janadhvani

Kannada Online News Paper

ಮಕ್ಕಾ ತಲುಪಿದ ಕರ್ನಾಟಕದ ಪ್ರಥಮ ಹಜ್ಜ್ ತಂಡ- ಕೆಸಿಎಫ್ HVC ಯಿಂದ ಸ್ವಾಗತ

ಮಕ್ಕತುಲ್ ಮುಕರ್ರಮಃ,ಜೂ.8: ಪ್ರಸಕ್ತ (2023) ಸಾಲಿನ ಪವಿತ್ರ ಹಜ್ಜ್ ಕರ್ಮ ನಿರ್ವಹಿಸಲು ಕರ್ನಾಟಕದಿಂದ ಪ್ರಥಮ ಹಜ್ಜ್ ತಂಡವು ಮಕ್ಕಾ ನಗರಕ್ಕೆ ನಿನ್ನೆ ತಲುಪಿದೆ.

ಈ ಸಂದರ್ಭ ಯಾತ್ರಾರ್ಥಿಗಳನ್ನು ಸೌದಿ ಅರೇಬಿಯಾ ಕರ್ನಾಟಕ ಕಲ್ಚರಲ್ ಫೌಂಡೇಶನ್ KCF ಹಜ್ಜ್ ವಾಲೇಂಟೀರ್ ಕೋರ್ (HVC) ಸ್ವಯಂ ಸೇವಕರು ಅಝೀಝಿಯಾದಲ್ಲಿ ಸಿಹಿ ತಿಂಡಿ ಹಾಗೂ ಪಾನೀಯವನ್ನು ನೀಡಿ ಆತ್ಮೀಯವಾಗಿ ಸ್ವೀಕರಿಸಿಕೊಂಡರು.

ಹಾಜಿಗಳ ಲಗೇಜುಗಳನ್ನು ಅವರವರ ಕೊಠಡಿಗಳಿಗೆ ತಲುಪಿಸಲು ಹಾಗೂ ಇನ್ನಿತರ ಅಗತ್ಯ ಮಾಹಿತಿಗಳನ್ನು ನೀಡುವಲ್ಲಿ ಕೆಸಿಎಫ್ ನ ಎಲ್ಲಾ ಸ್ವಯಂ ಸೇವಕರು ಪ್ರಮುಖ ಪಾತ್ರ ವಹಿಸಿದ್ದರು.

ಕೆಸಿಎಫ್ ಹಜ್ ವಾಲೇಂಟೀರ್ ಕೋರ್ (HVC) ಬಗ್ಗೆ ಚಿತ್ರದುರ್ಗ ಜಿಲ್ಲಾ ಎಸ್ಸೆಸ್ಸೆಫ್ ಎಕ್ಸಿಕ್ಯೂಟಿವ್ ಸದಸ್ಯರಾದ ಮುಹಮ್ಮದ್ ಆಸಿಫ್ ಅವರ ಮನದಾಳದ ಮಾತು.

ವೀಡೀಯೋ ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ

error: Content is protected !! Not allowed copy content from janadhvani.com