janadhvani

Kannada Online News Paper

ಎಸ್ ವೈ ಎಸ್ ಜಯನಗರ ಝೋನ್ ಸಮಿತಿ ವತಿಯಿಂದ ರಂಜಾನ್ ಕಿಟ್ ವಿತರಣೆ

ಎಸ್ ವೈ ಎಸ್ ಬೆಂಗಳೂರು ಜಿಲ್ಲಾ ಸಮಿತಿಯ ಅಧೀನದಲ್ಲಿ ಜಿಲ್ಲೆಯ ವಿವಿಧೆಡೆ ಪವಿತ್ರ ರಂಜಾನ್ ಮಾಸದಲ್ಲಿ ಬಡವರಿಗೆ ಆಹಾರ ಕಿಟ್ ವಿತರಿಸುವ ಯೋಜನೆ ಯ ಅಂಗವಾಗಿ ಎಸ್ ವೈಎಸ್ ಜಯನಗರ ಝೋನ್ ವ್ಯಾಪ್ತಿಯ ಎಲ್ಲಾ ಘಟಕಗಳಲ್ಲಿ ಆಹಾರದ ಕಿಟ್ ವಿತರಿಸಲಾಯಿತು.

ಬಿಟಿಎಂ ಲೇಔಟ್,ಅರಿಕರೆ, ಬಿಸ್ಮಿಲ್ಲಾನಗರ, ಯಾರಬ್ಬ್ ನಗರ, ಮಡಿವಾಳ,ಜೆ.ಪಿ.ನಗರ ಯೂನಿಟ್ ಗಳಲ್ಲಿ ಕಿಟ್ ಗಳನ್ನು ಅರ್ಹರಿಗೆ ತಲುಪಿಸಿಕೊಡಲಾಯಿತು. ವಿತರಣಾ ಕಾರ್ಯದಲ್ಲಿ ಎಸ್‌ವೈಎಸ್‌, ಎಸ್‌ಎಸ್‌ಎಫ್ ಮುಖಂಡರು ಭಾಗವಹಿಸಿದ್ದರು.

ಕಿಟ್ ವ್ಯವಸ್ಥೆ ಮಾಡಲು ಹಾಗೂ ವಿತರಿಸಲು ಸಹಕರಿಸಿದ ಎಲ್ಲರಿಗೂ ಜಯನಗರ ಝೋನ್ ಸಮಿತಿ ವತಿಯಿಂದ ದುಆ ಮಾಡಿ,ಅಭಿನಂದನೆ ಸಲ್ಲಿಸಲಾಯಿತು.