ಮಡಿಕೇರಿ: ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸಮಿತಿ ಹಮ್ಮಿಕೊಂಡಿರುವ Initium ಜಿಲ್ಲಾ ಸೆಕ್ರೆಟರಿಯೇಟ್ ನಾಯಕರ ಕಾರ್ಯಾಗಾರ ನಾಳೆ ಮಧ್ಯಾಹ್ನ ಎರಡು ಗಂಟೆಗೆ ಕೊಡಗು ಜಿಲ್ಲೆಯ ಅಯ್ಯಂಗೇರಿಯಲ್ಲಿ ನಡೆಯಲಿದೆ.
ಎರಡು ದಿನಗಳ ಕಾಲ ನಡೆಯಲಿರುವ ಶಿಬಿರವನ್ನು ಎಸ್‌ವೈಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಡಗು ಉದ್ಘಾಟಿಸಲಿದ್ದಾರೆ.
ಎಸ್‌ವೈಎಸ್ ರಾಜ್ಯ ಕಾರ್ಯದರ್ಶಿ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ರಾಷ್ಟ್ರೀಯ ನಾಯಕರಾದ ರಾಶಿದ್ ಬುಖಾರಿ ಕೇರಳ, ಸಿಎನ್ ಜಾಫರ್ ಕಾಸರಗೋಡು ಹಾಗೂ ಅನಸ್ ಅಮಾನಿ ಪುಷ್ಪಗಿರಿ ವಿವಿಧ ವಿಷಯಗಳಲ್ಲಿ ತರಗತಿ ನಡೆಸಲಿದ್ದಾರೆ.
ಸಕಾಲಿಕವಾದ ವಿವಿಧ ವಿಷಯಗಳಲ್ಲಿ ಚರ್ಚೆಗಳು ನಡೆಯಲಿದ್ದು. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಲ್ ಹಿಕಮಿ ಅಧ್ಯಕ್ಷತೆ ವಹಿಸಲಿದ್ದಾರೆ.ಸಮಾರೋಪ ಸಮಾರಂಭವನ್ನು ಎಸ್ಸೆಸ್ಸೆಫ್ ಮಾಜಿ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಉದ್ಘಾಟನೆ ಮಾಡಲಿದ್ದು ಎಸ್ಸೆಸ್ಸೆಫ್ ಮಾಜಿ ರಾಜ್ಯ ನಾಯಕರಾದ ಯಾಕೂಬ್ ಮಾಸ್ಟರ್ ಕೊಳಕೇರಿ, ಶರೀಫ್ ಹೊಸತೋಟ, ರಫೀಕ್ ನೆಲ್ಲಿಹುದ್ಕೇರಿ, ಕೆಎಂ ಮುಸ್ತಫಾ ನಈಮಿ ಹಾವೇರಿ ಹಾಗೂ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.