janadhvani

Kannada Online News Paper

ಕರ್ನಾಟಕ ರಾಜ್ಯ ಸರ್ಕಾರ ಜಾತಿ ಜನಗಣತಿ ಬಿಡುಗಡೆಗೊಳಿಸಬೇಕು- ಸುನ್ನೀ ಉಲಮಾ ಬೋರ್ಡ್ ಆಗ್ರಹ

ಇದು,ಸಮಾಜದ ದುರ್ಬಲರನ್ನು ಸಬಲರಾಗಿಸಲು ದೊಡ್ಡ ಶಕ್ತಿಯಾಗಲಿದೆ

ಬೆಂಗಳೂರು: ಬಿಹಾರ ರಾಜ್ಯವು ಜಾತಿ ಜನಗಣತಿ ಬಿಡುಗಡೆ ಮಾಡುವ ಮೂಲಕ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಕರೆದಿರುವ ಸುನ್ನೀ ಉಲಮಾ ಬೋರ್ಡ್, ಕರ್ನಾಟಕ ರಾಜ್ಯ ಸರ್ಕಾರವು 2015ರಲ್ಲಿ ಮಾಡಿರುವ ಜಾತಿ ಜನಗಣತಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ.

ಜಾತಿ ಜನಗಣತಿ ಬಿಡುಗಡೆ ಮಾಡುವ ಮೂಲಕ ಸಮಾಜದ ಹಿಂದುಳಿದ ವಿಭಾಗಗಳ ಸಂಪೂರ್ಣ ಮಾಹಿತಿ ದೊರೆಯುತ್ತದೆ ಮತ್ತು ಈ ಚಿತ್ರಣವು ಸಮಾಜದ ದುರ್ಬಲರನ್ನು ಸಬಲರಾಗಿಸಲು ದೊಡ್ಡ ಶಕ್ತಿಯಾಗುತ್ತದೆ ಎಂಬ ಮಾತು ಸಭೆಯಲ್ಲಿ ಧ್ವನಿಸಿತು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷರಾದ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು, ಜಾಮಿಯಾ ಬಿಳಾಳ್ ಇಮಾಮ್ ಮುಫ್ತಿ ಜುಲ್ಫಿಕರ್ ನೂರಿ, ಸಹಿತ ಸುನ್ನೀ ಉಲಮಾ ಬೋರ್ಡ್ ಸದಸ್ಯರುಗಳು ಹಾಜರಿದ್ದರು.