janadhvani

Kannada Online News Paper

ಕರ್ನಾಟಕ ಮುಸ್ಲಿಂ ಜಮಾತ್ ಕೇಂದ್ರ ಕಚೇರಿಯಲ್ಲಿ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ

ದಿನಾಂಕ 05/04/2023 ರಂದು ಜಿಲ್ಲಾ ಕರ್ನಾಟಕ ಮುಸ್ಲಿಂ ಜಮಾತ್ ಕೇಂದ್ರ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಅಲ್ ಹಾಜ್ ಮೊಹಮ್ಮದ್ ಶಾಹಿದ್ ರಜ್ವಿ ರವರು ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಕರ್ನಾಟಕ ಮುಸ್ಲಿಂ ಜಮಾತ್ ವತಿಂದ ನಮ್ಮ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕರ್ತರು ಉಲಮಾ ಮತ್ತು ಧಾರ್ಮಿಕ ಮುಖಂಡರ ತಂಡವು ಏಪ್ರಿಲ್ ತಿಂಗಳ 5 ನೇ ತಾರೀಖಿನ ವರೆಗೆ ರಾಜ್ಯಾದ್ಯಂತ ಮತದಾರರನ್ನು ಭೇಟಿ ಮಾಡಿ ಮತದಾನ ಜಾಗೃತಿ ಮೂಡಿಸಲಾಗುವುದು ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು ಚುನಾವಣೆ ಸಮೀಪಿಸುತ್ತಿದ್ದಂತೆ ಕೆಲವು ವ್ಯಕ್ತಿಗಳು ಮುಸ್ಲಿಂ ಸಮುದಾಯ ಮುಖಂಡರೆಂದು ಹೇಳಿಕೊಂಡು ಸಮುದಾಯದಲ್ಲಿ ಗೊಂದಲ ಸೃಷ್ಟಿ ಮಾಡಿ ವದಂತಿಗಳನ್ನು ಹಬ್ಬಿಸುತಿದ್ದು ಇಂತಹ ನಕಲಿ ವ್ಯಕ್ತಿಗಳ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಮುದಾಯ ಮುಖಂಡರೊಂದಿಗೆ ಜಾಗೃತಿ ವಹಿಸಲು ಸಲಹೆ ನೀಡಿದರು.

ಮುಸ್ಲಿಂ ಸಮುದಾಯವು ಯಾವುದೇ ಪ್ರತ್ಯೇಕ ಪಕ್ಷಕ್ಕಾಗಲಿ ಅಥವಾ ಪ್ರತ್ಯೇಕ ಅಬ್ಯಾರ್ಥಿಗಾಗಲಿ ಚುನಾವಣೆ ಮೂಲಕ ಬೆಂಬಲಿಸುವುದಿಲ್ಲ ಅಥವಾ ಬಹಿರಂಗವಾಗಿ ಪ್ರಚಾರ ಮಾಡುವುದೇ ಆಗಲಿ ಸಮುದಾಯದ ಶಿಸ್ತು ಪಾಲನೆಗೆ ವಿರುದ್ಧವಾಗಿದೆ ಸಮುದಾಯದ ಏಳಿಗೆಗಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಶ್ರಮಿಸುವ ಹಾಗು ಅಲ್ಪಸಂಖ್ಯಾತರ ಭಾವನೆಗಳಿಗೆ ಗೌರವಿಸುವ ಒಳ್ಳೆಯ ಮನೋಭಾವ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ತೆಯ ರಾಜ್ಯ ಸದಸ್ಯರಾದ ಯೂಸುಫ್ ಹಾಜಿ ಜಿಲ್ಲಾ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ತಾಲೂಕು ಅಧ್ಯಕ್ಷರಾದ ಮೊಹಮದ್ ಆರಿಫ್ ಅಲಿ ಖಾನ್, ಇನ್ನಿತರೆ ಧಾರ್ಮಿಕ ಮುಖಂಡರು, ಉಲೇಮಾ ಗಳು ಉಮಾರಗಳು ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com