ಮಂಗಳೂರು: ಇಲ್ಲಿನ ಬಂದರ್ ಅಝೀಝುದ್ದೀನ್ ರಸ್ತೆಯಲ್ಲಿರುವ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಅಲ್ ಅಝ್ಹರಿಯಾ ದರ್ಸ್ ನ ವತಿಯಿಂದ ಭಾರತದ 77 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ದ್ವಜಾರೋಹಣ ಕಾರ್ಯಕ್ರಮವನ್ನು ಸ್ಥಳೀಯ ಕಾರ್ಪೊರೇಟರ್ ಅಬ್ದುಲ್ ಲತೀಫ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಮುದರ್ರಿಸರಾದ ಹೈದರ್ ಮದನಿ ಕರಾಯ. ಸದರ್ ಮುಅಲ್ಲಿಂ ಬಶೀರ್ ಮದನಿ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಹಾಜಿ, ರಿಯಾಝ್ ಹಾಜಿ, ಅಬೂಬಕ್ಕರ್ ಮದನಿ, ಮದ್ರಸ ಅಧ್ಯಾಪರಾದ ಯಹ್ಯಾ ಮದನಿ, ಇಸ್ಮಾಯಿಲ್ ಸಖಾಫಿ, ರಿಯಾಝ್ ಸಅದಿ, ಸುಲೈಮಾನ್ ಮುಸ್ಲಿಯಾರ್, ಜಬ್ಬಾರ್ ಹನೀಫಿ, ಲತೀಫ್ ಮದನಿ, ಎ.ಕೆ.ಮುಹಮ್ಮದ್ ಮುಸ್ಲಿಯಾರ್ ಮತ್ತು ಅಝ್ಹರಿಯಾ ದರ್ಸ್ ನಲ್ಲಿ ಕಲಿಯುವ ಮುತಅಲ್ಲಿಂ ಗಳು ಮತ್ತು ಊರಿನ ಗಣ್ಯರು ಉಪಸ್ಥಿತರಿದ್ದರು.