ಮರಿಕ್ಕಳ ಜುಮಾ ಮಸ್ಜಿದ್ ವತಿಯಿಂದ ಸುದೀರ್ಘ 38 ವರ್ಷಗಳ ಮರಿಕ್ಕಳ ಜಮಾಅತನ್ನು ಮುನ್ನೆಡಸಿ ಮಾದರಿಯೋಗ್ಯ ಜಮಅತನ್ನಾಗಿ ಮಾರ್ಪಡಿಸಿದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ 3ನೇ ಆಂಡ್ ನೇರ್ಚೆಯು ಅಗಸ್ಟ್ 27 ಅದಿತ್ಯವಾರ ಬೆಳಿಗ್ಗೆ 9:00 ಗಂಟೆಗೆ ಮರಿಕ್ಕಳದಲ್ಲಿ ನಡೆಯಲಿರುವುದು.
ಅಸಯ್ಯಿದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ದುಆ: ನಡೆಸಲಿರುವರು. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಉದ್ಘಾಟಿಸಲಿರುವರು.ಮೌಲಾನ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಮಾಡಲಿದ್ದಾರೆ.ಜಮಾಅತ್ ಅಧ್ಯಕ್ಷ ಅಬ್ಬಾಸ್ ಕೊಡಂಚಿಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಶ್ರಫ್ ತಂಙಳ್ ಆದೂರು,ಶಿಹಾಬುದ್ದೀನ್ ಮಶ್ಹೂರ್ ತಂಙಳ್ ತಲಕ್ಕಿ, ಝೈನುಲ್ ಆಬಿದ್ ಜಮಲುಲ್ಲೈಲ್ ತಂಙಳ್ ಕಾಜೂರು,ಶಿಹಾಬುದ್ದೀನ್ ತಂಙಳ್ ಮದಕ, ಶರಫುದ್ದೀನ್ ತಂಙಳ್ ಫರೀದ್ ನಗರ, ಡಾ ಮಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ, ಇಸ್ಮಾಯಿಲ್ ತಂಙಳ್ ಉಜಿರೆ, ಅಬ್ಬಾಸ್ ಸಖಾಫಿ ಮರಿಕ್ಕಳ, ಹುಸೈನ್ ಸಅದಿ ಕೆ.ಸಿ ರೋಡ್, ಶಾಫಿ ಸಅದಿ ಬೆಂಗಳೂರು, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಸ್ಪೀಕರ್ ಯು.ಟಿ.ಖಾದರ್, ಬಿ.ಎಂ ಫಾರೂಕ್ ,ಮೊೈದಿನ್ ಬಾವಾ, ಅಬ್ದುಲ್ ಅಝೀಝ್ ಮೈಸೂರು ಬಾವ, ರಫೀಕ್ ಸಅದಿ ದೇಲಂಪಾಡಿ, ಯು.ಟಿ.ಇಫ್ತಿಕಾರ್, ಮುಮ್ತಾಝ್ ಅಲಿ, ಇನಾಯತ್ ಅಲಿ, ಎನ್.ಎಸ್ ಕರೀಂ , ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಹಫೀಳ್ ಸಅದಿ ಕೊಡಗು, ಹಾಫಿಳ್ ಸುಫ್ಯಾನ್ ಸಖಾಫಿ ಮೊದಲಾದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ನಾಯಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಖತ್ಮುಲ್ ಖುರ್ಅನ್, ಮೌಲಿದ್ , ದ್ಸಿಕ್ರ್, ಉಪನ್ಯಾಸ , ಅನ್ನದಾನ ನಡೆಯಲಿದೆ ಎಂದು ಮರಿಕ್ಕಳ ಜಮಾಅತ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.