janadhvani

Kannada Online News Paper

ಸುನ್ನಿ ಕೋ ಆರ್ಡಿನೇಷನ್ ಮಂಗಳೂರು ಝೋನ್ ಸಮಿತಿ ಅಸ್ತಿತ್ವಕ್ಕೆ

ಹಾಫಿಝ್ ಯಾಕುಬ್ ಸ ಅದಿ ಅಶ್ರಫ್ ಕಿನಾರ, ಸಲೀಂ ಅಡ್ಯಾರ್ ಸಾರಥಿಗಳು

ಮಂಗಳೂರು : ಕರ್ನಾಟಕ ಮುಸ್ಲಿಂ ಜಮಾಅತ್ , ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಮಂಗಳೂರು ಝೋನ್ ನಾಯಕರನ್ನೊಳಗೊಂಡ ಸಭೆಯು ಅಡ್ಯಾರ್ ಕಣ್ಣೂರು ಸುನ್ನಿ ಸೆಂಟರ್ ನಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ಝೋನ್ ಅಧ್ಯಕ್ಷ ವಿ ಎ ಮುಹಮ್ಮದ್ ಸಖಾಫಿ ನೇತೃತ್ವದಲ್ಲಿ ನಡೆಯಿತು.

ಎಸ್ ವೈ ಎಸ್ ಝೋನ್ ಅಧ್ಯಕ್ಷ ಸತ್ತಾರ್ ಸಖಾಫಿ ಅಡ್ಯಾರ್ ಪದವು ಉದ್ಘಾಟಿಸಿದರು. ಮಂಗಳೂರು ಕೇಂದ್ರೀಕರಿಸಿ ಅಹ್ಲ್ ಸುನ್ನದ ಆಶಯ ಆದರ್ಶ ಗಳನ್ನು ಜನರಲ್ಲಿ ವಿಶ್ವಾಸ ಮೂಡಿಸಿ ನೈಜ ಇಸ್ಲಾಂ ಧರ್ಮದ ಸತ್ಯ ಸಂದೇಶವನ್ನೊಳಗೊಂಡ ನಾಡಿನ ಸೌಹಾರ್ದತೆಗೆ ಬೇಕಾಗಿ ದುಡಿಯುವ ಬಡ ನಿರ್ಗತಿಕರ ಕಣ್ಣೀರೊರೆಸುವ ಒಂದು ಸಮೂಹ ವನ್ನುಂಟು ಮಾಡಲ ಇನ್ನಷ್ಟು ಕಾರ್ಯಾಚರಣೆಗೆ ಬೇಕಾಗಿ ಮಂಗಳೂರು ಝೋನ್ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ ವೈ ಎಸ್ ಎಸ್ ಎಸ್ ಎಫ್ ನಾಯಕರನ್ನೊಳಗೊಂಡ ಸುನ್ನಿ ಕೋ ಆರ್ಡಿನೇಷನ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಅಧ್ಯಕ್ಷರಾಗಿ ಹಾಫಿಝ್ ಯಅ್ ಕೂಬ್ ಸಅದಿ ನಾವೂರು‌ , ಪ್ರಧಾನ ‌ಕಾರ್ಯರ್ಶಿಯಾಗಿ ಅಶ್ರಫ್ ಕಿನಾರ ಮಂಗಳೂರು, ಕೋಶಾಧಿಕಾರಿಯಾಗಿ ಬಿ ಎ ಅಬ್ದುಲ್ ಸಲೀಂ ಅಡ್ಯಾರ್ ಪದವು.
ಉಪಾಧ್ಯಕ್ಷ ರುಗಳಾಗಿ ವಿ ಎ ಮುಹಮ್ಮದ್ ಸಖಾಫಿ ವಳವೂರು, ಅಬ್ದುಲ್ ಸತ್ತಾರ್ ಸಖಾಫಿ ಅಡ್ಯಾರ್ ಪದವು,ಅಬ್ದುಲ್ ಹಮೀದ್ ಬೋಂದೆಲ್ , ಕಾರ್ಯದರ್ಶಿ ಗಳಾಗಿ ನಝೀರ್ ವಳವೂರು, ಅಜ್ ಮಲ್ ಕಾವೂರು,ಉನೈಸ್ ಪೇರಿಮಾರ್.

ಸದಸ್ಯರು ಗಳಾಗಿ ಕೆ ಎಚ್ ಕೆ ಅಬ್ದುಲ್ ಕರೀಂ ಕಣ್ಣೂರು, ಎ ಪಿ‌ ಇಸ್ಮಾಯಿಲ್ ಅಡ್ಯಾರ್ ಪದವು, ಬಷೀರ್ ಮದನಿ ಕುಳೂರು,ಅಶ್ರಫ್ ಪಾಳಿಲಿ ಅಮ್ಮೆಮ್ಮಾರ್,ಸಿದ್ದೀಖ್ ಕಾವೂರು,ಪಾರೂಕ್ ಅಡ್ಯಾರ್ ಪದವು,ಹಸನ್ ಪಾಂಡೇಶ್ವರ,ಸಯ್ಯಿದ್ ಇಸ್ಹಾಕ್ ತಂಞಲ್ ಕಣ್ಣೂರು,ಕೆ ಸಿ‌ ಸುಲೈಮಾನ್ ಮುಸ್ಲಿಯಾರ್,ಜಬ್ಬಾರ್ ಕಣ್ಣೂರು,ಅಬೂಬಕ್ಕರ್ ಹಾಜಿ ತುಂಬೆ,ನವಾಝ್ ಸಖಾಫಿ ಅಡ್ಯಾರ್ ಪದವು,ಮನ್ಸೂರ್ ಮದನಿ ವಳವೂರು, ಅಬ್ದುಲ್ ಖಾದರ್ ಕಣ್ಣೂರು,ಪಿ ಎ ಮುಹಮ್ಮದ್ ರಫೀಕ್ ಮದನಿ‌ಕಾಮಿಲ್,ನೌಸೀಪ್ ಕಾವೂರು, ಪಯಾಝ್ ಕೊಪ್ಪಳ,ಬದ್ರುದ್ದೀನ್ ಅಡ್ಯಾರ್ ಪದವು,ಸಿದ್ದೀಖ್ ಸಖಾಫಿ ವಳವೂರು, ಪಲುಲ್ ಪೇರಿಮಾರ್ ಮಲಿಕ್ ಜೆಪ್ಪು,ಅಬ್ಬಾಸ್ ಹಾಜಿ ಬಿಜೈ,ಅಬ್ದುಲ್‌ ಖಾದರ್ ಕಾವೂರು, ಹಮೀದ್ ಬೆಂಗರೆ, ಸುಹೈಲ್ ಮೈಲ್, ಇಕ್ಬಾಲ್ ಅಹ್ ಸನಿ ಬಜಾಲ್, ಮನ್ಸೂರ್ ಬಜಾಲ್, ಹಾರಿಸ್ ಬಜಾಲ್ ,ಕಲಂದರ್ ಪಾಂಡೇಶ್ವರ ಇವರನ್ನು ಆರಿಸಲಾಯಿತು. ಹಾಫಿಳ್
ಯಾಕುಬ್ ಸಅದಿ ಸ್ವಾಗತಿಸಿ ಅಶ್ರಫ್ ಕಿನಾರ ಮಂಗಳೂರು ವಂದಿಸಿದರು.

error: Content is protected !! Not allowed copy content from janadhvani.com