ಕಾರ್ಕಳ: ವ್ಯಾಪಕವಾಗುತ್ತಿರುವ ಮಾದಕ ಪದಾರ್ಥಗಳ ಸೇವನೆಯು ಸಮಾಜದ ಅತ್ಯಂತ ದೊಡ್ಡ ಪಿಡುಗಾಗಿ ಬದಲಾಗುತ್ತಿದೆ. ಪ್ರತಿ ಮನೆಮನೆಗಳಲ್ಲೂ ಇದರ ವಿರುದ್ಧ ಜಾಗೃತಿ ಆಗಬೇಕೆಂದು ಕಾರ್ಕಳ ಬಂಗ್ಲೆಗುಡ್ಡೆ ತೈಬಾ ಗಾರ್ಡನ್ ಇದರ ಪ್ರಾಂಶುಪಾಲರು ಅಹ್ಮದ್ ಶರೀಫ್ ಸಅದಿ ಅಲ್ ಕಾಮಿಲಿ ಜಾಗೃತಿ ಸಂದೇಶ ನೀಡಿದರು.
ಇತ್ತೀಚೆಗೆ ಕಾರ್ಕಳ ಜರಿಗುಡ್ಡೆಯ ಅಲ್ ಮದರಸತುಲ್ ಬದ್ರಿಯಾ ದಲ್ಲಿ ನಡೆದ ಮಾದಕ ಪದಾರ್ಥಗಳ ವಿರುದ್ಧ ಜನಜಾಗೃತಿ ಸಭೆಯಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು.
ಸ್ಥಳೀಯ ಖತೀಬ್ ತ್ವಯ್ಯಿಬ್ ಸಖಾಫಿ ಅಲ್ ಮಳ್ಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಲ್ ಮದರಸತುಲ್ ಬದ್ರಿಯಾ ಇದರ ಅಧ್ಯಕ್ಷರು ರಝಾಕ್ ಜರಿಗುಡ್ಡೆ ಇಬ್ರಾಹಿಂ ಹಾಜಿ ಜರಿಗುಡ್ಡೆ
ಎಸ್ ಎಸ್ ಎಫ್ ಸೆಕ್ಟರ್ ಕೋಶಾಧಿಕಾರಿ ಹಸೈನಾರ್ ಮುಂತಾದವರು ಉಪಸ್ಥಿತರಿದ್ದರು.
ಎಸ್ಎಸ್ಎಫ್ ಜರಿಗುಡ್ಡೆ ಶಾಖೆಯ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.