ಉಳ್ಳಾಲ: ಅನುಗ್ರಹೀತ ಕಾರುಣ್ಯದ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ರವರ ಜನ್ಮ ತಿಂಗಳ ಪ್ರಯುಕ್ತ ಸೆಪ್ಟೆಂಬರ್ 17 ರಂದು ಕಿನ್ಯದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್ ಮತ್ತು ಎಸ್ಸೆಸ್ಸೆಫ್ ಜಂಟಿ ಸಮಿತಿಗಳ ವತಿಯಿಂದ “ಹುಬ್ಬುರ್ರಸೂಲ್ ಸಮಾವೇಶ” ನಡೆಯಲಿದೆ.ಪ್ರಸ್ತುತ ಕಾರ್ಯಕ್ರಮದ ಯಶಸ್ವಿಗಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚೇರ್ಮನ್ ಆಗಿ ಪರಮಾಂಡ ಹಾಜಿ ಬಿ.ಎಂ ಇಸ್ಮಾಈಲ್, ಜನರಲ್ ಕನ್ವೀನರ್ ಕುರಿಯ ಉಸ್ಮಾನ್ ಝುಹ್ರಿ, ಇರ್ಫಾನ್ ಸಖಾಫಿ ಖುತುಬಿನಗರ ರವರನ್ನು ಕೋಶಾಧಿಕಾರಿ ಯಾಗಿ ಆಯ್ಕೆ ಮಾಡಲಾಯಿತು.
ಉಳಿದಂತೆ ನೌಫಲ್ ಸಖಾಫಿ ಮೀಂಪ್ರಿ ಉಪಾಧ್ಯಕ್ಷರಾಗಿ,ಕೆ.ಎಂ ಇಸ್ಮಾಈಲ್ ಸಾಗ್ ರವರನ್ನು ಕನ್ವೀನರ್ ಆಗಿಯೂ ಹಾಗೂ ಮೂವತ್ತೆರಡು ಮಂದಿಯನ್ನು ಸಮಿತಿ ಸದಸ್ಯರಾಗಿ ಆರಿಸಲಾಯಿತು.
ಹಾಜಿ ಬಿ.ಎಂ ಇಸ್ಮಾಈಲ್ ಪರಮಾಂಡ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಯ್ಯಿದ್ ಅಲವಿ ತಂಙಳ್ ಮೀಂಪ್ರಿ ದುಆ ನಡೆಸಿದರು.ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಉದ್ಘಾಟಿಸಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್,ಎಸ್.ವೈ.ಎಸ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಅಬ್ದುಸ್ಸಲಾಂ ಬಾಕಿಮಾರ್, ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ, ಎಸ್ಸೆಸ್ಸೆಫ್ ಕಿನ್ಯ ಸೆಕ್ಟರ್ ಅಧ್ಯಕ್ಷ ಇರ್ಫಾನ್ ಸಖಾಫಿ ಖುತುಬಿನಗರ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸ್ವಾದಿಖ್ ಕುರಿಯ, ಕೋಶಾಧಿಕಾರಿ ಜಲೀಲ್ ಖುತುಬಿನಗರ ಮುಂತಾದವರು ಉಪಸ್ಥಿತರಿದ್ದರು.