ಮದೀನಾ:ಕೆಸಿಎಫ್ ಮದೀನಾ ಝೋನ್ ಅರಾರ್ ಸೆಕ್ಟರ್ ವತಿಯಿಂದ ಮೌಲಿದ್ ಮಜ್ಲಿಸ್ ಹಾಗೂ ನೂತನ ಕಮಿಟಿ ರಚನೆಗೊಳಿಸಲಾಯಿತು. ಸಯ್ಯದ್ ಜಲಾಲುದ್ದೀನ್ ತಂಙಳ್ ಪಾತೂರು ಅವರ ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ನಡೆಯಿತು.
ಅಬೂಬಕ್ಕರ್ ದಾರಿಮಿ ಮುಕ್ವೆ ದುವಾ ನೇತೃತ್ವ ವಹಿಸಿದ್ದು, ಝಿಯಾದ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.
ಕೆಸಿಎಫ್ ಮದೀನಾ ಝೋನ್ ಅಧ್ಯಕ್ಷ ರಾದ ಹಮೀದ್ ಉಸ್ತಾದ್ ಕರಾಯ ಅವರು ಕೆಸಿಎಫ್ ಚಟುವಟಿಕೆಗಳ ಬಗ್ಗೆ ಸವಿಸ್ತಾರವಾಗಿ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಈ ವೇಳೆ ಅಲ್ ಮದೀನಾ ಮಂಜನಾಡಿ ಇದರ ಆರ್ಗನೈಸರ್ ಹೈದರಾಲಿ ನಈಮಿ , ಅಬುನಾಕ ಭದ್ರಾವತಿ, ಹಾಗೂ ಫಝಲ್ ದೇರಳಕಟ್ಟೆ ಮಾತನಾಡಿದರು.
ನೂತನ ಕಮಿಟಿ ವಿವರ
ಅಧ್ಯಕ್ಷರು : ಅಬ್ದುಲ್ ರಝಾಕ್ ಮಂಜನಾಡಿ
ಕಾರ್ಯದರ್ಶಿ : ಅಬ್ದುಲ್ ಸಲೀಂ ಬಾಯಾಂಬಾಡಿ
ಖಜಾಂಚಿ : ಅಬ್ದುಲ್ ಅಝೀಝ್ ಮಂಜೇಶ್ವರ
ಸಾಂತ್ವನ ಇಲಾಖೆ ಕಾರ್ಯದರ್ಶಿ : ನೌಷದ್ ಮೈಂದನಡ್ಕ
ಶಿಕ್ಷಣ ವಿಭಾಗ ಕಾರ್ಯದರ್ಶಿ : ಝಿಯಾದ್ ಸಖಾಫಿ
ಇಹ್ಸಾನ್ ವಿಭಾಗ ಕಾರ್ಯದರ್ಶಿ : ಜುನೈದ್ ಬಾಳೆಪುಣಿ
ಸಂಘಟನಾ ಕಾರ್ಯದರ್ಶಿ : ಅಬ್ದುಲ್ ರಹ್ಮಾನ್ ಬಾಯಾಂಬಾಡಿ
ಮದೀನಾ ಝೋನ್ ನ ನೂತನ ಅಧ್ಯಕ್ಷರಾಗಿ ಮರುಆಯ್ಕೆಯಾದ ಹಮೀದ್ ಉಸ್ತಾದ್ ಕರಾಯ ಅವರನ್ನು ಅರಾರ್ ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಬ್ದುಲ್ ರಹ್ಮಾನ್ ಬಾಯಾಂಬಾಡಿ ಸ್ವಾಗತಿಸಿ, ನೌಷದ್ ಮೈಂದನಡ್ಕ
ಧನ್ಯವಾದ ಸಮರ್ಪಿಸಿದರು.