ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ವತಿಯಿಂದ ಮಂಗಳೂರಿನ ಪಡೀಲ್ ನಿಂದ ಅಡ್ಯಾರ್ ತನಕ ಆಗಸ್ಟ್ 9ರಂದು ನಡೆಯುವ ಆಝಾದಿ ರ‌್ಯಾಲಿ ಯನ್ನು ಯಶಸ್ವಿ ಗೊಳಿಸುವಂತೆ ಮಂಗಳೂರು ಝೋನ್ ಮುಸ್ಲಿಂ ಜಮಾಅತ್, ಎಸ್ ವೈ ಎಸ್, ಎಸ್ ಎಸ್ ಎಫ್ ಗಳನ್ನೊಳಗೊಂಡ ಕೋಆರ್ಡಿನೇಷನ್ ಸಮಿತಿ ಕರೆ ನೀಡಿದೆ.
ಅಡ್ಯಾರ್ ಕಣ್ಣೂರು ಸುನ್ನೀ ಸೆಂಟರ್ ನಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಅಧ್ಯಕ್ಷರಾದ ಹಾಫಿಳ್ ಯಾಕೂಬ್ ಸಅದಿ ನಾವೂರು ಅಧ್ಯಕ್ಷತೆ ವಹಿಸಿದ್ದರು. ಸಭೆಯ ನ್ನು ಉಸ್ಮಾನ್ ಸಖಾಫಿ ಮಾನಾಲ ಉದ್ಘಾಟಿಸಿದರು. ಮುಸ್ಲಿಂ ಜಮಾಅತ್ ಅಧ್ಯಕ್ಷ ವಿ ಎಸ್ ಮುಹಮ್ಮದ್ ಸಖಾಫಿ ವಳವೂರು, ಎಸ್ ವೈ ಎಸ್ ಅಧ್ಯಕ್ಷ ಸತ್ತಾರ್ ಸಖಾಫಿ, ಪ್ರಧಾನ ಕಾರ್ಯದರ್ಶಿ ನಝೀರ್ ಲುಲು, ಎಸ್ ಎಸ್ ಎಫ್ ನಾಯಕ ಫಯಾಝ್ ಫರಂಗಿಪೇಟೆ , ನವಾಜ್ ಸಖಾಫಿ ಅಡ್ಯಾರ್ ಪದವು, ಇಸಾಕ್ ತಂಗಲ್ ಕಣ್ಣೂರು, ಅಬ್ದುಲ್ ಹಮೀದ್ ಬೋಂದೆಲ್, ಹಸನ್ ಪಾಂಡೇಶ್ವರ, ಮುಂತಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಸ್ವಾಗತಿಸಿ ನಝೀರ್ ವಂದಿಸಿದರು.