janadhvani

Kannada Online News Paper

ಕನ್ಯಾನ: ಜಲಾಲಿಯ್ಯ ರಾತೀಬ್ ಮತ್ತು ಅಜ್ಮೀರ್ ಮೌಲಿದ್ ಫೆಬ್ರವರಿ 25 ರಂದು

ಶೈಖುನಾ ಕನ್ಯಾನ ಉಸ್ತಾದರ ಶಿಷ್ಯಂದಿರ ಸಂಘಟನೆ ಜಂಇಯ್ಯತು ತ್ತರ್ಬಿಯತಿಲ್ ಅನ್ಸಾರಿಯ್ಯ ಇದರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಜಲಾಲಿಯ್ಯ ರಾತೀಬ್ ಮಜ್ಲಿಸ್ ಇದೇ ಬರುವ ದಿನಾಂಕ 25 ಶನಿವಾರ ಕನ್ಯಾನ ರಹ್ಮಾನಿಯ್ಯ ಜುಮಾ ಮಸೀದಿಯಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿದೆ.

ಉಡುಪಿ ಚಿಕ್ಕಮಗಳೂರು ಖಾಝಿ ಶೈಖುನಾ ಮಾಣಿ ಉಸ್ತಾದರ ನೇತೃತ್ವ ದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ರವರ ನೇತೃತ್ವದಲ್ಲಿ ಜಲಾಲಿಯ ರಾತೀಬ್ ನಡೆಯಲಿದೆ.ಸಮಾರೋಪ ದುಆ ಕಾರ್ಯಕ್ರಮಕ್ಕೆ ಅಸ್ಸಯ್ಯಿದ್ ಮುಹಮ್ಮದ್ ಶಹೀರ್ ತಂಙಳ್ ಮಳ್ಹರ್ ಪೊಸೋಟ್ ನೇತೃತ್ವ ನೀಡಲಿದ್ದಾರೆ.

ಶೈಖುನಾ ಕನ್ಯಾನ ಇಬ್ರಾಹೀಂ ಫೈಝಿ ಉಸ್ತಾದರ ವಿಶೇಷ ಮುತುವರ್ಜಿಯಿಂದ ನಡೆಯುವ ಈ ಬೃಹತ್ ಆಧ್ಯಾತ್ಮಿಕ ಸಂಗಮ ದಲ್ಲಿ ಊರ ಪರವೂರ ಸಾವಿರಾರು ಮಂದಿ ಭಾಗವಹಿಸುತ್ತಾರೆ.
ವಿಶೇಷ ಆಧ್ಯಾತ್ಮಿಕ ಹುರುಪು ಮಾನಸಿಕ ಶಾಂತಿಯು ಈ ಮಜ್ಲಿಸ್ ನಲ್ಲಿ ದೊರೆಯುತ್ತದೆ.
ಆದ್ದರಿಂದಲೇ ಪ್ರಸ್ತುತ ಮಜ್ಲಿಸ್ ನಲ್ಲಿ ಒಮ್ಮೆ ಭಾಗವಹಿಸಿದವರು ನಿರಂತರ ಭಾಗವಹಿಸಲು ಆಶಿಸುತ್ತಾರೆ.