ಕುವೈತ್ ಸಿಟಿ: ಕುವೈತ್ ನಲ್ಲಿ ಐದು ದಿನಗಳ ಈದ್ ಉಲ್ ಫಿತರ್ ರಜೆಯನ್ನು ಘೋಷಿಸಲಾಗಿದೆ. ಏಪ್ರಿಲ್ 21 ರ ಶುಕ್ರವಾರದಿಂದ ಏಪ್ರಿಲ್ 25 ರ ಮಂಗಳವಾರದವರೆಗೆ ರಜೆ ಇರಲಿದೆ.ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ರಜಾದಿನಗಳು ದೇಶದ ಎಲ್ಲಾ ಸಚಿವಾಲಯಗಳು, ಸರ್ಕಾರಿ ಸಂಸ್ಥೆಗಳು ಮತ್ತು ಕಚೇರಿಗಳಿಗೆ ಅನ್ವಯಿಸುತ್ತವೆ.
ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ರಜೆಯ ನಂತರ ಏಪ್ರಿಲ್ 26 ರ ಬುಧವಾರದಂದು ಪುನರಾರಂಭಗೊಳ್ಳುತ್ತವೆ. ಅದೇ ಸಮಯದಲ್ಲಿ, ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೀತಿಯಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ಸಂಸ್ಥೆಗಳ ರಜೆಯ ಬಗ್ಗೆ ಸಂಬಂಧಿತ ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕುವೈತ್ ಸುದ್ದಿ ಸಂಸ್ಥೆಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಒಮಾನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿ ಮಾರ್ಚ್ 23ರಿಂದ ರಂಜಾನ್ ಉಪವಾಸ ಆರಂಭವಾಗಿದೆ. ಹಿಜರಿ ತಿಂಗಳಾದ ರಂಜಾನ್ ನಲ್ಲಿ ಮುಸ್ಲಿಮರು ವೃತ ಆಚರಿಸಿ, ನಂತರದ ತಿಂಗಳಾದ ಶವ್ವಾಲ್‌ನ ಮೊದಲ ದಿನದಂದು ಈದುಲ್ ಫಿತರ್ ಹಬ್ಬವನ್ನು ಆಚರಿಸುತ್ತಾರೆ.