janadhvani

Kannada Online News Paper

ಮಅದನುಲ್ ಉಲೂಂ ಮದ್ರಸ ಮಂಗಳಾಂತಿ:ವಿದ್ಯಾರ್ಥಿ ಸಂಘಟನೆ SBS ಗೆ ನವ ಸಾರಥ್ಯ

ಮಂಜನಾಡಿ: ಮಅದನುಲ್ ಉಲೂಂ ಮದ್ರಸ ಮಂಗಳಾಂತಿ ಇದರ ವಿದ್ಯಾರ್ಥಿ ಸಂಘಟನೆಯಾದ ಎಸ್. ಬಿ.ಎಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.

ಸಭೆಯಲ್ಲಿ ಮದ್ರಸದ ಸದರ್ ಮುಅಲ್ಲಿಮರಾದ ಮುಹಮ್ಮದ್ ಸಯೀದ್ ಸಅದಿ ಅಲ್ ಅಫ್ಲಲಿ ಸೆರ್ಕಳ ಅಧ್ಯಕ್ಷತೆ ವಹಿಸಿ ಪ್ರಾರ್ಥನೆಗೆ ನೇತೃತ್ವ ನೀಡಿದರು. ಧಾರ್ಮಿಕ -ಲೌಕಿಕ ಜ್ಞಾನವನ್ನು ಮೈಗೂಡಿಸುವ ವಿದ್ಯಾರ್ಥಿ ಸಮೂಹವು ಆಧುನಿಕತೆಯಿಂದ ಮೈಮರೆತ ಯುವ ಪೀಳಿಗೆಗೆ ಮಾದರಿಯಾಗಬೇಕೆಂದೂ, ಪವಿತ್ರ ಇಸ್ಲಾಮಿನ ಶಾಂತಿ ಸೌಹಾರ್ದತೆಯನ್ನು ತಮ್ಮ ಜೀವನದ ಮೂಲಕ ಸಮಾಜಕ್ಕೆ ತೋರಿಸಿ ಕೊಡಬೇಕೆಂದೂ ಅಧ್ಯಕ್ಷ ಭಾಷಣದಲ್ಲಿ ಸೂಚಿಸಿದರು.

ಅಧ್ಯಾಪಕರಾದ ಸಿದ್ದೀಖ್ ಅಹ್ಸನಿ ಅಸೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಝಾರ್ ಸಖಾಫಿ ಕಲ್ಕಟ್ಟ ಹಾಗೂ ಫಾರೂಕ್ ಹಿಮಮಿ ಕಿನ್ಯಾ ಕಾರ್ಯಕ್ರಮದಲ್ಲಿ ಶುಭಕೋರಿದರು.

ತದನಂತರ ನೂತನ ಸಮಿತಿಯನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಸಿನಾನ್ ಉಪಾಧ್ಯಕ್ಷರಾಗಿ ಸವಾನ್ ಕಾರ್ಯದರ್ಶಿ ತಾಹಿರ್, ಜೊತೆ ಕಾರ್ಯದರ್ಶಿ ನಿಯಾಫ್ ಹಾಗೂ ಕೋಶಾಧಿಕಾರಿಯಾಗಿ ಬಶಾರತ್ ರನ್ನೂ ಕಾರ್ಯಕಾರಿ ಸದಸ್ಯರುಗಳಾಗಿ ಆದಿಲ್, ಶಹೀರ್, ಅಫ್ಲಲ್, ನಜಾಫ್, ಶಾಹಿನ್, ನಿಹಾಲ್, ಫಾಝಿಲ್, ಆಶಿಖ್ ಎಂಬಿವರನ್ನು ಆರಿಸಲಾಯಿತು. ಏಳು ತಂಡಗಳಾಗಿ ನಡೆಯುವ ಸಾಹಿತ್ಯ ಸಮಾಜಕ್ಕೆ ಸಿನಾನ್, ತಾಹಿರ್, ನಿಯಾಫ್, ಆಝಿಲ್, ವಫಾ, ನುಹಾ ಹಾಗೂ ತೌಸಿಯಾ ರನ್ನು ನಾಯಕರನ್ನಾಗಿ ನೇಮಿಸಲಾಯಿತು. ಅಧ್ಯಾಪಕರಾದ ಇರ್ಷಾದ್ ರಝ್ವಿ ಕಾರ್ಯಕ್ರಮವನ್ನು ಸ್ವಾಗತಿಸಿ ಸಿನಾನ್ ವಂದಿಸಿದರು.

error: Content is protected !! Not allowed copy content from janadhvani.com