janadhvani

Kannada Online News Paper

ಕೆಸಿಎಫ್ ಅಬುಧಾಬಿ ಝೋನ್: ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್ ಸಂಪನ್ನ

ಕೆಸಿಎಫ್ ಅಬುಧಾಬಿ ಪ್ರಕಾಶಿತ ‘ಉಮ್ರಾ ಆಂಡ್ ಝಿಯಾರತ್ ಆನ್ ಎಸೆನ್ಶಲ್ ಹ್ಯಾಂಡ್ ಬುಕ್’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು

ಅಬುಧಾಬಿ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಅಬುಧಾಬಿ ವತಿಯಿಂದ ‘ಜಗತ್ತಿಗೆ ಕರುಣೆಯ ಪ್ರವಾದಿ’ ಎಂಬ ಶೀರ್ಷಿಕೆಯಡಿ ಬೃಹತ್ ಮೀಲಾದ್ ಕಾನ್ಫರೆನ್ಸ್ ಇಲ್ಲಿನ ಅಬುಧಾಬಿ ಇಂಡಿಯನ್ ಇಸ್ಲಾಮಿಕ್ ಸೆಂಟರ್ ನಲ್ಲಿ ಸೆ.೨೯ ರಂದು ನಡೆಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಣ್ಣೂರು ಅಲ್ ಮಖರ್ ವಿಧ್ಯಾ ಸಮುಚ್ಚಯಗಳ ಜನರಲ್ ಮ್ಯಾನೇಜರ್ ಸಯ್ಯಿದ್ ಸುಹೈಲ್ ಸಖಾಫ್ ಮಾತನಾಡಿ “ಧಾರ್ಮಿಕ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕೆಸಿಎಫ್ ಇಹ್ಸಾನ್ ಸಂಸ್ಥೆಯ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ನಡೆಸುತ್ತಿರುವುದು ಶ್ಲಾಘನೀಯ, ಈಗಾಗಲೇ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಲ್ಲಿ ಶಿಕ್ಷಣ ಸಮುಚ್ಚಯಗಳನ್ನು ಸ್ಥಾಪಿಸಿ ಉತ್ತಮ ಶಿಕ್ಷಣ ನೀಡುತ್ತಿದ್ದು ಮುಂಬರುವ ದಿನಗಳಲ್ಲಿ ಸಂಸ್ಥೆಯ ಕಾರ್ಯಾಚರಣೆಯ ವ್ಯಾಪ್ತಿ ವಿಶಾಲಗೊಳ್ಳಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕೆದುಂಬಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಕೆಸಿಎಫ್ ಅಬುಧಾಬಿ ಪ್ರಕಾಶಿತ ‘ಉಮ್ರಾ ಆಂಡ್ ಝಿಯಾರತ್ ಆನ್ ಎಸೆನ್ಶಲ್ ಹ್ಯಾಂಡ್ ಬುಕ್’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಇಂಡಿಯನ್ ಸ್ಕೂಲ್ ಕಾರ್ಯದರ್ಶಿ ಸಿ.ಎ ಅಬ್ದುಲ್ಲಾ, ಐಸಿಎಫ್ ಸಂಘಟನಾ ನಾಯಕರಾದ ಪರಪ್ಪ ಅಬ್ದುಲ್ ಹಮೀದ್ ಸಾಹೇಬ್, ಹಂಝ ಅಹ್ಸನಿ, ಕೆಸಿಎಫ್ ಅಂತರಾಷ್ಟಿçÃಯ ಸಮಿತಿ ಸದಸ್ಯ ಪಿಎಂಹೆಚ್ ಅಬ್ದುಲ್ ಹಮೀದ್ ಈಶ್ವರಮಂಗಳ, ಸ್ವಾಗತ ಸಮಿತಿ ಅಧ್ಯಕ್ಷ ಹಕೀಂ ತುರ್ಕಳಿಕೆ, ಕನ್ವೀನರ್ ಉಮರ್ ಈಶ್ವರಮಂಗಳ, ಕೋಶಾಧಿಕಾರಿ ನಿಝಾರ್ ಕುಂಬ್ಳೆ, ಉಧ್ಯಮಿ ಮುಹಮ್ಮದ್ ಅಲಿ ವಳವೂರು, ಪೂಕೋಯ ಮಿಸ್ಬಾಹಿ ತಂಙಳ್ ಮಂಬಾಡ್, ದಾರುಲ್ ಹುದಾ ತಂಬಿನಮಕ್ಕಿ ಸಂಸ್ಥೆಯ ಮ್ಯಾನೇಜರ್ ಖಲೀಲ್ ಹಿಮಮಿ, ಸೇರಿದಂತೆ ಐಸಿಎಫ್ ಹಾಗೂ ಆರ್.ಎಸ್.ಸಿ ಸಂಘಟನಾ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕೆಸಿಎಫ್ ಅಬುಧಾಬಿ ಝೋನ್ ಅಧ್ಯಕ್ಷ ಹಸೈನಾರ್ ಅಮಾನಿ ಸ್ವಾಗತಿಸಿದರು. ಝೋನ್ ಕಾರ್ಯದರ್ಶಿ ಕಬೀರ್ ಬಾಯಂಬಾಡಿ ವಂದಿಸಿದರು

ವರದಿ: ಸಫ್ವಾನ್ ತುರ್ಕಳಿಕೆ

error: Content is protected !! Not allowed copy content from janadhvani.com