janadhvani

Kannada Online News Paper

ಮಾಧಕ ದೃವ್ಯ, ವ್ಯಸನಿಗಳ ನಿರ್ಮೂಲನೆಗಾಗಿ SSF ಶ್ರಮಿಸುತ್ತಿದೆ- ಅನ್ವರ್ ಅಸ್ಅದಿ

ಒಮಾನಿನಲ್ಲಿ ನಡೆದ SSF ಗೋಲ್ಡನ್ ಫಿಫ್ಟಿ G Meet ಕಾರ್ಯಕ್ರಮದಲ್ಲಿ- ಅನ್ವರ್ ಅಸ್ಅದಿ

ಸೊಹಾರ್: ಸುನ್ನೀ ಸ್ಟೂಡೆಂಟ್ ಫೆಡರೇಷನ್ ಗೋಲ್ಡನ್ ಫಿಫ್ಟಿ ಇದರ ಪ್ರಚಾರವಾಗಿ G meet ಕಾರ್ಯಕ್ರಮ ಒಮಾನಿನ ಸೊಹಾರ್ ನಲ್ಲಿ ನಡೆಯಿತು.

ಜುಮಾ ನಮಾಝಿನ ಬಳಿಕ ಸೊಹಾರ್ ರಮೀಝ್ ರೆಸಿಡೆನ್ಸಿ ಯಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಷನ್ ಇದರ ಸಹಯೋಗದಲ್ಲಿ ಸೈಯಿದ್ ಆಬಿದ್ ಅಲ್ ಹೈದ್ರೋಸಿ ಇವರ ದುಆದೊಂದಿಗೆ ನಡೆದ ಕಾರ್ಯಕ್ರಮದಲ್ಲಿ KCF ಒಮಾನ್ ರಾಷ್ಟ್ರೀಯ ಅಧ್ಯಕ್ಷರಾದ ಅಯ್ಯೂಬ್ ಕೋಡಿಯವರು ಅಧ್ಯಕ್ಷತೆ ವಹಿಸಿದರು.

ಕಾರ್ಯಕ್ರಮದಲ್ಲಿ ಸೆಪ್ಟಂಬರ್ ಹತ್ತರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯುವ SSF ಗೋಲ್ಡನ್ ಫಿಫ್ಟ್ ಇದರ ಪ್ರಚಾರಕ್ಕಾಗಿ SSF ರಾಜ್ಯ ದಅ್ ವಾ ಕಾರ್ಯದರ್ಶಿಯಾದ ಅನ್ವರ್ ಅಸ್ಅದಿ ಯವರು ಭಾಗವಹಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದೇಶದ ಅತಿ ದೊಡ್ಡ ವಿಧ್ಯಾರ್ಥಿ ಸಂಘಟನೆಯಾದ SSF ಧಾರ್ಮಿಕ ರಂಗದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ನಾವು ಭಾರತೀಯರು ಎಂಬ ಧ್ಯೇಯದೊಂದಿಗೆ ಎಲ್ಲರನ್ನು ಒಂದುಗೂಡಿಸಿ ಭವ್ಯ ಭಾರತವನ್ನು ಹೊಸ ಹೂದೋಟವಾಗಿ ಮಾರ್ಪಡಿಸಲು ಹೊರಟಿದೆ.., ರಾಜ್ಯದಲ್ಲಿ ಮಾಧಕ ದ್ರವ್ಯ ವ್ಯಸನಿಗಳು ತೊಲಗಬೇಕಿದೆ… ಯುವಕರು ದಾರಿತಪ್ಪುತ್ತಿದೆ, SSF ಇದರ ಪರಿಹಾರಕ್ಕಾಗಿ ಶ್ರಮಿಸುತ್ತಿದೆ. ಹಾಗೂ ರಾಜ್ಯದಲ್ಲಿ ನಡೆಯುವ ಕಾರ್ಯಕ್ರಮದ ಯಶಸ್ವಿಗೆ ಕರೆ ನೀಡದರು.

ನಂತರ ನಡೆದ ಒಂದು ಕಾರ್ಯಕ್ರಮದಲ್ಲಿ ಮಅದಿನ್ ಚೇರ್ಮೇನ್ ಸೈಯಿದ್ ಖಲೀಲ್ ಅಲ್ ಬುಖಾರಿಯವರು ಗೋಲ್ಡನ್ ಫಿಫ್ಟಿಯ ಪ್ರಚಾರ ಲೋಗೋವನ್ನು ಪ್ರದರ್ಶಿಸಿ ದುಆ ನಡೆಸಿದರು.

ಕಾರ್ಯಕ್ರಮದಲ್ಲಿ KCF ಅಂತರಾಷ್ಟ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿಯಾದ ಸೈಯಿದ್ ಆಬಿದ್ ಅಲ್ ಹೈದ್ರೋಸಿ, KCF ಅಂರಾಷ್ಟ್ರೀಯ ಇಹ್ಸಾನ್ ಕಾರ್ಯದರ್ಶಿ ಹಂಝ ಹಾಜಿ ಕನ್ನಂಗಾರ್, ಸೊಹಾರ್ ಝೋನ್ ಅಧ್ಯಕ್ಷರಾದ ಫಾರೂಕ್ ಕುಕ್ಕಾಜೆ, KCF ಒಮಾನ್ ಇಹ್ಸಾನ್ ಕಾರ್ಯದರ್ಶಿ ಇಕ್ಬಾಲ್ ಎರ್ಮಾಲ್, KCF ಒಮಾನ್ ಆಡಳಿತ ವಿಭಾಗದ ಅಧ್ಯಕ್ಷರಾದ ಸಿದ್ದೀಕ್ ಮಾಂಬ್ಳಿ ಸುಳ್ಯ, ಮೀಡಿಯಾ ಕಾರ್ಯದರ್ಶಿ ಕೆಎಸ್ಎಮ್ ಎಲಿಮಲೆ, ಸೊಹಾರ್ ಝೋನ್ ಕಾರ್ಯದರ್ಶಿ ಮುಬೀನ್ ಜೋೋಕಟ್ಟೆ, ಡಾ. ಅಬ್ದುಲ್ ರಝಾಕ್ ಹಾಗೂ ಕೆಸಿಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com