ.

ಸಂಘೀ ಶರಣನು ಸಾದ್ಯವಾದರೆ ತನ್ನ ಧ್ವಜ ಸ್ಥಾಪನೆಯನ್ನು ತಾನು ಮ್ಯಾನ್ ಪವರ್ ನಡೆಸುತ್ತಿರುವ ಮಾಲ್, ಆಸ್ಪತ್ರೆ ಸಂಸ್ಥೆಗಳಿಗೆ ವಿಸ್ತರಿಸಿ ನೋಡಲಿ.ಅಲ್ಲಿನ ನಿರ್ಧಿಷ್ಟ ಸಮುದಾಯದ ಗ್ರಾಹಕರನ್ನು ನಿಷೇಧಿಸುವ ಅಭಿಯಾನಕ್ಕೆ ನಾಂದಿ ಹಾಡಿ ಪರಿಣಾಮ ನೋಡಲಿ ಎಂದು ಕೆ.ಅಶ್ರಫ್ ( ಮಾಜಿ ಮೇಯರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com