ಮಂಗಳೂರು :ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನರಿಂಗಾನ ಗ್ರಾಮ ಮರಿಕ್ಕಳದ ಪುಳಿತ್ತಡಿ ಪುತ್ತುಚ್ಚನವರ ಮನೆಯ ಮೇಲೆ ಮರವೊಂದು ಉರುಳಿಬಿದ್ದು, ಛಾವಣಿ ಸಹಿತ ಮನೆಗೆ ಹಾನಿ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಧಾವಿಸಿದ ಕರ್ನಾಟಕ ಮುಸ್ಲಿಮ್ ಜಮಾಅತ್ ,SYS,SSF ಮರಿಕ್ಕಳ ಯೂನಿಟ್ ಇದರ “ತುರ್ತು ಸೇವಾ ಟೀಮ್ ” ಮರವನ್ನು ಬದಿಗೆ ಸರಿಸಿ ತಕ್ಷಣದ ಪರಿಹಾರ ಕಾರ್ಯಾಚರಣೆ ನಡೆಸಿದೆ.
ಕಾರ್ಯಾಚರಣೆಯಲ್ಲಿ KMJ ,SYS, SSF ತುರ್ತು ಸೇವಾ ಟೀಮ್ ನ ಹಮೀದ್ ಹಾಜಿ ಚಂದ ಹಿತ್ತಿಲು, ಅಬ್ಬಾಸ್ ಬಶೀರ್ ಮಜಲು, ಅಝರ್, ಶಾಕಿರ್, ಮಜೀದ್ ಬರೆ, ನಾಸಿರ್ ಪಿಕ್ ಅಪ್, ಅಬ್ಬಾಸ್ ನಿಡ್ಮಾಡ್ , ಪುತ್ತಾಕ ಮೊದಲಾದವರು ಪಾಲ್ಗೊಂಡರು. ಸ್ಥಳೀಯ ಧುರೀಣ ಶ್ರೀ ರಾಮಣ್ಣ ಶೆಟ್ಟಿ ಪರಿಹಾರ ಸಾಮಗ್ರಿಗಳಿಗೆ ಸಹಾಯ ಒದಗಿಸಿದರು.