janadhvani

Kannada Online News Paper

ಕೆಸಿಎಫ್ ನಿಂದ ಫ್ರೀಡಂ-76 ಸ್ವಾತಂತ್ರ್ಯ ದಿನಾಚರಣೆ

ವಿವಿಧ ದೇಶಗಳಲ್ಲಿದ್ದುಕೊಂಡು ಭಾರತ ದೇಶದ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಹಾಗೂ ಅನಿವಾಸಿಗಳಿಗೆ ಸ್ವಾತಂತ್ರ್ಯ ಸಂದೇಶವನ್ನು ಕೇಳುವಂತೆ ಮಾಡಿದ ಕೆಸಿಎಫ್ ಸಂಘಟನೆಯ ಕಾರ್ಯದಲ್ಲಿ ನನಗೆ ಬಹಳ ಸಂತೋಷವಿದೆ : ಶ್ರೀ ನಿಕೇತ್ ರಾಜ್ ಮೌರ್ಯ

ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ಅಂತರಾಷ್ಟ್ರೀಯ ಸಮಿತಿಯಿಂದ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಫ್ರೀಡಂ-76 ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಾವು ಹುಟ್ಟಿ ಬೆಳೆದ ಈ ದೇಶವನ್ನು ಸ್ವಾತಂತ್ರ್ಯ ಭಾರತವನ್ನಾಗಿಸಲು ಸ್ವಾತಂತ್ರ್ಯ ಹೋರಾಟಗಾರರು ಮಾಡಿದ ತ್ಯಾಗ ಹಾಗೂ ಅವರ ಜೀವನ ರೀತಿಯನ್ನು ಬಹಳ ಸ್ಪಷ್ಟವಾಗಿ ವಿವರಿಸುವ ಮೂಲಕ “ವೈವಿಧ್ಯತೆ ಭಾರತದ ವೈಶಿಷ್ಟತೆ” ಎಂಬ ಘೋಷ ವಾಕ್ಯ ದೊಂದಿಗೆ ಝೂಮ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ನಿಕೇತ್ ರಾಜ್ ಮೌರ್ಯ ರವರು ದಿಕ್ಸೂಚಿ ಭಾಷಣ ಮಾಡಿದರು.

ಹಮೀದ್ ಸಅದಿ ಈಶ್ವರಮಂಗಳ ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆಯ ಅಧ್ಯಕ್ಷರು ಆರಂಭಿಕ ದುಆ ನೆರವೇರಿಸಿದರು. ಡಿಪಿ ಯೂಸುಫ್ ಸಖಾಫಿ ಬೈತಾರ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಸಿರಾಜುದ್ದೀನ್ ಸಖಾಫಿ ಕನ್ಯಾನ ಕರ್ನಾಟಕ ರಾಜ್ಯ SYS ದಅ್’ವಾ ಕಾರ್ಯದರ್ಶಿಯವರು ಉದ್ಘಾಟನೆ ಮಾಡಿದರು.

PMH ಹಮೀದ್ ಈಶ್ವರಮಂಗಳ ಪ್ರಧಾನ ಕಾರ್ಯದರ್ಶಿ ಅಂತರಾಷ್ಟ್ರೀಯ ಸಮಿತಿ ಇವರು ಸ್ವಾಗತ ಕೋರಿದ ಕಾರ್ಯಕ್ರಮದಲ್ಲಿ ಮುಹಮ್ಮದ್ ನೌಮಾನ್ ಕಾಟಿಪಳ್ಳ ರವರು ರಾಷ್ಟ್ರ ಗೀತೆ ಹಾಡಿದರು.

ಆಬಿದ್ ತಂಙಳ್ ಎರುಮಾಡ್, ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರು ಕೆಸಿಎಫ್ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ವಿವರಿಸಿ, ತ್ವೈಬಾ ಮದರಸ ಅಬುಧಾಬಿ ಇಲ್ಲಿನ ಪುಟಾಣಿ ಮಕ್ಕಳು ಭಾರತದ ಧ್ವಜವನ್ನು ಪ್ರದರ್ಶನ ಮಾಡಿದರು.

ಪಾರೂಕ್ ಕಾಟಿಪಳ್ಳ ರವರು ರಚಿಸಿದ ಹಾಡನ್ನು ಸುಮಧುರ ಸ್ವರದೊಂದಿಗೆ ಅಮಾನ್ ಕಾಟಿಪಳ್ಳರವರು ಹಾಡಿದರು.

ಕಲಂದರ್ ಬಾವ ಒಮಾನ್ ಹಾಗೂ ನೌಷಾದ್ ತಲಪ್ಪಾಡಿ ಯವರು ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಮಿತಿ ಫೈನಾನ್ಷಿಯಲ್‌ ಕಂಟ್ರೋಲರ್ ಅಲೀ ಮುಸ್ಲಿಯಾರ್ ರವರು ಸಮಾರೋಪ ದುಆ ನೆರವೇರಿಸಿ ಅಬ್ದುಲ್ ಸಲಾಂ ಎಣ್ಮೂರು ರವರು ಧನ್ಯವಾದ ಹೇಳಿದರು.

ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಸಮಿತಿ ನೇತಾರರು, ಸೌದಿ, ಯು ಎ ಇ, ಬಹರೈನ್, ಕತ್ತಾರ್, ಕುವೈತ್, ಒಮಾನ್, ಮಲೇಷಿಯಾ ಹಾಗೂ ಯುಕೆ ರಾಷ್ಟ್ರಗಳ ನೇತಾರರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

error: Content is protected !! Not allowed copy content from janadhvani.com