ಕುವೈತ್ ಸಿಟಿ: ಕುವೈತ್ ನಲ್ಲಿ ವೀಸಾ ನವೀಕರಣ ಮತ್ತು ವರ್ಗಾವಣೆಗೆ ಆಂತರಿಕ ಸಚಿವಾಲಯ ಹೊಸ ಷರತ್ತುಗಳನ್ನು ವಿಧಿಸಿದೆ. ಇಂದಿನಿಂದಲೇ ಹೊಸ ಕಾನೂನು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದರೊಂದಿಗೆ, ವಿದೇಶಿಗರು ತಮ್ಮ ನಿವಾಸವನ್ನು (ಇಖಾಮ) ನವೀಕರಿಸುವ ಮೊದಲು ಮತ್ತು ತಮ್ಮ ಪ್ರಾಯೋಜಕರನ್ನು ಬದಲಾಯಿಸುವ ಮೊದಲು ವಿವಿಧ ಸಚಿವಾಲಯಗಳ ದಂಡ ಮತ್ತು ಬಾಕಿ ಉಳಿದಿರುವ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಉಪ ಪ್ರಧಾನ ಮಂತ್ರಿ ಮತ್ತು ಆಂತರಿಕ ಸಚಿವ ಶೈಖ್ ತಲಾಲ್ ಅಲ್-ಖಾಲಿದ್ ಅವರ ವಿಶೇಷ ನಿರ್ದೇಶನವನ್ನು ಅನುಸಿ ಹೊಸ ಕ್ರಮವನ್ನು ಜಾರಿಗೆ ತರಲಾಗಿದೆ.
ಈ ಹಿಂದೆ, ವಿವಿಧ ಸಚಿವಾಲಯಗಳು ಬಾಕಿ ಉಳಿದಿದ್ದರೆ ಅಥವಾ ದಂಡವನ್ನು ಹೊಂದಿದ್ದರೆ ದೇಶದಿಂದ ಹೊರಗೆ ಪ್ರಯಾಣಿಸುವ ವಿದೇಶಿಯರಿಗೆ ಪ್ರಯಾಣದ ನಿರ್ಬಂಧಗಳನ್ನು ವಿಧಿಸಿದ್ದವು. ಇದಾದ ನಂತರ ವೀಸಾ ನವೀಕರಣಕ್ಕೂ ಇದೇ ನಿಯಮವನ್ನು ಜಾರಿಗೆ ತರಲಾಗಿದೆ.